ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೆಡಿಯಾಯ್ತು ಪ್ಲಾನ್‌

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಗುರುತಿಸಿರುವ 2 ಬೃಹತ್ ಜಾಗಗಳ ವಿಲೀನ ಮಾಡಿ ಮಧ್ಯದಲ್ಲಿ ನಿರ್ಮಾಣಕ್ಕೆ ಮುಂದಾಗಿದೆ. ವಿಮಾನ ನಿಲ್ದಾಣಕ್ಕೆ ಮೊದಲಿಗೆ ಸರ್ಕಾರ ಮೂರು ಜಾಗಗಳನ್ನು ಪಟ್ಟಿ ಮಾಡಿತ್ತು.

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೆಡಿಯಾಯ್ತು ಪ್ಲಾನ್‌

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 12, 2026 6:46 AM

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ (International Airport) ನಿಲ್ದಾಣವನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಗುರುತಿಸಿರುವ 2 ಬೃಹತ್ ಜಾಗಗಳ ವಿಲೀನ ಮಾಡಿ ಮಧ್ಯದಲ್ಲಿ ನಿರ್ಮಾಣಕ್ಕೆ ಮುಂದಾಗಿದೆ. ವಿಮಾನ ನಿಲ್ದಾಣಕ್ಕೆ ಮೊದಲಿಗೆ ಸರ್ಕಾರ ಮೂರು ಜಾಗಗಳನ್ನು ಪಟ್ಟಿ ಮಾಡಿತ್ತು. ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯ ಚುಡಹಳ್ಳಿ ಮತ್ತು ಸೋಮನಹಳ್ಳಿ ಹಾಗೂ ತುಮಕೂರು ರಸ್ತೆಯ ಕುಣಿಗಲ್ ಮತ್ತು ನೆಲಮಂಗಲದ ನಡುವಿನ ಜಾಗ.

ಪ್ರತಿಯೊಂದು ಜಾಗದಲ್ಲೂ ಸುಮಾರು 4,500 ರಿಂದ 5,200 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಆದರೆ, ಈಗ ಮೌಲಸೌಕರ್ಯ ಅಭಿವೃದ್ಧಿ ಇಲಾಖೆ, ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮತ್ತು ಕೆಐಎಡಿಬಿಯ ಸೀನಿಯರ್‌ ಆಫೀಸರ್‌ಗಳ ಸಲಹೆ ಮೇರೆಗೆ ಕನಕಪುರ ರಸ್ತೆಯಲ್ಲಿ ಪಕ್ಕ-ಪಕ್ಕದಲ್ಲೇ ಇರುವ ಚುಡಹಳ್ಳಿ ಮತ್ತು ಸೋಮನಹಳ್ಳಿ ಜಾಗಗಳನ್ನು ಸೇರಿಸಿ, ಎರಡನ್ನೂ ಸೇರಿಸಿ ಮಧ್ಯೆದಲ್ಲಿ ನಿಲ್ದಾಣ ನಿರ್ಮಾಣ ಸರ್ಕಾರ ಯೋಜನೆ ರೂಪಿಸುತ್ತಿದೆ.

ಸರ್ಕಾರ ಸಿಂಗಾಪುರ ಮೂಲದ ಮೈನ್‌ಹಾರ್ಡ್- ಕೆಪಿಎಂಜಿ ಕನ್ಸೋರ್ಟಿಯಂ ಸಂಸ್ಥೆಗೆ ಫೀಸಿಬಿಲಿಟಿ ಸ್ಟಡಿ ಮಾಡಲು ಜವಾಬ್ದಾರಿ ಕೊಟ್ಟಿದೆ. 4.96 ಕೋಟಿ ರೂಪಾಯಿ ವೆಚ್ಚದ ಈ ಸ್ಟಡಿ ರಿಪೋರ್ಟ್ ಬರಲು ಸುಮಾರು ಐದು ತಿಂಗಳು ಬೇಕು ವರದಿ ಬಂದ ಮೇಲೆ ಎರಡನೇ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಎಲ್ಲಿ ನಿರ್ಮಾಣ ಮಾಡಬೇಕು ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ. ಈ ಯೋಜನೆಗಾಗಿ ಸುಮಾರು 4,300 ರಿಂದ 4,700 ಎಕರೆ ಜಾಗ ಬೇಕಾಗುತ್ತದೆ. ಇಲ್ಲಿನ ಮಣ್ಣಿನ ಪರೀಕ್ಷೆ ನೀರು ಮತ್ತು ವಿದ್ಯುತ್ ಪೂರೈಕೆಯ ಲಭ್ಯತೆ ಎಲ್ಲವನ್ನೂ ಸಮೀಕ್ಷೆಯಲ್ಲಿ ಪರಿಶೀಲಿಸಲಾಗುತ್ತಿದೆ. ಬರೋಬ್ಬರಿ 30 ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬೃಹತ್ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ರೂಪುಗೊಳ್ಳುತ್ತಿದೆ.

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತೊಂದರೆ, 70 ವಿಮಾನ ಹಾರಾಟಕ್ಕೆ ಅಡಚಣೆ, 22 ಫ್ಲೈಟ್‌ ರದ್ದು

ಕೆಂಪೇಗೌಡ ಏರ್‌ಪೋರ್ಟ್ ತನ್ನ ಕೆಪಾಸಿಟಿಯನ್ನು ಹಂತ ಹಂತವಾಗಿ ಹೆಚ್ಚಿಸುತ್ತಲೇ ಇದೆ, ವರ್ಷಕ್ಕೆ ಬರೋಬ್ಬರಿ 40 ಮಿಲಿಯನ್ ಅಂದರೆ 4 ಕೋಟಿಗೂ ಹೆಚ್ಚು ಪ್ಯಾಸೆಂಜರ್ಸ್ ಇಲ್ಲಿ ಓಡಾಡುತ್ತಾರೆ. ಆದರೆ, ಮುಂದಿನ 2030ರ ಹೊತ್ತಿಗೆ ಈ ಏರ್‌ಪೋರ್ಟ್ ತನ್ನ ಮ್ಯಾಕ್ಸಿಮಮ್ ಲಿಮಿಟ್ ರೀಚ್ ಆಗಲಿದೆ. ಹೀಗಾಗಿ ಎರಡನೇ ಏರ್‌ಪೋರ್ಟ್‌ ಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.