ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುನ್ನೆಚ್ಚರಿಕೆಯ ಆರೋಗ್ಯ ಸೇವೆ ಮತ್ತು ಹಿರಿಯ ನಾಗರಿಕರ ಆರೈಕೆ ವಿಭಾಗಗಳು ಭಾರತದ ವಿಮಾ ಕ್ಷೇತ್ರವನ್ನು ಮುನ್ನಡೆಸುತ್ತಿವೆ: ಕೇರ್ ಹೆಲ್ತ್ ಇನ್ಶೂರೆನ್ಸ್ ಟ್ರೆಂಡ್ಸ್ ರಿಪೋರ್ಟ್ 2025

ಭಾರತೀಯರು ಸಕ್ರಿಯವಾಗಿ ಆರೋಗ್ಯ ವಿಮೆಯನ್ನು ಖರೀದಿ ಮಾಡುತ್ತಿರುವ ಟ್ರೆಂಡ್ ಸ್ಪಷ್ಟವಾಗಿದೆ. 2023–2024 ರಿಂದ 2024–2025ರ ವಿಮಾ ವರ್ಷದಲ್ಲಿ ವಿಮಾದಾರರ ಸಂಖ್ಯೆಯಲ್ಲಿ ಶೇ. 27ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಇದು ಹೆಚ್ಚುತ್ತಿರುವ ವೈದ್ಯ ಕೀಯ ವೆಚ್ಚಗಳಿಂದಾಗಿ ಸಮಗ್ರ ಆರೋಗ್ಯ ರಕ್ಷಣೆಯ ಅಗತ್ಯತೆಯ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಬೆಳೆಯುತ್ತಿರುವುದನ್ನು ಒತ್ತಿ ಹೇಳುತ್ತದೆ

ಹಿರಿಯ ನಾಗರಿಕರ ಆರೈಕೆ ವಿಭಾಗಗಳು ವಿಮಾ ಕ್ಷೇತ್ರವನ್ನು ಮುನ್ನಡೆಸುತ್ತಿವೆ

-

Ashok Nayak
Ashok Nayak Dec 29, 2025 4:23 PM

ವೈದ್ಯಕೀಯ ವೆಚ್ಚಗಳು ಹೆಚ್ಚುತ್ತಿರುವಂತೆ, ಅದರ ಜೊತೆಗೆ ಜಾಗೃತಿ ಕೂಡ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ವಿಮಾದಾರರ ಸಂಖ್ಯೆಯಲ್ಲಿ ಶೇ.27ಕ್ಕಿಂತ ಹೆಚ್ಚು ಏರಿಕೆ ಕಂಡುಬಂದಿದೆ.

ಭಾರತೀಯರಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಜ್ವರದಂತಹ ಸಾಮಾನ್ಯ ಕಾಯಿಲೆಗಳು, ಉಸಿರಾಟದ ಸೋಂಕು ಮತ್ತು ಹೃದಯ ಸಂಬಂಧಿ ಕಾಯಿಲೆಗಳಂತಹ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹಾಗೂ ಕ್ಯಾನ್ಸರ್ ಮತ್ತು ಸಂಧಿವಾತದ ಸಮಸ್ಯೆಗಳು ಹೆಚ್ಚುತ್ತಿವೆ.

ಹೃದಯ ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ಬರುತ್ತಿರುವ ಹೆಚ್ಚಿನ ಮೌಲ್ಯದ ವಿಮಾ ಕ್ಲೈಮ್‌ ಗಳು ವೈದ್ಯಕೀಯ ಸಂಕೀರ್ಣತೆ ಹೆಚ್ಚುತ್ತಿರುವುದನ್ನು ತೋರಿಸುತ್ತವೆ.

ಗ್ರಾಹಕರು ಉತ್ತಮ ಆನ್‌ಲೈನ್ ಅನುಭವಗಳನ್ನು ಹೊಂದುತ್ತಿರುವುದರಿಂದ, ಡಿಜಿಟಲ್ ನವೀ ಕರಣಗಳು ಮತ್ತು ಆ್ಯಪ್ ಆಧಾರಿತ ಸೇವೆಗಳು ಗಣನೀಯವಾಗಿ ಹೆಚ್ಚಿವೆ.

ಪ್ರತಿಷ್ಠಿತ ವಿಮಾ ಕಂಪನಿ ಆಗಿರುವ ಕೇರ್ ಹೆಲ್ತ್ ಇನ್ಶೂರೆನ್ಸ್ ಸಂಸ್ಥೆಯು ಇಂದು ತನ್ನ 2025ರ ವಾರ್ಷಿಕ ಟ್ರೆಂಡ್ಸ್ ವರದಿಯನ್ನು ಪ್ರಕಟಿಸಿದೆ. ಈ ವರದಿಯು ಗ್ರಾಹಕರ ಬದಲಾಗುತ್ತಿರುವ ವರ್ತನೆ ಗಳು, ಡಿಜಿಟಲ್ ಅಳವಡಿಕೆ ಮತ್ತು ಹೊಸ ಕಾಲದ ಹೆಲ್ತ್ ಕ್ಲೈಮ್ ಮಾದರಿಗಳ ವಿಶ್ಲೇಷಣೆ ಇತ್ಯಾದಿ ಗಳ ಮೂಲಕ ಜನರು ಮುನ್ನೆಚ್ಚರಿಕೆಯಾಗಿ ಆರೋಗ್ಯ ವಿಮೆ ಖರೀದಿಸುವುದಕ್ಕೆ ಆದ್ಯತೆ ತೋರು ತ್ತಿರುವುದನ್ನು ಮತ್ತು ಡಿಜಿಟಲ್ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ತಿಳಿಸಿದೆ.

ವರದಿಯ ದತ್ತಾಂಶದ ಪ್ರಕಾರ, ಭಾರತೀಯರು ಸಕ್ರಿಯವಾಗಿ ಆರೋಗ್ಯ ವಿಮೆಯನ್ನು ಖರೀದಿ ಮಾಡುತ್ತಿರುವ ಟ್ರೆಂಡ್ ಸ್ಪಷ್ಟವಾಗಿದೆ. 2023–2024 ರಿಂದ 2024–2025ರ ವಿಮಾ ವರ್ಷದಲ್ಲಿ ವಿಮಾದಾರರ ಸಂಖ್ಯೆಯಲ್ಲಿ ಶೇ. 27ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಇದು ಹೆಚ್ಚುತ್ತಿರುವ ವೈದ್ಯ ಕೀಯ ವೆಚ್ಚಗಳಿಂದಾಗಿ ಸಮಗ್ರ ಆರೋಗ್ಯ ರಕ್ಷಣೆಯ ಅಗತ್ಯತೆಯ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಬೆಳೆಯುತ್ತಿರುವುದನ್ನು ಒತ್ತಿ ಹೇಳುತ್ತದೆ.

ಕುರಿತು ಮಾತನಾಡಿದ ಕೇರ್ ಹೆಲ್ತ್ ಇನ್ಶೂರೆನ್ಸ್‌ ಚೀಫ್ ಆಪರೇಟಿಂಗ್ ಆಫೀಸರ್ ಮನೀಶ್ ದೋದೇಜಾ ಅವರು, "ನಮ್ಮ ವಾರ್ಷಿಕ ಟ್ರೆಂಡ್ಸ್ ಅಧ್ಯಯನ ವರದಿಯಿಂದ ಭಾರತೀಯ ಆರೋಗ್ಯ ವಿಮೆ ಗ್ರಾಹಕರು ಪೂರ್ವಭಾವಿಯಾಗಿ ಸಮಗ್ರ ಆರೋಗ್ಯ ರಕ್ಷಣೆಯನ್ನು ಬಯಸುತ್ತಿದ್ದಾರೆ ಮತ್ತು ತಾಂತ್ರಿಕವಾಗಿ ಹೆಚ್ಚು ಜಾಣರಾಗುತ್ತಿದ್ದಾರೆ, ಟೆಕ್ ಸ್ಯಾವಿಯಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಗ್ರಾಹಕರು ಮುನ್ನೆಚ್ಚರಿಕೆಯ ಆರೋಗ್ಯ ಸೇವೆ ಮತ್ತು ಜೀವನಶೈಲಿಯ ಆರೈಕೆಗೆ ಆದ್ಯತೆ ನೀಡುತ್ತಿದ್ದಾರೆ. ಹೀಗೆ ಗ್ರಾಹಕರ ವರ್ತನೆಯಲ್ಲಿ ಆಗುತ್ತಿರುವ ಬದಲಾವಣೆಗಳ ಮೂಲಕ ನಾವು ಮಾರ್ಗದರ್ಶನ ಪಡೆಯುತ್ತಿದ್ದೇವೆ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ ಸರಳ ಹಾಗೂ ಸುಲಭವಾದ ಪರಿಹಾರಗಳನ್ನು ಒದಗಿಸುವಂತೆ ನೋಡಿಕೊಳ್ಳುತ್ತಿದ್ದೇವೆ. ಆರೋಗ್ಯ ವಿಮೆಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ, ಹೆಚ್ಚು ಲಭ್ಯವಾಗುವಂತೆ ಮತ್ತು ನಮ್ಮ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ವಿಮಾ ಉತ್ಪನ್ನಗಳನ್ನು ರೂಪಿಸಲು ನಾವು ತಂತ್ರಜ್ಞಾನ ದಲ್ಲಿ ಹೂಡಿಕೆ ಮಾಡಲು ಬದ್ಧರಾಗಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: Health Insurance: ಆರೋಗ್ಯ ವಿಮೆಯಲ್ಲಿ ದೊಡ್ಡ ಬದಲಾವಣೆ- ಈ ಎರಡು ಕಂಪನಿಗಳ ಪಾಲಿಸಿಗಳಿಗೆ ಕ್ಯಾಶ್‌ಲೆಸ್ ಸೇವೆ ಬಂದ್

ಕಂಪನಿಯು ವಿವಿಧ ವಯೋಮಾನದವರಲ್ಲಿ ವಿಮೆ ಖರೀದಿಸುವ ಅಭ್ಯಾಸಗಳಲ್ಲಿ ಬದಲಾವಣೆ ಆಗುತ್ತಿರುವುದನ್ನು ಕಂಡಿದೆ. ಎಲ್ಲಾ ವಿಭಾಗದಲ್ಲಿನ ಸರಾಸರಿ ವಿಮಾ ಮೊತ್ತದಲ್ಲಿ ವಾರ್ಷಿಕ ಹೆಚ್ಚಳ ಕಂಡುಬಂದಿದೆ. ಉದಾಹರಣೆಗೆ, 0 -17 ವರ್ಷ ವಯಸ್ಸಿನವರ ಸರಾಸರಿ ವಿಮಾ ಮೊತ್ತವು 2024 -2025 ರಿಂದ 2025 -2026 ಕ್ಕೆ ಶೇ. 7ಕ್ಕಿಂತ ಹೆಚ್ಚಾಗಿದ್ದು, ಇದು ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚಿನ ಆರೋಗ್ಯ ವಿಮಾ ರಕ್ಷಣೆಯನ್ನು ಪಡೆಯುತ್ತಿರುವುದನ್ನು ಸೂಚಿಸುತ್ತದೆ. ಇದಲ್ಲದೆ, ಮೊದಲ ಬಾರಿಗೆ ವಿಮೆ ಖರೀದಿಸುವವರು (18 -35 ವರ್ಷ ವಯಸ್ಸಿನವರು), 2025 -2026ನೇ ಸಾಲಿನಲ್ಲಿನ ಒಟ್ಟು ಪಾಲಿಸಿದಾರರಲ್ಲಿ ಶೇ. 30ಕ್ಕಿಂತ ಹೆಚ್ಚಿನ ಪಾಲನ್ನು ಹೊಂದುವ ಮೂಲಕ ದೊಡ್ಡ ವಿಭಾಗವಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, 2025- 2026 ರಲ್ಲಿ ಹಿರಿಯ ನಾಗರಿಕರ (60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಪ್ರಮಾಣವು ಸುಮಾರು ಶೇ. 14ಕ್ಕೆ ಏರಿದೆ.

ಪಾವತಿ ಮಾಡಲಾದ ವಿಮಾ ಕ್ಲೈಮ್‌ ಗಳ ಆಧಾರದಲ್ಲಿ ಪ್ರಮುಖವಾಗಿ ಬಾಧಿಸುತ್ತಿರುವ ವೈದ್ಯಕೀಯ ಕಾಯಿಲೆಗಳ ಕುರಿತು ವಿಶ್ಲೇಷಣೆ ಮಾಡಲಾಗಿದ್ದು, ಡೆಂಗ್ಯೂ, ಮಲೇರಿಯಾ ಮತ್ತು ಸಾಮಾನ್ಯ ಜ್ವರ, ಉಸಿರಾಟದ ಸೋಂಕುಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳಂತಹ ಜೀವನಶೈಲಿ ಸಂಬಂಧಿತ ಕಾಯಿಲೆಗಳು, ಕ್ಯಾನ್ಸರ್ ಮತ್ತು ಆರ್ಥ್ ರೈಟಿಸ್ ಸಮಸ್ಯೆಗಳು ಹೆಚ್ಚಾಗಿರುವುದು ಕಂಡು ಬಂದಿದೆ. ಇದು ಜೀವನಶೈಲಿ ರೋಗಗಳು ಮತ್ತು ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಮಾಣದ ಕ್ಲೈಮ್‌ ಗಳನ್ನು ಮಾಡುತ್ತಿರುವುದನ್ನು ಸೂಚಿಸುತ್ತದೆ.

ಗಣನೀಯ ಸಂಖ್ಯೆಯ ಗ್ರಾಹಕರು ಈಗ ತಮ್ಮ ಆರೋಗ್ಯ ವಿಮೆಯನ್ನು ನಿರ್ವಹಿಸಲು ಡಿಜಿಟಲ್ ವಿಧಾನಗಳನ್ನು ಬಳಸುತ್ತಿದ್ದಾರೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ವಿಮೆ ಖರೀದಿಸುವ ಉದ್ದೇಶದೊಂದಿಗೆ ವೆಬ್‌ ಸೈಟ್‌ ಗೆ ಭೇಟಿ ನೀಡುವವರ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಇದಲ್ಲದೆ, ಹೆಚ್ಚಿನ ಗ್ರಾಹಕರು ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣೆ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಗಮನ ಹರಿಸುತ್ತಿದ್ದಾರೆ. ತಮ್ಮ ವಿಮಾ ಪ್ರೀಮಿಯಂ ನವೀಕರಣದ ಮೇಲೆ ರಿಯಾಯಿತಿ ಪಡೆಯಲು ನಮ್ಮ ಮೊಬೈಲ್ ಆ್ಯಪ್‌ ನಲ್ಲಿ 'ಸ್ಟೆಪ್ ಟ್ರ್ಯಾಕಿಂಗ್' (ಹೆಜ್ಜೆಗಳನ್ನು ಎಣಿಸುವುದು) ವೈಶಿಷ್ಟ್ಯವನ್ನು ಬಳಸಿದ ಜನರ ಸಂಖ್ಯೆಯಲ್ಲಿ 2.5 ಪಟ್ಟು ಹೆಚ್ಚಳವಾಗಿದೆ.

ಈಗ ಆನ್‌ ಲೈನ್ ವಿಧಾನವೇ ಅತ್ಯಂತ ಆದ್ಯತೆಯ ನವೀಕರಣ ವಿಧಾನವಾಗಿದ್ದು, ಸುಮಾರು ಶೇ. 10ರಷ್ಟು ಹೆಚ್ಚಿನ ಗ್ರಾಹಕರು ಡಿಜಿಟಲ್ ಆಗಿ ಪ್ರೀಮಿಯಂ ಪಾವತಿಸುತ್ತಿದ್ದಾರೆ. ಅದೇ ರೀತಿ, ಆ್ಯಪ್ ಆಧಾರಿತ ಸೇವೆಗಳ ಬೇಡಿಕೆಯೂ ಹೆಚ್ಚಾಗಿದೆ. ಕ್ಲೈಮ್‌ ಗಳನ್ನು ಸಲ್ಲಿಸಲು, ಪಾಲಿಸಿಗಳನ್ನು ನವೀಕರಿಸಲು, ಆಸ್ಪತ್ರೆಗಳ ಜಾಲವನ್ನು ಹುಡುಕಲು ಅಥವಾ ಆರೋಗ್ಯ ತಪಾಸಣೆಗೆ ಸಮಯ ನಿಗದಿಪಡಿಸಲು ಗ್ರಾಹಕರು ಹೆಚ್ಚಾಗಿ ಕೇರ್ ಹೆಲ್ತ್ ಮೊಬೈಲ್ ಆ್ಯಪ್ (Care Health – Customer App) ಬಳಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಸುಮಾರು ಶೇ. 30ರಷ್ಟು ಗ್ರಾಹಕರು ಆ್ಯಪ್ ಮೂಲಕ ಕ್ಲೈಮ್‌ ಗಳನ್ನು ಸಲ್ಲಿಸಿದ್ದಾರೆ ಮತ್ತು ಶೇ. 15ಕ್ಕೂ ಹೆಚ್ಚು ಪಾಲಿಸಿ ನವೀಕರಣಗಳು ಮೊಬೈಲ್ ಆ್ಯಪ್ ಮೂಲಕ ನಡೆದಿವೆ.

ಸಮಗ್ರ ಆರೋಗ್ಯ ರಕ್ಷಣಾ ಕವರೇಜ್ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಟಾಪ್ -ಅಪ್ ಕವರೇಜ್, ಓಪಿಡಿ ಪ್ರಯೋಜನಗಳು, ಯೋಗಕ್ಷೇಮ ಯೋಜನೆಗಳು, ಟೆಲಿಕನ್ಸಲ್ಟೇಶನ್, ಮನೆ ಆರೈಕೆ ಮತ್ತು ನಗದುರಹಿತ ವೈದ್ಯಕೀಯ ಸೇವೆ ಒದಗಿಸುವವರ ವಿಶಾಲ ಜಾಲ ಇವೆಲ್ಲವೂ ಗ್ರಾಹಕರು ವಿಮೆ ಖರೀದಿಸುವ ಮೊದಲು ಪರಿಗಣಿಸುವ ಪ್ರಮುಖ ಅಂಶಗಳಾಗಿವೆ ಮತ್ತು ಇದು ಸರಿಯಾದ ಕ್ರಮವೂ ಹೌದು!