ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: 25 ಕಲಾವಿದರಿಗೆ ವಾರ್ಷಿಕ, 7 ಮಂದಿಗೆ ದತ್ತಿನಿಧಿ ಪ್ರಶಸ್ತಿ
ಕರ್ನಾಟಕ ನಾಟಕ ಅಕಾಡೆಮಿಯು 2026-27ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿನಿಧಿ ಪುರಸ್ಕಾರಗಳನ್ನು ಗುರುವಾರ ಪ್ರಕಟಿ ಸಿದೆ. ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿರುವ ದೀರ್ಘ ಕಾಲದ ಸೇವೆ ಗುರುತಿಸಿ ಹಿರಿಯ ನಟ ಡಾ.ಮುಖ್ಯ ಮಂತ್ರಿ ಚಂದ್ರು ಅವರಿಗೆ ಜೀವಮಾನ ಸಾಧನೆ ಗೌರವ ಪ್ರಶಸ್ತಿ ಘೋಷಿಸಲಾಗಿದೆ.
-
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2026-27ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿನಿಧಿ ಪುರಸ್ಕಾರಗಳನ್ನು ಗುರುವಾರ ಪ್ರಕಟಿ ಸಿದೆ. ರಂಗ ಭೂಮಿ ಕ್ಷೇತ್ರಕ್ಕೆ ಸಲ್ಲಿಸಿರುವ ದೀರ್ಘ ಕಾಲದ ಸೇವೆ ಗುರುತಿಸಿ ಹಿರಿಯ ನಟ ಡಾ.ಮುಖ್ಯ ಮಂತ್ರಿ ಚಂದ್ರು ಅವರಿಗೆ ಜೀವಮಾನ ಸಾಧನೆ ಗೌರವ ಪ್ರಶಸ್ತಿ ಘೋಷಿಸಲಾಗಿದೆ.
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಅಭಿನಯದ ಮೂಲಕ ಗಮನ ಸೆಳೆದಿರುವ ಮುಖ್ಯಮಂತ್ರಿ ಚಂದ್ರು ಅವರು ರಂಗಭೂಮಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.
25 ಸಾಧಕರಿಗೆ ವಾರ್ಷಿಕ ಪ್ರಶಸ್ತಿ: ರಾಜ್ಯದ ವಿವಿಧ ಜಿಲ್ಲೆಗಳಿಂದ ರಂಗಭೂಮಿ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ 25 ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ (ಧಾರವಾಡ), ರಮೇಶ ತಿಪ್ಪಣ್ಣ ಚಿತ್ರಗಾರ (ಬಾಗಲಕೋಟೆ), ಶಿವಾನಂದ ತಗಡೂರು (ಬೆಂಗಳೂರು), ಆರ್. ರಾಮಕೃಷ್ಣ (ದೇವನಹಳ್ಳಿ), ಅನುಸೂಯ ರೇವಣಸಿದ್ದಯ್ಯ ಹೊಸೂರುಮಠ (ಲಕ್ಕುಂಡಿ), ಅಯ್ಯಣ್ಣ ಸ್ವಾಮಿ ಹಿರೇಮಠ (ಕಲಬುರಗಿ) ಸೇರಿದಂತೆ ಒಟ್ಟು 25 ಜನರಿಗೆ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.
ಏಳು ಮಂದಿಗೆ ದತ್ತಿನಿಧಿ ಪುರಸ್ಕಾರ: ಎಸ್.ವಿ.ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರಗೆ ಬಿ.ಜಿ. ಶ್ರೀಧರ್, ಇ.ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರಗೆ ಅಶಾಕ್ ಹುಸೇನ್ ಹಾ. ಜಾಗೀರದಾರ್, ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರಗೆ ಡಾ. ಎಂ. ಚಂದ್ರಪ್ಪ, ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರಗೆ ದಯಾನಂದ ಚ ಬೆಳಗಿ, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಗೆ ಗಂಗಾಧರ ರೆಡ್ಡಿ ಬಿ.ಆರ್. ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರಗೆ ವೈ.ಎನ್.ಶಿವಣ್ಣ , ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರಗೆ ಚಂದ್ರಮ್ಮ ಅವರು ದತ್ತಿನಿಧಿ ಪುರಸ್ಕಾರ ಲಭಿಸಿದೆ. ರಂಗಭೂಮಿ ಕ್ಷೇತ್ರದ ಹಿರಿಯ ಹಾಗೂ ಪ್ರತಿಭಾವಂತ ಕಲಾವಿದರ ಸೇವೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರತಿವರ್ಷ ಈ ಪ್ರಶಸ್ತಿಗಳನ್ನು ನೀಡುತ್ತಿದೆ ಎಂದು ನಾಟಕ ಅಕಾಡಮಿ ತಿಳಿಸಿದೆ.