ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉದ್ಯಾನಗಳ ಶೇ.5 ಜಾಗ ಅನ್ಯ ಉದ್ದೇಶಕೆ ಬಳಸಲು ವಿರೋಧ: ವಿಧೇಯಕ ಹಿಂಪಡೆಯಲು ನಿರ್ಧಾರ, ಶೀಘ್ರ ತಿದ್ದುಪಡಿ ಮಂಡನೆ

ಬೆಂಗಳೂರಿನಲ್ಲಿರುವ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸುವ ವಿಧೇಯಕಕ್ಕೆ ಜನರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಈ ಬೆನ್ನಲ್ಲೇ ರಾಜ್ಯ ಸರಕಾರ ವಿಧೇಯಕವನ್ನು ಹಿಂಪಡೆದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಉದ್ಯಾನಗಳ ಶೇ.5 ಜಾಗ ಅನ್ಯ ಉದ್ದೇಶಕೆ ಬಳಸಲು ವಿರೋಧ

-

Profile
Ashok Nayak Sep 4, 2026 8:43 AM

ಬೆಂಗಳೂರು: ಬೆಂಗಳೂರಿನಲ್ಲಿರುವ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸುವ ವಿಧೇಯಕಕ್ಕೆ ಜನರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಈ ಬೆನ್ನಲ್ಲೇ ರಾಜ್ಯ ಸರಕಾರ ವಿಧೇಯಕವನ್ನು ಹಿಂಪಡೆದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ವಿಧೇಯಕದ ಸಾಧಕ- ಬಾಧಕವನ್ನು ಸಾರ್ವಜನಿಕ ವಲಯದಲ್ಲಿ ಚರ್ಚಿಸಿ, ತಿದ್ದುಪಡಿ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.

ಸರಕಾರದ ಈ ತೀರ್ಮಾನವನ್ನು ಬಿಜೆಪಿ ತನ್ನ ಹೋರಾಟದ ಫಲವೆನ್ನುತ್ತಿದ್ದು, ಸಾರ್ವಜನಿಕರು ಹಾಗೂ ಪರಿಸರ ತಜ್ಞರು ಸರಕಾರದ ನಡೆಯನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿ: G Parameshwar: ಬಾಬಾಸಾಹೇಬರ ದೂರದೃಷ್ಟಿಯ ಚಿಂತನೆಗಳು ದೇಶದ ಪ್ರಗತಿಗೆ ಬುನಾದಿ: ಡಿಸಿಎಂ ಡಾ.ಜಿ.ಪರಮೇಶ್ವರ

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ(DCM Dr G Parameshwar), ಸಾರ್ವ ಜನಿಕರ ಹಿತಾಸಕ್ತಿ ಮತ್ತು ಅಭಿಪ್ರಾಯಕ್ಕೆ ಸರಕಾರ ಬದ್ಧವಾಗಿರುತ್ತದೆ. ಉದ್ಯಾನವನಗಳ ತಿದ್ದುಪಡಿ ವಿಧೇಯಕದ ಬಗ್ಗೆ ಸಾರ್ವಜನಿಕರಿಂದ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾ ಗಿತ್ತು. ಈ ಹಿನ್ನೆಲೆ ಯಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ, ಸದ್ಯಕ್ಕೆ ಈ ವಿಧೇಯಕವನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಹಿಂದೆ ಸದನ ದಲ್ಲಿ ಈ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಬಿಟ್ಟಿರಲಿಲ್ಲ. ವಿಧೇಯಕಕ್ಕೆ ಉಭಯ ಸದನದಲ್ಲಿ ಅನುಮೋದನೆ ನೀಡಲಾಗಿತ್ತು.

ಏನಿದು ವಿವಾದ?

ಬೆಂಗಳೂರಿನಲ್ಲಿರುವ ಸರಕಾರಿ ಪಾರ್ಕ್‌ನ ಶೇ.5ರಷ್ಟು ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಕಳೆದ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗಿತ್ತು. ಈ ವಿಧೇಯಕದ ವಿರುದ್ಧ ಬಿಜೆಪಿ, ಜೆಡಿಎಸ್‌ನಿಂದ ರಾಜ್ಯಪಾಲರಿಗೆ ಅಧಿಕೃತ ದೂರು ಸಲ್ಲಿಕೆ ಯಾಗಿತ್ತು. ಈ ಎಲ್ಲ ಬೆಳವಣಿಗೆ ಗಳ ಹಿನ್ನೆಲೆಯಲ್ಲಿ ಸರಕಾರವು ವಿಧೇಯಕವನ್ನು ವಾಪಸ್ ಪಡೆದು, ಸಾರ್ವಜನಿಕರ ಅಭಿಪ್ರಾಯ ವನ್ನು ಸಂಗ್ರಹಿಸಿದ ಬಳಿಕ ಅಗತ್ಯ ಬದಲಾವಣೆಗಳನ್ನು ಮಾಡಿ ಹೊಸದಾಗಿ ಮಂಡಿಸಲು ಮುಂದಾಗಿದೆ. ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಸರಕಾರ ಮುಂದಾಗಿದೆ.

image

ಪಾರ್ಕ್ ಉಳಿಸಿ, ಬೆಂಗಳೂರು ರಕ್ಷಿಸಿ ಎಂಬ ಅಭಿಯಾನ ಮಾಡುವುದಾಗಿ ಬಿಜೆಪಿ ವತಿಯಿಂದ ಘೋಷಣೆ ಮಾಡಲಾಗಿತ್ತು. ಈಗ ರಾಜ್ಯ ಕಾಂಗ್ರೆಸ್ ಸರಕಾರ ಉದ್ಯಾನಗಳಲ್ಲಿ ಶೇ.5ರಷ್ಟು ಭೂಮಿ ಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿದೆ. ಈ ಮೂಲಕ, ಒಂದೇ ತಿಂಗಳಲ್ಲಿ ಬಿಜೆಪಿಗೆ ಎರಡು ಜಯ ಸಿಕ್ಕಿದೆ.

-ಆರ್.ಅಶೋಕ್, ಪ್ರತಿಪಕ್ಷ ನಾಯಕ