ಎಸ್ʼಐಆರ್ ನಮೂನೆ ಭರ್ತಿ ಮಾಡಲಾಗದೇ ಜನ ಹೈರಾಣ !
ಕಳೆದ ಜೂ.30ರಿಂದ ಬಿಎಲ್ಒಗಳು ಮತ ದಾರರ ಮನೆಗಳಿಗೆ ತೆರಳಿ ನಮೂನೆ ವಿತರಿಸಲು ಆರಂಭಿಸಿ ದ್ದಾರೆ. ಈ ಪ್ರಕ್ರಿಯೆ ಜುಲೈ ಅಂತ್ಯದವ ರೆಗೂ ಮುಂದುವರಿಯಲಿದ್ದು, ಭರ್ತಿ ಮಾಡಿದ ಫಾರ್ಮ್‌ಗಳನ್ನು ಸಂಗ್ರಹಿಸುವ ಕಾರ್ಯ ಜು.5 ರಿಂದ ಆರಂಭವಾಗಿದೆ. ಕೆಲವರು ಈಗಾಗಲೇ ನಮೂನೆ ಹಿಂದಿರುಗಿಸಿದ್ದು, ಬಹಳಷ್ಟು ಮಂದಿ 2002ರ ಅವಧಿಯ ಮತಪಟ್ಟಿಯಲ್ಲಿನ ಅಂಕಿ- ಅಂಶ ತುಂಬಲು ಪರದಾಡು ವಂತಾಗಿದೆ
-
ಜನರಿಗೆ ಸರಿಯಾದ ಮಾಹಿತಿಯೇ ಇಲ್ಲ, ಹಳೆಯ ಮಾಹಿತಿ ಸಿಗದೇ ಪರದಾಟ
ಸಹಾಯಕ್ಕೆ ಹಂಬಲಿಸುತ್ತಿರುವ ಜನ
ಮತಪಟ್ಟಿಯಲ್ಲಿ ಹೆಸರು ಕೈಬಿಡುವ ಭೀತಿ
ಕೆಲವೇ ನಕಲಿಗಳಿಗಾಗಿ ಇಡೀ ರಾಜ್ಯದ ನೈಜ ಮತದಾರರಿಗೆ ತೊಂದರೆ: ಆಕ್ರೋಶ
ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಸಮರಕ್ಕೆ ಕಾರಣವಾಗಿರುವ ರಾಜ್ಯದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ ಐಆರ್) ವಿವಾದವಾಗಿ ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲು ಹತ್ತಿದೆ. ಇಡೀ ಪ್ರಕ್ರಿಯೆ ಗೊಂದಲದ ಗೂಡಾಗಿದ್ದು, ನಿಜವಾದ ಮತ ದಾರರು ಮತದಾನದ ಹಕ್ಕಿನಿಂದ ವಂಚಿತರಾ ಗುವ ಸಾಧ್ಯತೆಯಿದೆ. ಎಸ್‌ಐಆರ್ ಈ ಹಂತದಲ್ಲೇ ನಾಗರಿಕರು ಗಣತಿ ನಮೂನೆ ತುಂಬಿಸಲು ಸಮರ್ಪಕ ವಾದ ಮಾಹಿತಿ ಕೊರತೆಯಿಂದ ತೊಂದರೆಗೀಡಾಗಿದ್ದಾರೆ. ಅಲ್ಲದೆ, ಬಿಎಲ್ʼಎಗಳಿಂದ ಮತದಾರರಿಗೆ ಸರಿಯಾದ ಮಾಹಿತಿ ನೀಡದ ಕಾರಣ ನಮೂನೆ ಭರ್ತಿಗೆ ಹರಸಾಹಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಜೂ.30ರಿಂದ ಬಿಎಲ್ಒಗಳು ಮತ ದಾರರ ಮನೆಗಳಿಗೆ ತೆರಳಿ ನಮೂನೆ ವಿತರಿಸಲು ಆರಂಭಿಸಿದ್ದಾರೆ. ಈ ಪ್ರಕ್ರಿಯೆ ಜುಲೈ ಅಂತ್ಯದವ ರೆಗೂ ಮುಂದುವರಿಯಲಿದ್ದು, ಭರ್ತಿ ಮಾಡಿದ ಫಾರ್ಮ್‌ಗಳನ್ನು ಸಂಗ್ರಹಿಸುವ ಕಾರ್ಯ ಜು.5 ರಿಂದ ಆರಂಭವಾಗಿದೆ. ಕೆಲವರು ಈಗಾಗಲೇ ನಮೂನೆ ಹಿಂದಿರುಗಿಸಿದ್ದು, ಬಹಳಷ್ಟು ಮಂದಿ 2002ರ ಅವಧಿಯ ಮತಪಟ್ಟಿಯಲ್ಲಿನ ಅಂಕಿ- ಅಂಶ ತುಂಬಲು ಪರದಾಡುವಂತಾಗಿದೆ.
ಈ ಹಿಂದೆಯೇ ಮತಪಟ್ಟಿಯಲ್ಲಿರುವವರು ಸೇರಿದಂತೆ ಮನೆ ಬದಲಾಯಿಸಿರುವವರಿಗೆ ಹಳೆಯ ದಾಖಲೆ ಹೆಕ್ಕಿ ತೆಗೆಯಲು ಸಾಧ್ಯವಾಗುತ್ತಿಲ್ಲ. ಸ್ವಂತ ಮನೆ ಉಳ್ಳವರು, ವಿಳಾಸ ಬದಲಿಸಿದವರು ಪರಿಚಿತರಿಂದ ಮಾಹಿತಿ ಸಂಗ್ರಹಿಸಿ ನಮೂನೆ ಭರ್ತಿ ಮಾಡುತ್ತಿದ್ದಾರೆ. 2002ರ ಮತದಾರರ ಪಟ್ಟಿಯಲ್ಲಿರುವ ತಮ್ಮ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆ ತಿಳಿದುಕೊಳ್ಳುವುದಕ್ಕಾಗಿಯೇ ಸಾವಿರಾರು ಜನರು ಉದ್ದನೆಯ ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಾಹಿತಿಯಿಲ್ಲದೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಕೆಲಸಕ್ಕೆ ನಿಯೋ ಜಿಸಲಾದ ಸರಕಾರಿ ಸಿಬ್ಬಂದಿಯ ನಿಧಾನಗತಿಯ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಕಂಡು ಬರುತ್ತಿರುವ ನಿರ್ಲಕ್ಷ್ಯದಿಂದ ಜನಸಾಮಾನ್ಯರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಅರ್ಜಿ ಹೇಗೆ ತುಂಬಬೇಕು, ಅಗತ್ಯ ಮಾಹಿತಿ ಎಲ್ಲಿಂದ ಪಡೆಯಬೇಕು ಎಂಬುದೇ ಅನೇಕರಿಗೆ ತಿಳಿದಿಲ್ಲ.
ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಪಟ್ಟಿಯಲ್ಲಿ ಹೆಸರು ಹುಡುಕುವುದೇ ಕಷ್ಟ: 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಕ್ಷೇತ್ರದ ಹೆಸರು, ಕ್ಷೇತ್ರ ಸಂಖ್ಯೆ, ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ಪತ್ತೆಹಚ್ಚುವುದೇ ಸಾಮಾನ್ಯ ಜನರಿಗೆ ದೊಡ್ಡ ತಲೆನೋವಾಗಿದೆ. ಈ ಮಾಹಿತಿ ಗಾಗಿ ಸಾವಿರಾರು ಜನರು ಗಂಟೆಗಟ್ಟಲೆ ಸರತಿ ಯಲ್ಲಿ ನಿಲ್ಲುತ್ತಿದ್ದಾರೆ. ಇನ್ನೊಂದೆಡೆ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಆರೋಪ- ಪ್ರತ್ಯಾ ರೋಪಗಳಲ್ಲಿ ತೊಡಗಿzರೆ. ಆದರೆ ಜನರ ನಡುವೆ ಹೋಗಿ ನೆರವು ನೀಡುತ್ತಿಲ್ಲ
ಅಂತರ್ಜಾಲ ಬಳಸಲು ಬಲ್ಲವರು ಹೇಗಾದರೂ ಈ ಪ್ರಕ್ರಿಯೆ ಮುಗಿಸಬಹುದು. ಪ್ರತಿ ಅರ್ಜಿದಾ ರರೂ ಎರಡು ಹೊಸ ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಅಂಟಿಸಬೇಕಿರು ವುದರಿಂದ ಬಡ ಕುಟುಂಬಗಳಿಗೆ ಹೆಚ್ಚುವರಿ ವೆಚ್ಚವಾಗುತ್ತಿದೆ. ಕೆಲವೇ ಕೆಲವು ನಕಲಿ ಮತದಾರರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಇಡೀ ರಾಜ್ಯದ ಮತದಾ ರರನ್ನು ಇಂತಹ ಸಂಕೀರ್ಣ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಲಕ್ಷಾಂತರ ನಿಜವಾದ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ. ನಮೂನೆಗಳನ್ನು ಹೇಗೆ ಹಾಗೂ ಯಾವ ಯಾವ ಅಂಶಗಳನ್ನು ಆಧರಿಸಿ ಮಾಹಿತಿ ತುಂಬಬೇಕು ಎಂಬುದನ್ನು ಬಿಎಲಒಗಳಿಗೆ ತರಬೇತಿ ನೀಡಲಾಗಿದೆ. ಆದರೂ, ಹಲವರಿಗೆ ತರಬೇತಿ ವೇಳೆ ಸಮರ್ಪಕವಾದ ಮಾಹಿತಿ ನೀಡಿಲ್ಲ. ಅಂತಹವರು ತಮಗೆ ತೋಚಿದಂತೆ ಭರ್ತಿ ಮಾಡಿದ ನಮೂನೆ ಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿzರೆಯೇ ಹೊರತು ಅವುಗಳನ್ನು ಪರಿಶೀಲಿಸಿ ತಪ್ಪಾಗಿದ್ದಲ್ಲಿ ಸರಿಪಡಿಸುತ್ತಿಲ್ಲ. ಮತದಾರರು ನೀಡಿದ ಮಾಹಿತಿ ನಾವು ಬದಲಿಸಲು ಆಗದು, ಅವರು ನೀಡಿದ ಮಾಹಿತಿಯನ್ನಷ್ಟೇ ಸಂಗ್ರಹಿಸಿ ಮೇಲಧಿಕಾರಿಗಳಿಗೆ ತಲುಪಿಸುತ್ತೇವೆ ಎಂಬ ಉತ್ತರ ಕೆಲ ಬಿಎಲ್ಒ ಗಳು ನೀಡಿರುವುದು ಕೂಡ ಹಲವು ಸಮಸ್ಯೆಗಳಿಗೆ ಮೂಲವಾಗಿದೆ.
ಪ್ರಕ್ರಿಯೆ ರದ್ದುಪಡಿಸಲು ಆಗ್ರಹ
ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯವಾಗಿ ಆಯಾ ಭಾಗದ ಮತದಾರರಿಗೆ ಎಸ್‌ಐಆರ್ ಬಗ್ಗೆ ಮಾಹಿತಿ ನೀಡುತ್ತಿದ್ದರೂ, ಪ್ರತಿಪಕ್ಷಗಳ ಕಾರ್ಯಕರ್ತರಲ್ಲಿ ಆ ವೇಗ ಕಂಡು ಬರುತ್ತಿಲ್ಲ. ಇದೇ ವೇಳೆ ಕೆಲ ಸಾರ್ವಜನಿಕ ಪ್ರದೇಶ, ಕಲ್ಯಾಣ ಮಂಟಪ ಹಾಗೂ ಧಾರ್ಮಿಕ ಕೇಂದ್ರಗಳ ಬಳಿಯೂ ಒಂದು ವರ್ಗದ ಜನರಿಗೆ ಮಾತ್ರ ಎಸ್‌ಐಆರ್ ತಪ್ಪಿಸಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಕೆಲಪ್ರದೇಶಗಳಲ್ಲಿ ಪರಿಸ್ಥಿತಿ ಹಾಗೆಯೇ ಇರುವುದು ಸಾಬೀತಾಗಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಮಾತಿನ ಸಮರ ನಡೆದಿದೆಯಲ್ಲದೆ, ಈ ಸಂಬಂಧ ಎಸ್ ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರಕಾರ ತಪ್ಪು ಹಾದಿ ಯಲ್ಲಿದೆ, ಹಾಗಾಗಿ ಪ್ರಕ್ರಿಯೆಯನ್ನೇ ರದ್ದುಪಡಿಸಿ ಎಂದು ಕೇಂದ್ರ ಸಚಿವರಾದ ಎಚ್.ಡಿ.ಕುಮಾರ ಸ್ವಾಮಿ, ಪ್ರಲ್ಹಾದ ಜೋಶಿ ಸೇರಿದಂತೆ ಹಲವರು ಕೇಂದ್ರ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳಲು ಮನವಿ ಮಾಡಿರುವುದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಸ್ಥಳೀಯ ಎಸ್‌ಐಆರ್ ಮಾಹಿತಿ ಕೇಂದ ಅವಶ್ಯಕ ರಾಜಕೀಯ ಪಕ್ಷಗಳು, ಸಂಸದರು, ಶಾಸಕರು, ಕಾರ್ಪೊರೇಟರ್‌ಗಳು, ಪಂಚಾಯಿತಿ ಸದಸ್ಯರು ಜನರಿಗೆ ನೆರವಾಗುವ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಕ್ಷೇತ್ರದ ಒಂದು ಸಣ್ಣ ಸಹಾಯ ಕೇಂದ್ರ ತೆರೆದು, ಮತದಾರರಿಗೆ ಕ್ಷೇತ್ರದ ಹೆಸರು, ಕ್ಷೇತ್ರ ಸಂಖ್ಯೆ, ಭಾಗ ಸಂಖ್ಯೆ, ಕ್ರಮ ಸಂಖ್ಯೆ ಪತ್ತೆ ಹಚ್ಚಲು ಹಾಗೂ ಅರ್ಜಿ ಭರ್ತಿ ಮಾಡಲು ನೆರವಾಗಬಹುದಿತ್ತು. ಕನಿಷ್ಠ ತಮ್ಮ ಮತದಾರರನ್ನು ರಕ್ಷಿಸುವ ಜವಾಬ್ದಾರಿಯನ್ನಾದರೂ ಅವರು ನಿರ್ವಹಿಸಬೇಕಿತ್ತು. ಸರಕಾರೇ ತರ ಸಂಸ್ಥೆ ಗಳು ಮತ್ತು ಸ್ವಯಂಸೇವಾ ಸಂಘಟನೆಗಳೂ ಮೌನವಾಗಿವೆ. ವೃದ್ಧರು, ಬಡವರು ಡಿಜಿಟಲ್ ತಂತ್ರಜ್ಞಾನ ಬಳಸಲು ಸಾಧ್ಯವಾಗದ ಜನರಿಗೆ ಸಹಾಯ ಮಾಡುವ ಶಿಬಿರಗಳನ್ನು ಆಯೋಜಿಸಬಹುದಿತ್ತು. ಇಂತಹ ಕಾರ್ಯಕ್ಕೆ ಮುಂದಾಗದೆ ಎಸ್‌ಐಆರ್ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಸಮಸ್ಯೆಯೇನು?
ನಮೂನೆ ಅರ್ಜಿಯನ್ನು ಹೇಗೆ ತುಂಬಬೇಕೆಂದೇ ತಿಳಿಯುತ್ತಿಲ್ಲ ಜನರಿಗೆ ರಾಜಕೀಯ ಪಕ್ಷಗಳಿಂದ ಪರ- ವಿರೋಧ ಕೆಸರೆರಚಾಟ, ಸಹಾಯವಿಲ್ಲ ಕೆಲವು ಬಿಎಲ್‌ಓಗಳಿಗೇ ಸರಿಯಾದ ಮಾಹಿತಿ ಯಿಲ್ಲದೇ ತಪ್ಪಾಗಿ ಭರ್ತಿ ಪದೇಪದೇ ಮನೆ ಬದಲಿಸಿದವರಿಗೆ ಹಳೆಯ ಮಾಹಿತಿ ತುಂಬಲಾಗುತ್ತಿಲ್ಲ