ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Maya Balachandra Column: ಆಲೂ ಬೋಂಡ ಹಾಗೂ ಮಾಸ್ಟರ್‌ ಶೆಫ್‌ !

ದಕ್ಷಿಣ ಭಾರತದ ಆಲೂ ಬೋಂಡ ಎಂದು ತಾನು ಸಿದ್ಧಪಡಿಸಿದ ತಿನಿಸನ್ನು ತೀರ್ಪುಗಾರರ ಮುಂದೆ ಪ್ರಸ್ತುತಪಡಿ ಸಿದ, ಭಾರತೀಯ ಮೂಲದ ಶೆ- ಐಶು ಚಲ್ಲಳ ಧೈರ್ಯವನ್ನು ಎಲ್ಲರೂ ಕೊಂಡಾಡು ತ್ತಿದ್ದಾರೆ. ವಿಶ್ವದ ವಿವಿಧ ಖಾದ್ಯಗಳನ್ನು ಅದರ ಪೌಷ್ಟಿ ಕಾಂಶಗಳ ಘೋಷಣೆಯೊಂದಿಗೆ ಪ್ರಸ್ತುತಿ ಪಡಿಸ ಬೇಕಾದಂತಹ ವೇದಿಕೆಯದು. ಏಷಿಯಾ- ಪ್ಯಾಸಿಫಿಕ್ ತಂಡವನ್ನು ಪ್ರತಿನಿಧಿಸಿದ್ದ ಐಶು, ಮಾಸ್ಟರ್ ಶೆಫ್ ಸ್ಪರ್ಧೆಯ ಒಂದು ನಿರ್ದಿಷ್ಟ ಹಾಗೂ ಮುಖ್ಯ ಸವಾಲನ್ನು ಎದುರಿಸಲು ಆಧರಿಸಿದ್ದು ಆಲೂ ಬೋಂಡವನ್ನು

Maya Balachandra Column: ಆಲೂ ಬೋಂಡ ಹಾಗೂ ಮಾಸ್ಟರ್‌ ಶೆಫ್‌ !

-

Profile
Ashok Nayak Jul 10, 2026 9:18 AM

ಮಾಯಾ ಬಾಲಚಂದ್ರ

ಉಂಡಾಡಿ ಗುಂಡಂಗೆ ಆಲೂಗೆಡ್ಡೆ ಬೋಂಡಾ ಅಂತ ನಾವು ಚಿಕ್ಕವರಿದ್ದಾಗ, ತಿಂಡಿ ಪೋತರನ್ನು ಕಿಚಾಯಿಸ್ತಿದ್ದ ದಿನಗಳು ನೆನಪಾದವು. ಇದಕ್ಕೆ ಕಾರಣ, ಅಮೆರಿಕದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಉರುಳದೆ ದೃಢವಾಗಿ ನಿಂತ ದಕ್ಷಿಣ ಭಾರತದ ಆಲೂ ಬೋಂಡ. ಘಟಾನುಘಟಿ ತೀರ್ಪುಗಾರರ ಮುಂದಿದ್ದ ಮೇಜಿನ ಮೇಲಿಂದ ಗುಂಡಗಿನ ಬೋಂಡ ಕೆಳಗುರುಳುವ ಸಾಧ್ಯತೆ ಹೆಚ್ಚಿತ್ತು. ಹಾಗೆ ಉರುಳಿಸಲು ಬೇಕಾದ ಪುಶ್, ಬೋಂಡದ ಕರ್ತೃವಿನಿಂದಲೇ ಸಿಕ್ಕಿತ್ತು. ಆದರೂ, ಅದರ ಬಣ್ಣ, ಮೇಲ್ಮೈ, ಪ್ರಸ್ತುತ ಪಡಿಸಿದ ರೀತಿ, ಸ್ವಾದ ಎಲ್ಲವುಗಳಿಂದ ಹಿಡಿದಿ ಡಲ್ಪಟ್ಟ ತೀರ್ಪುಗಾರರು ಅದನ್ನು ಉರುಳಲು ಬಿಡದೆ ಹಿಡಿದು ನಿಲ್ಲಿಸಿದರು.

ದಕ್ಷಿಣ ಭಾರತದ ಆಲೂ ಬೋಂಡ ಎಂದು ತಾನು ಸಿದ್ಧಪಡಿಸಿದ ತಿನಿಸನ್ನು ತೀರ್ಪುಗಾರರ ಮುಂದೆ ಪ್ರಸ್ತುತಪಡಿ ಸಿದ, ಭಾರತೀಯ ಮೂಲದ ಶೆಫ್ ಐಶು ಚಲ್ಲಳ ಧೈರ್ಯವನ್ನು ಎಲ್ಲರೂ ಕೊಂಡಾಡು ತ್ತಿದ್ದಾರೆ. ವಿಶ್ವದ ವಿವಿಧ ಖಾದ್ಯಗಳನ್ನು ಅದರ ಪೌಷ್ಟಿ ಕಾಂಶಗಳ ಘೋಷಣೆಯೊಂದಿಗೆ ಪ್ರಸ್ತುತಿ ಪಡಿಸಬೇಕಾದಂತಹ ವೇದಿಕೆಯದು. ಏಷಿಯಾ- ಪ್ಯಾಸಿಫಿಕ್ ತಂಡವನ್ನು ಪ್ರತಿನಿಧಿಸಿದ್ದ ಐಶು, ಮಾಸ್ಟರ್ ಶೆಫ್ ಸ್ಪರ್ಧೆಯ ಒಂದು ನಿರ್ದಿಷ್ಟ ಹಾಗೂ ಮುಖ್ಯ ಸವಾಲನ್ನು ಎದುರಿಸಲು ಆಧರಿಸಿದ್ದು ಆಲೂ ಬೋಂಡವನ್ನು. ಇದನ್ನು ನೋಡಿದಾಗ ಮೊದಲ ಸಲಕ್ಕೆ ನಾವು ಭಾರತೀಯರು ಅಥವಾ ಭಾರತೀಯ ಮೂಲದವರು ಹೆಚ್ಚಿನ ಬಾರಿ ನಮ್ಮ ವಿಚಾರ ಗಳನ್ನು ಅನಾವರಣಗೊಳಿಸುವಾಗ ಪರಿಣಾಮಕಾರಿಯಾಗಿ ಹೇಳುವುದಿಲ್ಲ ಏಕೆ? ಅನ್ನುವ ಪ್ರಶ್ನೆ ಮೂಡಿತು. ‌

ಇದನ್ನೂ ಓದಿ: Maya Balachandra Column: ಆಧ್ಯಾತ್ಮಿಕತೆಯು ಪಲಾಯನ ಮಾರ್ಗವೇ ? ಪ್ರತಿರೋಧವೇ ?

ಕಾರಣ, ನಾನಾಗಲೇ ಹೇಳಿದಂತೆ ಆ ಸ್ಪರ್ಧೆಯಲ್ಲಿ ಆಕೆ ತನ್ನ ಅಡುಗೆಯನ್ನು ಪ್ರಸ್ತುತಿಪಡಿಸಿದಾಗ ಅದರ ಬಗ್ಗೆ ನೀಡಿದ ಅಪೂರ್ಣ ಮಾಹಿತಿ. ಅಲ್ಲಿದ್ದ ತಜ್ಞರು, ಆಕೆ ಸಿದ್ಧಪಡಿಸಿದ ತಿನಿಸಿನಲ್ಲಿ ಇರಬಹುದಾದ ಪ್ರೊಟೀನ್ ಅಂಶವನ್ನು ಕೇಳಿದಾಗ ಆಕೆ ಸರಾಗವಾಗಿ ಇಲ್ಲ ಎಂದು ಹೇಳಿಬಿಟ್ಟಳು. ನಿಜವಾಗಿಯೂ ಆಲೂ ಬೋಂಡದಲ್ಲಿ ಪ್ರೊಟೀನ್ ಇಲ್ಲವೇ? ಇದು ಪ್ರಶ್ನೆ. ಆಲೂಗಡ್ಡೆಯಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರೊಟೀನ್ ಇದ್ದರೂ ಬೇಯಿಸಿದಾಗ ಅದು ಇನ್ನಷ್ಟು ಕಡಿಮೆ ಆಗಬಹುದು ಆದರೆ ಇಲ್ಲವೇ ಇಲ್ಲ ಅಂತ ಹೇಳುವ ಹಾಗೆ ಇಲ್ಲ. ಜೊತೆಗೆ ಈ ಬೋಂಡಾಗೆ ಮುಖ್ಯವಾಗಿ ಬಳಸುವ ಕಡಲೆ ಹಿಟ್ಟಿನಲ್ಲಿ 20% ವರೆಗೆ ಪ್ರೊಟೀನ್ ಇರುತ್ತದೆ. ಅದು ಎಣ್ಣೆಯಲ್ಲಿ ಕರಿದ ನಂತರವೂ ಸಹ ನಷ್ಟ ವಾಗದೆ ಉಳಿಯುತ್ತದೆ. ಅದು ಸ್ವಲ್ಪ ಬೇರೆ ಬೇರೆ ಅಂಶಗಳನ್ನು ಜೊತೆಗೆ ಸೇರಿಸಿಕೊಂಡು ಪೌಷ್ಟಿಕಾಂಶದ ದೃಷ್ಟಿಯಲ್ಲಿ ವಿಭಿನ್ನ‌ ದಾರಿ ಹಿಡಿಯಬಹುದು ಅಷ್ಟೇ.

ಇನ್ನು ತೆಂಗಿನಕಾಯಿ ಚಟ್ನಿ ಮತ್ತು ಪುದಿನಾ ಕೊತ್ತಂಬರಿ ಚಟ್ನಿಯಲ್ಲಿಯೂ, ಹೈ ಪ್ರೊಟೀನ್ ಅಲ್ಲದಿದ್ದರೂ ಅತ್ಯಲ್ಪ ಪ್ರಮಾಣದಲ್ಲಿ ಆದರೂ ಪ್ರೊಟೀನ್ ಇದ್ದೇ ಇದೆ. ಅವೆಲ್ಲವನ್ನು ಸೇರಿಸಿ ಆಕೆ ನೀಡಿದ ತಟ್ಟೆಯಲ್ಲಿ ಪ್ರೊಟೀನ್ ಇಲ್ಲ ಎಂದು ಹೇಗೆ ನಿರ್ಧರಿಸಿದ್ದು? ಎಂದು ಗೊಂದಲವಾಯಿತು. ಸರಿಯಾಗಿ ಗಮನಿಸಿದರೆ ಆಕೆ ನೀಡಿದ ಪ್ಲೇಟ್ ನಲ್ಲಿ ಕನಿಷ್ಠ 18%ರಿಂದ 20%ವರೆಗೆ ಪ್ರೊಟೀನ್ ಇದ್ದಿರಬಹುದು. ಆದರೂ ಪ್ರೊಟೀನ್ ಮತ್ತು ಪೌಷ್ಟಿಕಾಂಶಗಳ ದೃಷ್ಟಿಯಿಂದ ಆಲೂ ಬೋಂಡ ಏನೂ ಅಲ್ಲ ಎನಿಸಿಕೊಂಡುಬಿಟ್ಟಿತು. ‌

ಕಾರ್ಬೋಹೈಡ್ರೇಟ್, ಫ್ಯಾಟ್‌, ಕೊಲೆಸ್ಟ್ರಾಲ್ ಇವುಗಳ ವಿಚಾರ ಬೇರೆ.. ಬಿಡಿ. 100 ಗ್ರಾಂ ಚಿಪ್ಸ್ ಪೊಟ್ಟಣದಲ್ಲಿ, ಎರಡು ಪರ್ಸೆಂಟ್‌ನಷ್ಟು ಅಥವಾ ಅದಕ್ಕಿಂತಲೂ ಕಡಿಮೆ ಪ್ರ್ರೊಟೀನ್ ಇದ್ದಾ ಗಲೂ, ಅದರಲ್ಲಿರುವ ಪ್ರೊಟೀನ್ ಅನ್ನೇ ಹೈಲೈಟ್ ಮಾಡಿ, ಅದು ಪ್ರೊಟೀನ್ ರಿಚ್ ಫುಡ್ ಪ್ಯಾಕ್ ಎಂದು ಮಾರಾಟ ಮಾಡುವ ಅಮೆರಿಕನ್ನರ ಮುಂದೆ, ನಮ್ಮ ಇಪ್ಪತ್ತು ಪರ್ಸೆಂಟ್ ಪ್ರೊಟೀನ್ ಇರುವ ತಾಜಾ ಆಹಾರ ಕೇವಲ ರುಚಿಗಾಗಿ ಆಯ್ಕೆಯಾಯಿತು ಎನಿಸಿಕೊಂಡುಬಿಟ್ಟಿತು.

ಆಲೂ ಬೋಂಡದಲ್ಲಿ ಪ್ರೊಟೀನ್, ನಾರಿನ ಅಂಶ, ವಿಟಮಿನ್ ಸಿ, ಕಾರ್ಬೋಹೈಡ್ರೇಟ್ಸ ಎಲ್ಲವೂ ಇವೆ. ಭಾರತೀಯರ ಆಹಾರದಲ್ಲಿ, ಅದು ಒಂದು ಚಿಕ್ಕ ಸ್ನ್ಯಾಕ್ಸ್ ಸಹ ಆಗಿರ ಬಹುದು, ಅದರಲ್ಲಿ ಅವಶ್ಯ ಪೋಷಕಾಂಶಗಳು ಇದ್ದೇ ಇವೆ. ನಮ್ಮ ಆಹಾರ ಋತುಮಾನವನ್ನು ಆಧರಿಸಿ ನಿರ್ಧರಿಸ ಲ್ಪಡುತ್ತದೆ. ಹಾಗಾಗಿ ಪ್ರಪಂಚದ ಬಹುತೇಕ ದೇಶಗಳಲ್ಲಿ ಬಹಳ ಹಿಂದೆ ಗುರುತಿಸಲ್ಪಟ್ಟ ದೊಡ್ಡ ದೊಡ್ಡ ಕಾಯಿಲೆಗಳು ನಮ್ಮ ದೇಶದಲ್ಲಿ ಇರಲೇ ಇಲ್ಲ. ಈಗ ಎಲ್ಲರೂ ಎಲ್ಲವನ್ನು ತಿನ್ನುತ್ತಿದ್ದಾರೆ.

ಹಾಗಾಗಿ ಎಲ್ಲಾ ಕಾಯಿಲೆಗಳು ಎಲ್ಲಾ ಕಡೆಯೂ ಹರಡಿವೆ ಅಷ್ಟೇ. ಭಾರತೀಯರಲ್ಲಿ ಮೌಲ್ಯೀಕರಣ ಮತ್ತು ದಾಖಲೀಕರಣಗಳು ಬಹಳ ಕಡಿಮೆ. ಶ್ರುತಿಯ ಮೂಲಕ ಗಳಿಸಿ, ಸ್ಮೃತಿಯಲ್ಲಿ ಉಳಿಸಿಕೊಂಡು ತಲೆಮಾರಿನಿಂದ ತಲೆಮಾರಿಗೆ ಜ್ಞಾನವನ್ನು ದಾಟಿಸುವ ನಿಸ್ಪೃಹ ಪರಂಪರೆಯ ಮೂಲ ನಮ್ಮದು. ಆದ ಕಾರಣ, ಬಾಹ್ಯದ ವಿಚಾರಗಳನ್ನು ಮೌಲ್ಯಕ್ಕೆ ಒಳಪಡಿಸುವ ಮನಸ್ಥಿತಿ ನಮಗೆ ಕಡಿಮೆ.

ಇಂದಿಗೂ ಆ ನೆರಳಿನಲ್ಲಿ ನಾವಿದ್ದೇವೆ. ನಮ್ಮ ಪರಂಪರೆಯ ಉನ್ನತ ವಿಚಾರಗಳನ್ನು ಜಗತ್ತಿಗೆ ಮುಟ್ಟಿಸಬೇಕಾದರೆ, ಅಂಥ ಮನಸ್ಥಿತಿಯಿಂದ ಈಚೆ ಬರಲೇಬೇಕಿದೆ. ಇಲ್ಲಿ ಮಾಸ್ಟರ್ ಶೆಫ್‌ʼನ ಒಂದು ಮುಖ್ಯ ಸವಾಲನ್ನು ಆಕೆ ಗೆದ್ದಿರಬಹುದು. ಗೆದ್ದ ಮಾತ್ರಕ್ಕೆ ಎಲ್ಲವೂ ಸರಿಯಿತ್ತು ಅನ್ನುವ ನಿರ್ಧಾರಕ್ಕೆ ಬರಬೇಕಿಲ್ಲ. ಅಲ್ಲಿಯೂ ಸರಿಪಡಿಸಿಕೊಳ್ಳಲು ಅನೇಕ ಅಂಶಗಳು ಉಳಿದಿರುತ್ತವೆ ಎನ್ನುವುದಕ್ಕೆ ಇದೇ ಸಾಕ್ಷಿ.

ಹಾಗೆಯೇ ಸೋತ ಸಂದರ್ಭಗಳಲ್ಲಿ ಎಲ್ಲವೂ ತಪ್ಪಾಗಿತ್ತು ಅಂತಲೂ ಅಲ್ಲ. ಎಷ್ಟೋ ವಿಚಾರಗಳು ಸರಿಯಾಗಿಯೇ ಇದ್ದು, ಒಂದೆರಡು ಅಂಶಗಳಲ್ಲಿ ಸೋಲನ್ನು ಕಾಣುವ ಸಾಧ್ಯತೆಯೇ ಹೆಚ್ಚು. ಹಾಗಾಗಿ, ಸೋತಾಗ, ತಮ್ಮಿಂದ ಎಲ್ಲವೂ ತಪ್ಪಾಗಿ ಬಿಟ್ಟಿತ್ತು ಎನ್ನುವ ನಿರ್ಧಾರದಿಂದ ಮನಸ್ಸನ್ನು ಮುದುಡಿಸಿಕೊಳ್ಳುವ ಅಗತ್ಯವಿಲ್ಲ. ಅವೆಲ್ಲ ಐನೇ ಆದರೂ, ನಮ್ಮ ಆಲೂ ಬೋಂಡವನ್ನು ನಮ್ಮ ಹುಡುಗಿ ಗೆಲ್ಲಿಸಿzಳೆ ಅಥವಾ ನಮ್ಮ ಆಲು ಬೋಂಡ ನಮ್ಮ ಹುಡುಗಿಯನ್ನು ಗೆಲ್ಲಿಸಿದೆ. ಮನೆಯಲ್ಲಿ ಡಯಟ್ ಕಾರಣಕ್ಕೆ ಆಲೂ ಬೋಂಡ ಮಾಡದ ತಮ್ಮ ಹೆಂಡತಿಯರಿಗೆ, ಆಲೂ ಬೋಂಡ ಗೆದ್ದ ವಿಡಿಯೋವನ್ನು ಪತಿಮಹಾಶಯರು ಖುಷಿಯಿಂದ ಶೇರ್ ಮಾಡ್ತಿದ್ದಾರಂತೆ. ಇದು ಭಾರತದ ತಾಜಾ ಸುದ್ದಿ