ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ಸೂಚಿಸಲಾಗಿರುವ ಜಿಎಲ್‌ಪಿ-1 ಔಷಧ ಓಝೆಂಪಿಕ್® ಈಗ ಭಾರತದಲ್ಲಿ ಲಭ್ಯ

ಭಾರತದಲ್ಲಿ ಬಹಳ ನಿರ್ಣಾಯಕ ಸಂದರ್ಭದಲ್ಲಿ ಓಝೆಂಪಿಕ್® ಬಿಡುಗಡೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ 2023-24 ಅಂದಾಜಿನ ಪ್ರಕಾರ, ಭಾರತದಲ್ಲಿ 101 ಮಿಲಿಯನ್ (ಸುಮಾರು ಶೇ.11.4 ಜನ ಸಂಖ್ಯೆ) ಜನರಿಗೆ ಮಧುಮೇಹ ಇದೆ. ಭಾರತವು ಚೀನಾದ ನಂತರ ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಮಧುಮೇಹ ಪೀಡಿತ ದೇಶ ಎಂಬ ಹೆಸರು ಗಳಿಸಿದೆ.

ಜಿಎಲ್‌ಪಿ-1  ಔಷಧ ಓಝೆಂಪಿಕ್® ಈಗ ಭಾರತದಲ್ಲಿ ಲಭ್ಯ

-

Ashok Nayak
Ashok Nayak Dec 12, 2025 3:12 PM

ಓಝೆಂಪಿಕ್®, ಸೆಮಾಗ್ಲುಟೈಡ್‌ನ ವಾರಕ್ಕೊಮ್ಮೆ ತೆಗೆದುಕೊಳ್ಳುವ ಚುಚ್ಚುಮದ್ದಾಗಿದ್ದು, ಭಾರತದಲ್ಲಿ ಟೈಪ್ 2 ಮಧುಮೇಹ ಇರುವ ವಯಸ್ಕರ ಚಿಕಿತ್ಸೆಯಲ್ಲಿ ಮೊದಲ ಆಯ್ಕೆಯಾಗಿ ಅನುಮೋದನೆಗೊಳಪಟ್ಟಿದೆ. ಆಹಾರ ನಿಯಂತ್ರಣ ಮತ್ತು ವ್ಯಾಯಾಮದ ಜೊತೆಗೆ ಇದನ್ನು ಬಳಸಲು ಸೂಚಿಸಲಾಗುತ್ತದೆ.

ಬೆಂಗಳೂರು: ಜಾಗತಿಕ ಮಟ್ಟದ ಹೆಲ್ತ್ ಕೇರ್ ಕಂಪನಿ ಆಗಿರುವ ನೋವೋ ನಾರ್ಡಿಸ್ಕ್, ಇಂದು ಭಾರತದಲ್ಲಿ ಓಝೆಂಪಿಕ್® (ಚುಚ್ಚುಮದ್ದು ರೂಪದ ಸೆಮಾಗ್ಲುಟೈಡ್) ಅನ್ನು ಬಿಡುಗಡೆ ಮಾಡಿದೆ. ಓಝೆಂಪಿಕ್® ವಾರಕ್ಕೊಮ್ಮೆ ಬಳಸುವ ಜಿಎಲ್‌ಪಿ-1 ಆರ್‌ಎ (ರಿಸೆಪ್ಟರ್ ಅಗೋನಿಸ್ಟ್) ಆಗಿದ್ದು, ನಿಯಂತ್ರಣಕ್ಕೆ ಬಾರದ ಟೈಪ್ 2 ಮಧುಮೇಹ (ಟಿ2ಡಿಎಂ) ಹೊಂದಿರುವ ವಯಸ್ಕರಿಗೆ ಆಹಾರ ಮತ್ತು ವ್ಯಾಯಾಮದ ಜೊತೆ ಇದನ್ನು ಸೂಚಿಸಲಾಗುತ್ತದೆ.

ಭಾರತದಲ್ಲಿ ಬಹಳ ನಿರ್ಣಾಯಕ ಸಂದರ್ಭದಲ್ಲಿ ಓಝೆಂಪಿಕ್® ಬಿಡುಗಡೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ 2023-24 ಅಂದಾಜಿನ ಪ್ರಕಾರ, ಭಾರತದಲ್ಲಿ 101 ಮಿಲಿಯನ್ (ಸುಮಾರು ಶೇ.11.4 ಜನಸಂಖ್ಯೆ) ಜನರಿಗೆ ಮಧುಮೇಹ ಇದೆ. ಭಾರತವು ಚೀನಾದ ನಂತರ ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಮಧುಮೇಹ ಪೀಡಿತ ದೇಶ ಎಂಬ ಹೆಸರು ಗಳಿಸಿದೆ. ಇದಲ್ಲದೆ 136 ಮಿಲಿಯನ್ ಜನರಿಗೆ ಪ್ರೀ-ಡಯಾಬಿಟೀಸ್ ಮತ್ತು 254 ಮಿಲಿಯನ್ ಜನರಿಗೆ ಸ್ಥೂಲಕಾಯತೆ ಸಮಸ್ಯೆ ಇದೆ. ಇದೆಲ್ಲವೂ ತೀವ್ರಗೊಳ್ಳುತ್ತಿರುವ ಆರೋಗ್ಯ ಸಮಸ್ಯೆನ್ನು ಸೂಚಿಸುತ್ತದೆ. ಇದಕ್ಕೆ ಪರಿಣಾಮಕಾರಿ, ವೈಜ್ಞಾನಿಕ ವಾಗಿ ಸಾಬೀತಾದ ಚಿಕಿತ್ಸೆಗಳ ಅಗತ್ಯವಿದೆ.

ಓಝೆಂಪಿಕ್® ನ ವೈದ್ಯಕೀಯ ಪ್ರಯೋಜನಗಳು:

  • ಎಚ್‌ಬಿಎ1ಸಿ ಅನ್ನು ಉತ್ತಮವಾಗಿ ಕಡಿಮೆ ಮಾಡುತ್ತದೆ ಮತ್ತು ತೂಕ ಇಳಿಕೆಗೆ ನೆರವಾಗುತ್ತದೆ, ಒಟ್ಟಾರೆ ಚಯಾಪಚಯ ಆರೋಗ್ಯಕ್ಕೆ ಸಹಾಯಕವಾಗಿದೆ
  • ಎಚ್‌ಬಿಎ1ಸಿ ≥7% ಇರುವ ವಯಸ್ಕರಿಗೆ ಸೂಕ್ತವಾಗಿದೆ, ಹೃದಯ ಸಮಸ್ಯೆ ಅಪಾಯ ಹೆಚ್ಚಿರು ವವರಿಗೂ ಮತ್ತು ಈಗಾಗ್ಲೇ ಹೃದ್ರೋಗ ಇರುವವರಿಗೂ ಸೂಕ್ತವಾಗಿದೆ.
  • ದೀರ್ಘಕಾಲದ ಟೈಪ್ 2 ಮಧುಮೇಹ ಇರುವವರಲ್ಲಿ ಹೃದ್ರೋಗ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಮೂತ್ರಪಿಂಡದ ದೀರ್ಘಕಾಲಿಕ ಕಾಯಿಲೆಯ ಬೆಳವಣಿಗೆಯನ್ನು ತಡೆಯುತ್ತದೆ, ದೀರ್ಘಾವಧಿ ಆರೋಗ್ಯ ಪಾಲನೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Prakash Shesharaghavachar Column: ಜನರ ಜೀವಕ್ಕೆ ಕಿಂಚಿತ್ತೂ ಬೆಲೆ ಇಲ್ಲವಾಗಿದೆ

ಈ ಕುರಿತು ಮಾತನಾಡಿರುವ ನೋವೋ ನಾರ್ಡಿಸ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಕ್ರಾಂತ್ ಶ್ರೋತ್ರಿಯಾ ಅವರು, “ಓಝೆಂಪಿಕ್® ಅನ್ನು ಭಾರತಕ್ಕೆ ತರಲು ಸಾಧ್ಯವಾದದ್ದು ನಮಗೆ ದೊಡ್ಡ ಮೈಲುಗಲ್ಲಾಗಿದೆ. ಜಾಗತಿಕ ಮಟ್ಟದ ವಿಶ್ವಾಸಾರ್ಹತೆ, ಸಾಬೀತಾದ ಕ್ಲಿನಿಕಲ್ ಕ್ಷಮತೆ, ವಿಶ್ವದರ್ಜೆಯ ಗುಣಮಟ್ಟ ಮತ್ತು ಬಲಿಷ್ಠ ಸರಬರಾಜು ವ್ಯವಸ್ಥೆ ಹೊಂದಿರುವ ಓಝೆಂಪಿಕ್® ಭಾರತೀಯ ವೈದ್ಯರಿಗೆ ಪರಿಣಾಮಕಾರಿ ಚಿಕಿತ್ಸಾ ಆಯ್ಕೆಯನ್ನು ನೀಡುತ್ತದೆ.

ಉತ್ತಮ ರಕ್ತದ ಸಕ್ಕರೆ ನಿಯಂತ್ರಣ, ಅರ್ಥಪೂರ್ಣ ತೂಕ ನಿರ್ವಹಣೆ ಮತ್ತು ದೀರ್ಘಕಾಲಿಕ ಹೃದಯ ಹಾಗೂ ಮೂತ್ರಪಿಂಡ ರಕ್ಷಣೆ- ಇವೆಲ್ಲವನ್ನೂ ಸರಳವಾಗಿ ಬಳಸಬಹುದಾದ ಪೆನ್ ಸಾಧನದ ಮೂಲಕ ಒದಗಿಸುವ ವಿನೂತನ ಮತ್ತು ಸುಲಭವಾಗಿ ದೊರೆಯುವ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸುವುದೇ ನಮ್ಮ ಗುರಿಯಾಗಿದೆ. ವಾರಕ್ಕೊಮ್ಮೆ ಪಡೆಯಬಹುದಾದ ಈ ಚಿಕಿತ್ಸೆ ಯು ಉತ್ತಮ ಫಲಿತಾಂಶ ಒದಗಿಸುವ, ದೀರ್ಘಕಾಲಿಕ ರೋಗವನ್ನು ನಿರ್ವಹಿಸುವ ಉತ್ತಮ ಔಷಧ ಒದಗಿಸುವ ನೋವೋ ನಾರ್ಡಿಸ್ಕ್‌ ನ ಬದ್ಧತೆಯನ್ನು ತೋರಿಸುತ್ತದೆ” ಎಂದು ಹೇಳಿದರು.

ಓಝೆಂಪಿಕ್® ಹೇಗೆ ಕೆಲಸ ಮಾಡುತ್ತದೆ?

ಓಝೆಂಪಿಕ್® ಒಂದು ಜಿಎಲ್‌ಪಿ-1 ರಿಸೆಪ್ಟರ್ ಅಗೋನಿಸ್ಟ್ ಆಗಿದ್ದು, ಈ ಕೆಳಗಿನ ಸಹಾಯ ಮಾಡುತ್ತದೆ:

  • ರಕ್ತದ ಸಕ್ಕರೆ ನಿಯಂತ್ರಣವನ್ನು ಸುಧಾರಿಸಿ ಎಚ್‌ಬಿಎ1ಸಿ ಕಡಿಮೆ ಮಾಡಲು ನೆರವಾಗುತ್ತದೆ
  • ಹಸಿವನ್ನು ನಿಯಂತ್ರಿಸುವ ಮೆದುಳಿನ ಭಾಗಗಳ ಮೇಲೆ ಕೆಲಸ ಮಾಡಿ ಆಹಾರ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
  • ಟೈಪ್ 2 ಮಧುಮೇಹ ಇರುವವರಲ್ಲಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ
  • ಡಯಾಬಿಟೀಸ್‌ನಿಂದ ಬರುವ ಹೃದಯ ಮತ್ತು ಮೂತ್ರಪಿಂಡದ ತೊಂದರೆಗಳ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ

ವಾರಕ್ಕೊಮ್ಮೆಯ ಬಳಸುವ ಕಾರಣದಿಂದ ಮತ್ತು ಜಾಗತಿಕ ಮಟ್ಟದ ನಂಬಿಕೆಗೆ ಪಾತ್ರವಾಗಿರುವು ದರಿಂದ ಅನೇಕ ದೇಶಗಳ ವೈದ್ಯಕೀಯ ಪದ್ಧತಿಯಲ್ಲಿ ಇದು ಆದ್ಯತೆಯ ಚಿಕಿತ್ಸೆಯಾಗಿದೆ.

ಓಝೆಂಪಿಕ್®, ಮೂಲದಲ್ಲಿ ಜಿಎಲ್‌ಪಿ-1 ಆರ್‌ಎ (ಸೆಮಾಗ್ಲುಟೈಡ್) ಚಿಕಿತ್ಸೆಯಾಗಿದ್ದು, ನೋವೋ ನಾರ್ಡಿಸ್ಕ್ 20 ವರ್ಷಗಳಿಗೂ ಹೆಚ್ಚು ಕಾಲ ಇದನ್ನು ಸಂಶೋಧನೆ ಮಾಡಿ ಅಭಿವೃದ್ಧಿಪಡಿಸಿದೆ ಮತ್ತು ಜಾಗತಿಕವಾಗಿ 38 ಮಿಲಿಯನ್ ರೋಗಿ-ವರ್ಷಗಳ ಕ್ಲಿನಿಕಲ್ ಬಳಕೆಯ ಇತಿಹಾಸ ಹೊಂದಿದೆ. ಸೆಮಾಗ್ಲುಟೈಡ್ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮೂಲಭೂತ ಔಷಧಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಇದು ಮಧುಮೇಹ ಮತ್ತು ಸ್ಥೂಲಕಾಯ ಇರುವವರಿಗೆ ಈ ವಿನೂತನ ಚಿಕಿತ್ಸೆಯ ಸಾಬೀತಾದ ಆರೋಗ್ಯ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ.

ಓಝೆಂಪಿಕ್® ಈಗ ಭಾರತದಲ್ಲಿ 0.25 ಎಂಜಿ, 0.5 ಎಂಜಿ ಮತ್ತು 1 ಎಂಜಿ ಸಾಮರ್ಥ್ಯದಲ್ಲಿ ಫ್ಲೆಕ್ಸ್ ಟಚ್® ಪೆನ್‌ನಲ್ಲಿ ಲಭ್ಯವಿದೆ. ಇದು ಬಳಸಲು ಸುಲಭವಾದ, ವಾರಕ್ಕೊಮ್ಮೆ ಬಳಸುವ ಪೆನ್ ಸಾಧನವಾಗಿದೆ. ಬಹು ಸಾಮರ್ಥ್ಯದ ಡೋಸೇಜ್‌ ಗಳು, ವೈದ್ಯರ ಮಾರ್ಗದರ್ಶನದಲ್ಲಿ ಡೋಸ್ ಹೆಚ್ಚಿಸುವಿಕೆಗೆ ಮತ್ತು ದೀರ್ಘಕಾಲಿಕ ಮಧುಮೇಹ ನಿರ್ವಹಣೆಗೆ ಸಹಾಯ ಮಾಡುತ್ತವೆ.

*

  • ರಕ್ತದಲ್ಲಿನ ಸಕ್ಕರೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದರ ಜೊತೆಗೆ, ಮಧುಮೇಹ ಇರುವವರಲ್ಲಿ ತೂಕ ಇಳಿಸುವ ಪ್ರಯೋಜನವನ್ನೂ ಓಝೆಂಪಿಕ್® ಕ್ಲಿನಿಕಲ್ ಪರೀಕ್ಷೆಗಳಲ್ಲಿ ತೋರಿಸಿದೆ.
  • ಅತ್ಯುತ್ತಮ ಎಚ್‌ಬಿಎ1ಸಿ ನಿಯಂತ್ರಣ ಮತ್ತು ತೂಕ ಇಳಿಕೆಯ ಜೊತೆಗೆ, ಮಧುಮೇಹ ಇರುವವರಲ್ಲಿ ಹೃದಯ ಮತ್ತು ಮೂತ್ರಪಿಂಡ ರಕ್ಷಣೆಯೂ ಓಝೆಂಪಿಕ್® ನ ಹೆಚ್ಚುವರಿ ಪ್ರಯೋಜನಗಳು.