Kartavya App: ಅಧಿಕಾರಿಗಳಿಗೆ ರಾತ್ರಿ ಹಾಜರಿ ಕಡ್ಡಾಯ
ಸರಕಾರಿ ಅಭಿವೃದ್ಧಿ ಕೆಲಸಗಳು ಹಾಗೂ ಸಾರ್ವಜನಿಕ ಸೇವೆಗಳು ಜನ ಸಾಮಾನ್ಯರಿಗೆ ತಲುಪಬೇಕಾದರೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷೇತ್ರ (ಕೇಂದ್ರಸ್ಥಾನ)ದಲ್ಲಿಯೇ ನೆಲೆಸಿರಬೇಕು. ಈ ನಿಟ್ಟಿನಲ್ಲಿ ಸರಕಾರಿ ನೌಕರರು ಕಡ್ಡಾಯವಾಗಿ ನಿಯೋಜಿತ ಕೇಂದ್ರಸ್ಥಾನದ ವಾಸವಿರುವುದನ್ನು ಖಾತ್ರಿಪಡಿಸಿಕೊಳ್ಳಲು, ರಾಜ್ಯ ಸರಕಾರ ಜಿಯೋ-ಫೆನ್ಸಿಂಗ್ ತಂತ್ರಜ್ಞಾನ ಆಧಾರಿತ ‘ಕರ್ತವ್ಯ’ App ಮೂಲಕ ರಾತ್ರಿ ವೇಳೆ ಹಾಜರಾತಿ ದಾಖಲಿಸುವುದನ್ನು ಕಡ್ಡಾಯ ಗೊಳಿಸಿದೆ.
-
ಬೆಂಗಳೂರು: ಸರಕಾರಿ ಅಭಿವೃದ್ಧಿ ಕೆಲಸಗಳು ಹಾಗೂ ಸಾರ್ವಜನಿಕ ಸೇವೆಗಳು ಜನ ಸಾಮಾನ್ಯರಿಗೆ ತಲುಪಬೇಕಾದರೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷೇತ್ರ (ಕೇಂದ್ರಸ್ಥಾನ)ದಲ್ಲಿಯೇ ನೆಲೆಸಿರಬೇಕು. ಈ ನಿಟ್ಟಿನಲ್ಲಿ ಸರಕಾರಿ ನೌಕರರು ಕಡ್ಡಾಯವಾಗಿ ನಿಯೋಜಿತ ಕೇಂದ್ರಸ್ಥಾನದ ವಾಸವಿರುವುದನ್ನು ಖಾತ್ರಿಪಡಿಸಿಕೊಳ್ಳಲು, ರಾಜ್ಯ ಸರಕಾರ ಜಿಯೋ-ಫೆನ್ಸಿಂಗ್ ತಂತ್ರಜ್ಞಾನ ಆಧಾರಿತ ‘ಕರ್ತವ್ಯ’ App(Kartavya App) ಮೂಲಕ ರಾತ್ರಿ ವೇಳೆ ಹಾಜರಾತಿ ದಾಖಲಿಸುವುದನ್ನು ಕಡ್ಡಾಯ ಗೊಳಿಸಿದೆ.
ಈ ಸಂಬಂಧ ಮೊದಲ ಹಂತವಾಗಿ, 2026ನೇ ನವೆಂಬರ್ 01ರಿಂದ ಜಾರಿಗೆ ಬರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ವೈದ್ಯರಿಗೆ ಈ ರಾತ್ರಿ ಹಾಜರಾತಿಯನ್ನು ಕಡ್ಡಾಯ ಗೊಳಿಸಲಾಗಿದೆ.
ಪ್ರತಿದಿನ ರಾತ್ರಿ 9 ಗಂಟೆಯ ನಂತರ, ವೈದ್ಯರು ತಮ್ಮ ಕೇಂದ್ರಸ್ಥಾನವಿರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ವ್ಯಾಪ್ತಿಯೊಳಗಿದ್ದುಕೊಂಡೇ ‘ಕರ್ತವ್ಯ’ ಆಪ್ ಮೂಲಕ ಹಾಜರಾತಿಯನ್ನು ನಮೂದಿಸಬೇಕು.
ಯಾರಿಗೆ ವಿನಾಯಿತಿ?: ಮಂಜೂರಾದ ರಜೆಯಲ್ಲಿರುವವರು, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕೇಂದ್ರಸ್ಥಾನದಿಂದ ಹೊರಗೆ ಅಧಿಕೃತ ಕರ್ತವ್ಯದಲ್ಲಿರುವವವರು ಮತ್ತು ಕೇಂದ್ರಸ್ಥಾನ ಬಿಡಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿರುವ ಅಧಿಕಾರಿ, ಸಿಬ್ಬಂದಿಗೆ ವಿನಾಯಿತಿ ಇರುತ್ತದೆ. ಈ ಸಂಬಂದ ರಜೆ ಅಥವಾ ಅನುಮತಿ ಬಗ್ಗೆ ಕಾರಣಗಳನ್ನು ಆಪ್ನಲ್ಲಿ ಸ್ಪಷ್ಟವಾಗಿ ದಾಖಲಿಸಬೇಕಾಗುತ್ತದೆ. ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿ ತಿಂಗಳು ರಾತ್ರಿ ಹಾಜರಾತಿ ವರದಿಗಳನ್ನು ಕಡ್ಡಾಯವಾಗಿ ಪರಿಶೀಲಿಸಲಿದ್ದಾರೆ.
ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನದಲ್ಲಿ ವಾಸವಿರದ ಅಧಿಕಾರಿಗಳ ವಿರುದ್ಧ ನಾಗರಿಕ ಸೇವಾ ನಿಯಮಗಳಡಿ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಲಾಗುತ್ತದೆ. ಮುಂದೆ ಸರ್ಕಾರದ ಇತರ ಇಲಾಖೆಗಳಿಗೂ ‘ಕರ್ತವ್ಯ’ ಆಪ್ ಹಾಜರಾತಿ ವಿಸ್ತರಿಸಲಾಗುತ್ತದೆ.
ಜನರಿಂದ ಬಂದ ದೂರೇ ಈ ಕ್ರಮಕ್ಕೆ ಕಾರಣ
ವೈದ್ಯರು ಹಾಗೂ ಅಧಿಕಾರಿಗಳು ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲಿ ವಾಸಿ ಸದೇ ದೂರದ ಊರುಗಳಲ್ಲಿ ವಾಸಿಸುತ್ತಿರುವುದ ರಿಂದ ಸಾರ್ವಜನಿಕರ ಕೆಲಸಕ್ಕೆ ಸಮಸ್ಯೆಯಾಗು ತ್ತಿದೆ ಎನ್ನುವ ದೂರುಗಳು ಕೇಳಿ ಬಂದಿತ್ತು. ಆದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಗುತ್ತಿಗೆ ನೌಕರರಿಗೂ App ಹಾಜರಾತಿ
ರಾಜ್ಯದ ವಿವಿಧ ಇಲಾಖೆಗಳು, ಮಂಡಳಿ ಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಸರಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ಜ.1ರಿಂದ ಕರ್ತವ್ಯ App ಹಾಜರಾತಿ ಕಡ್ಡಾಯ.