ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವ ಜನತೆಗೆ ಅವಕಾಶ; ಅಡಿಗಾಸ್‌ ಸಂಸ್ಥೆಯಿಂದ ವಿಶೇಷ ತರಬೇತಿ!

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್ ಯಾತ್ರಾ ಸಂಸ್ಥೆ ಇದೀಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವ ಯುವ ಪ್ರತಿಭೆಗಳಿಗೆ ಸುವರ್ಣಾವಕಾಶ ಕಲ್ಪಿಸಿದೆ. ಯಾವುದೇ ಪದವಿ ಹೊಂದಿದವರು, ಪ್ರವಾಸೋದ್ಯಮದಲ್ಲಿ ಆಸಕ್ತಿಯುಳ್ಳವರು ಹಾಗೂ ಪ್ರೆಶರ್ಸ್‌ ಈ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಡಿಗಾಸ್‌ ಸಂಸ್ಥೆಯಿಂದ ಯುವ ಜನತೆಗೆ ಅವಕಾಶ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 26, 2026 2:32 PM

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್ ಯಾತ್ರಾ ಸಂಸ್ಥೆ ಇದೀಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವ ಯುವ ಪ್ರತಿಭೆಗಳಿಗೆ ಸುವರ್ಣಾವಕಾಶ ಕಲ್ಪಿಸಿದೆ. ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಗೆ "Destination Management Expert" ಹೆಸರಿನಡಿ ಭಾರತದಾದ್ಯಂತ ಹಾಗೂ ಪ್ರಪಂಚದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ 3 ತಿಂಗಳ ಅವಧಿಯಲ್ಲಿ ವಿಶೇಷ ತರಬೇತಿ ಅವಕಾಶ ರೂಪಿಸಿದೆ.

ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಸ್ಟೈಪೆಂಡ್ ಹಾಗೂ ಇನ್ಸೆಂಟಿವ್‌ (incentive) ಕೊಡಲಾಗುತ್ತದೆ. ಭೂತಾನ್, ನೇಪಾಳ, ಸಿಂಗಾಪುರ, ಮಲೇಷಿಯಾ, ಥೈಲ್ಯಾಂಡ್, ಜಪಾನ್, ದಕ್ಷಿಣ ಆಫ್ರಿಕಾ, ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಡೋನೇಶಿಯ, ವಿಯೆಟ್ನಾಂ ಇತ್ಯಾದಿ ದೇಶಗಳಲ್ಲಿ ಸಂಪೂರ್ಣ ತರಬೇತಿ ಕೊಡಲಾಗುತ್ತದೆ.

Adigas Yatra: ಅಡಿಗಾಸ್‌ ಯಾತ್ರಾದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಕುರಿತ ಮಾಹಿತಿ ಇಲ್ಲಿದೆ

ಯಾವುದೇ ಪದವಿ ಹೊಂದಿದವರು, ಪ್ರವಾಸೋದ್ಯಮದಲ್ಲಿ ಆಸಕ್ತಿಯುಳ್ಳವರು ಹಾಗೂ ಪ್ರೆಶರ್ಸ್‌ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಆಸಕ್ತರು ತಮ್ಮ ವೈಯಕ್ತಿಕ ವಿವರ ಒಳಗೊಂಡ ಅರ್ಜಿಗಳನ್ನು [email protected] ಕಳುಹಿಸಹುದು ಅಥವಾ ಈ ವಾಟ್ಸ್‌ ಆಪ್‌ ನಂಬರಿಗೆ 9611600810 ಕಳಿಸಬಹುದು.