New Year 2026: ಹೊಸ ವರ್ಷಾಚರಣೆಗೆ ಮೆಟ್ರೋ, ಬಿಎಂಟಿಸಿ ಕೊಡುಗೆ; ತಡರಾತ್ರಿಯವರೆಗೂ ಸೇವೆ
ಹೊಸ ವರ್ಷದ ಹಿನ್ನೆಲೆ ಇಂದು ರಾತ್ರಿ ಹಾಗೂ ಜನವರಿ 1ರಂದು ಮೆಟ್ರೋ ವಿಶೇಷ ವೇಳಾಪಟ್ಟಿ ಜಾರಿಯಲ್ಲಿರಲಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯವನ್ನ ತಡರಾತ್ರಿವರೆಗೆ ವಿಸ್ತರಣೆ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಜನಸಂದಣಿ ಹೆಚ್ಚಾಗುವ ಹಿನ್ನೆಲೆ, ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಕೊನೆಯ ರೈಲು ಸಮಯವನ್ನು ವಿಸ್ತರಿಸಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ -
ಬೆಂಗಳೂರು, ಡಿ.31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಈ ವರ್ಷವೂ ಹೊಸ ವರ್ಷವನ್ನು (New Year 2026) ಅದ್ಧೂರಿಯಾಗಿ ಸ್ವಾಗತಿಸಲು ಭರ್ಜರಿ ತಯಾರಿ ನಡೆದಿದೆ. ಮಧ್ಯರಾತ್ರಿವರೆಗೂ ಸಂಭ್ರಮಿಸುವ ಬೆಂಗಳೂರಿಗರ ಸುರಕ್ಷತೆ ಸಂಚಾರಕ್ಕಾಗಿ ನಮ್ಮ ಮೆಟ್ರೋ (Namma Mtero), ಬಿಎಂಟಿಸಿ (BMTC) ತನ್ನ ಸೇವೆ ಸಮಯ ಮತ್ತು ಮಾರ್ಗಗಳನ್ನ ವಿಸ್ತರಿಸಿದ್ದು, ತಡರಾತ್ರಿವರೆಗೂ ಜನರ ಅನುಕೂಲಕ್ಕಾಗಿ ಈ ಎರಡು ಸಂಚಾರ ನಾಡಿಗಳು ಸೇವೆ ನೀಡಲಿವೆ.
ಹೊಸ ವರ್ಷದ ಹಿನ್ನೆಲೆ ಇಂದು ರಾತ್ರಿ ಹಾಗೂ ಜನವರಿ 1ರಂದು ಮೆಟ್ರೋ ವಿಶೇಷ ವೇಳಾಪಟ್ಟಿ ಜಾರಿಯಲ್ಲಿರಲಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯವನ್ನ ತಡರಾತ್ರಿವರೆಗೆ ವಿಸ್ತರಣೆ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಜನಸಂದಣಿ ಹೆಚ್ಚಾಗುವ ಹಿನ್ನೆಲೆ, ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಕೊನೆಯ ರೈಲು ಸಮಯವನ್ನು ವಿಸ್ತರಿಸಲಾಗಿದೆ.
ಎಲ್ಲಿವರೆಗೆ ಸಮಯ ವಿಸ್ತರಣೆ? ಎಲ್ಲೆಲ್ಲಿಗೆ?
ನೇರಳೆ ಮಾರ್ಗ:
ಬೈಯಪ್ಪನಹಳ್ಳಿ-ಕೆಂಗೇರಿ ಮಾರ್ಗ: 1:45ರವರೆಗೆ
ಕೆಂಗೇರಿ- ಬೈಯಪ್ಪನಹಳ್ಳಿ ಮಾರ್ಗ: ರಾತ್ರಿ 2ರವರೆಗೆ
ಹಸಿರು ಮಾರ್ಗ:
ಮೆಜೆಸ್ಟಿಕ್ – ಮಾದಾವರ: ರಾತ್ರಿ 2ರವರೆಗೆ
ಮಾದಾವರ – ಮೆಜೆಸ್ಟಿಕ್: ರಾತ್ರಿ 2ರವರೆಗೆ
ಹಳದಿ ಮಾರ್ಗ:
ಆರ್‌ವಿ ರಸ್ತೆ – ಬೊಮ್ಮಸಂದ್ರ ಮಾರ್ಗ: ರಾತ್ರಿ 3:10ರವರೆಗೆ
ಬೊಮ್ಮಸಂದ್ರ – ಆರ್‌ವಿ ರಸ್ತೆ: 1:30ರವರೆಗೆ
ಮೆಜೆಸ್ಟಿಕ್ ಕೇಂದ್ರದಲ್ಲಿ ಎಲ್ಲಾ ಮಾರ್ಗಗಳ ಕೊನೆಯ ರೈಲು ರಾತ್ರಿ 2:45ಕ್ಕೆ ಇರಲಿದೆ.
ಇಂದು ರಾತ್ರಿ 11 ಗಂಟೆಯಿಂದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ, ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲು ಸಂಚಾರ ಮಾಡಲಿದೆ. ಹೆಚ್ಚಿನ ಜನಸಂದಣಿ ಹಿನ್ನೆಲೆಯಲ್ಲಿ (ಡಿಸೆಂಬರ್ 31ರ ರಾತ್ರಿ) ಎಂಜಿ ರೋಡ್ ಮೆಟ್ರೋ ನಿಲ್ದಾಣವನ್ನು ರಾತ್ರಿ 10 ಗಂಟೆಯಿಂದ ಎಂಟ್ರಿ ಹಾಗೂ ಎಕ್ಸಿಟ್ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಆದರೆ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳು ಕಾರ್ಯನಿರ್ವಹಿಸಲಿದ್ದು, ಎಂಜಿ ರೋಡ್‌ಗೆ ಬರುವವರು ಈ ಎರಡು ನಿಲ್ದಾಣಗಳಲ್ಲಿ ಹೋಗಿ ಮೆಟ್ರೋ ಸಂಚಾರ ಮಾಡಬೇಕಿದೆ.
New Year 2026: ಹೊಸ ವರ್ಷಾಚರಣೆ ಬಿಗಿ, ರಾಜಧಾನಿಯ ಈ ರಸ್ತೆಗಳಲ್ಲಿ ಸಂಚಾರ ಬಂದ್
ಜೊತೆಗೆ ಭದ್ರತಾ ಕಾರಣದಿಂದ ಇಂದು ರಾತ್ರಿ 11 ಗಂಟೆಯ ನಂತರ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ವಿತರಣೆ ಕೂಡ ಬಂದ್ ಮಾಡಲಾಗುತ್ತದೆ. ಈ ಸಮಯದಲ್ಲಿ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲೂ ಕೌಂಟರ್ ಕ್ಲೋಸ್ ಆಗಲಿದ್ದು, ಪ್ರಯಾಣಿಕರು ಕ್ಯೂಆರ್ ಕೋಡ್ ಅಥವಾ ಡಿಜಿಟಲ್ ಟಿಕೆಟ್ ಬಳಸಿ ಪ್ರಯಾಣಿಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ನಾಳೆ ಬೆಳಗ್ಗೆ 11:30ರವರೆಗೆ ವಿಶೇಷ ಮೆಟ್ರೋ ಸೇವೆ ಲಭ್ಯವಿರಲಿದೆ. ಹೊಸ ವರ್ಷದ ಸಂಭ್ರಮವನ್ನು ಸುರಕ್ಷಿತವಾಗಿ ಆಚರಿಸಿ, ಮೆಟ್ರೋ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ಕರೆ ನೀಡಿದೆ.
ಇನ್ನು ಬಿಎಂಟಿಸಿ ಕೂಡ ಪ್ರಯಾಣಿಕರ ಅನುಕೂಲಕ್ಕಾಗಿ, ಇಂದು ತಡರಾತ್ರಿವರೆಗೂ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆಗೆ ಮುಂದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆ/ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ರಾತ್ರಿ 11 ಗಂಟೆಯ ನಂತರ ತಡರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಓಡಾಟ ಮಾಡಲಿದೆ.
ಪೊಲೀಸ್ ಇಲಾಖೆ ಎಂಜಿ ರೋಡ್ ಸುತ್ತಮುತ್ತ ಸಂಚೃ ನಿರ್ಬಂಧ, ಪಾರ್ಕಿಂಗ್ ನಿರ್ಬಂಧ ಸೇರಿದಂತೆ ಹಲವು ಗೈಡ್ ಲೈನ್ಸ್ ನೀಡಿದೆ. ಜನತೆಯ ಸುರಕ್ಷತೆಗಾಗಿ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಜನ ನಗರದ ಹಲವೆಡೆ ಸೇರುವ ಸಾಧ್ಯತೆ ಇದೆ.