ಜಾಗತಿಕ ನೇತ್ರವಿಜ್ಞಾನ ಸಂಸ್ಥೆಯಿಂದ ಪ್ರೊ.ಡಾ.ಶ್ರೀ ಗಣೇಶ್ ಅವರಿಗೆ ಪ್ರತಿಷ್ಠಿತ 'ಎಲ್ಐಎಂ' ಉಪನ್ಯಾಸ ಗೌರವ
APACRS 2026ರ ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ನೇತ್ರವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ ಇದನ್ನು ನೀಡಲಾಗು ತ್ತದೆ. ಈ ಪ್ರಶಸ್ತಿಯು 35 ವರ್ಷಗಳ ಇತಿಹಾಸದಲ್ಲಿ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಭಾರತದ ಕೇವಲ ಮೂರನೇ ನೇತ್ರ ತಜ್ಞರು ಎಂಬ ಹೆಗ್ಗಳಿಕೆಗೆ ಪ್ರೊ.ಡಾ.ಶ್ರೀ ಗಣೇಶ್ ಪಾತ್ರರಾಗಿದ್ದಾರೆ.
-
ಬೆಂಗಳೂರು: ಬೆಂಗಳೂರು ಮೂಲದ ನೇತ್ರ ತಜ್ಞ ಹಾಗೂ ನೇತ್ರಧಾಮ ಸೂಪರ್ ಸ್ಪೆಷ್ಯಾಲಿಟಿ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಪ್ರೊ.ಡಾ.ಶ್ರೀ ಗಣೇಶ್ ಅವರಿಗೆ ಏಷ್ಯಾ-ಪೆಸಿಫಿಕ್ ಅಸೋಸಿಯೇಷನ್ ಆಫ್ ಕ್ಯಾಟರಾಕ್ಟ್ ಆಂಡ್ ರಿಫ್ರಾಕ್ಟಿವ್ ಸರ್ಜನ್ಸ್ (APACRS) ಸಂಸ್ಥೆಯು ಪ್ರತಿಷ್ಠಿತ 'ಲಿಮ್ ಉಪನ್ಯಾಸ' (LIM Lecture) ಗೌರವ ನೀಡಿ ಸನ್ಮಾನಿಸಿದೆ.
ಇದು ಜಾಗತಿಕವಾಗಿ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಮತ್ತು ವಕ್ರೀಭವನ ಶಸ್ತ್ರಚಿಕಿತ್ಸಾ (ರಿಫ್ರಾಕ್ಟಿವ್ ಸರ್ಜರಿ) ಕ್ಷೇತ್ರದಲ್ಲಿ ನೀಡಲಾಗುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ.
APACRS 2026ರ ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ನೇತ್ರವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ ಇದನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯು 35 ವರ್ಷಗಳ ಇತಿಹಾಸದಲ್ಲಿ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಭಾರತದ ಕೇವಲ ಮೂರನೇ ನೇತ್ರ ತಜ್ಞರು ಎಂಬ ಹೆಗ್ಗಳಿಕೆಗೆ ಪ್ರೊ.ಡಾ.ಶ್ರೀ ಗಣೇಶ್ ಪಾತ್ರ ರಾಗಿದ್ದಾರೆ.
"1991 ರಲ್ಲಿ ಸ್ಥಾಪನೆಯಾದ ಈ ಗೌರವವನ್ನು, ಆಧುನಿಕ ನೇತ್ರ ಚಿಕಿತ್ಸಾ ಪದ್ಧತಿಯನ್ನು ರೂಪಿಸಿದ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸಿಸಲ್ಪಟ್ಟ ಮೊದಲಿಗರ ಆಯ್ದ ಗುಂಪಿಗೆ ನೀಡಲಾಗಿದೆ."
ಈ ಗೌರವವು, ಮೂರು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ ರಿಫ್ರಾಕ್ಟಿವ್ ಶಸ್ತ್ರಚಿಕಿತ್ಸಾ (refractive surgery) ಕ್ಷೇತ್ರಕ್ಕೆ ಪ್ರೊ. ಡಾ. ಶ್ರೀ ಗಣೇಶ್ ಅವರು ನೀಡಿದ ಕೊಡುಗೆ ಗಳನ್ನು ಗುರುತಿಸುತ್ತದೆ. 75,000 ಕ್ಕೂ ಹೆಚ್ಚು ರಿಫ್ರಾಕ್ಟಿವ್ ಪ್ರಕ್ರಿಯೆಗಳು ಮತ್ತು 1.2 ಲಕ್ಷಕ್ಕೂ ಹೆಚ್ಚು ಕಣ್ಣಿನ ಪೊರೆ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿರುವ ಇವರು, ದೃಷ್ಟಿ ದೋಷ ಸರಿಪಡಿಸುವ ಪ್ರತಿಯೊಂದು ಪ್ರಮುಖ ಬೆಳವಣಿಗೆಯಲ್ಲೂ ಮುಂಚೂಣಿಯಲ್ಲಿದ್ದಾರೆ—ಅದು ರೇಡಿಯಲ್ ಕೆರಾಟೊಟಮಿ ಮತ್ತು ಲಾಸಿಕ್ (LASIK) ನಿಂದ ಹಿಡಿದು ಇತ್ತೀಚಿನ ತಲೆಮಾರಿನ ಲೆಂಟಿಕ್ಯೂಲ್-ಆಧಾರಿತ ಕಾರ್ಯವಿಧಾನಗಳು ಮತ್ತು ಟಿಶ್ಯೂ-ಅಡಿಷನ್ ತಂತ್ರಗಳವರೆಗೂ ವ್ಯಾಪಿಸಿದೆ.
ತಮ್ಮ ಕೃತಜ್ಞತೆ ವ್ಯಕ್ತಪಡಿಸುತ್ತಾ ಪ್ರೊ. ಡಾ. ಶ್ರೀ ಗಣೇಶ್ ಅವರು ಹೀಗೆ ಹೇಳಿದರು, "ಈ ಗೌರವ ಸ್ವೀಕರಿಸಲು ನಾನು ವಿನಮ್ರನಾಗಿದ್ದೇನೆ. ಈ ಮನ್ನಣೆಯು ನನಗೆ ಎಷ್ಟು ಸಲ್ಲುತ್ತದೆಯೋ, ಅಷ್ಟೇ ನೇತ್ರಾಧಾಮ ಮತ್ತು ಅದರ ಸಮರ್ಪಿತ ತಂಡಕ್ಕೂ ಸಲ್ಲುತ್ತದೆ. ಕಳೆದ 32 ವರ್ಷಗಳಿಂದ, ರೋಗಿಗಳ ಆರೈಕೆಯಲ್ಲಿ ಅತ್ಯುನ್ನತ ಗುಣಮಟ್ಟವನ್ನು ನೀಡುವ ಜೊತೆಗೆ ಹೊಸತನ, ಸಂಶೋಧನೆ ಮತ್ತು ಶಿಕ್ಷಣದ ಮೂಲಕ ವಕ್ರೀಕಾರಕ ಶಸ್ತ್ರಚಿಕಿತ್ಸೆಯ (refractive surgery) ಗಡಿಗಳನ್ನು ವಿಸ್ತರಿಸುವುದು ನಮ್ಮ ಪ್ರಯತ್ನವಾಗಿದೆ. ಈ ಗೌರವವು ಭಾರತೀಯ ನೇತ್ರವಿಜ್ಞಾನಕ್ಕೂ ಸಲ್ಲಿಸುವ ಗೌರವವಾಗಿದೆ ಎಂದು ನಾನು ನಂಬುತ್ತೇನೆ. ಇಂದು ಭಾರತೀಯ ನೇತ್ರವಿಜ್ಞಾನವು ಕಣ್ಣಿನ ಆರೈಕೆಯ ಭವಿಷ್ಯ ರೂಪಿಸುವಲ್ಲಿ ವಿಶ್ವದ ಅತ್ಯುತ್ತಮ ಸಂಸ್ಥೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ."
ಪ್ರೊ. ಡಾ. ಶ್ರೀ ಗಣೇಶ್ ಅವರು 60ಕ್ಕೂ ಹೆಚ್ಚು ಪೀರ್-ವಿಮರ್ಶಿತ (peer-reviewed) ವೈಜ್ಞಾನಿಕ ಪ್ರಕಟಣೆಗಳನ್ನು ರಚಿಸಿದ್ದಾರೆ. ಅಲ್ಲದೆ, ಹೈಪರೋಪಿಯಾ (ದೂರದೃಷ್ಟಿ ದೋಷ) ಮತ್ತು ಕೆರಟೊಕೋನಸ್ ಚಿಕಿತ್ಸೆಗಾಗಿ ಕಾರ್ನಿಯಲ್ ಲೆಂಟಿಕ್ಯುಲ್ ಎಕ್ಸ್‌ಟ್ರಾಕ್ಷನ್ (corneal lenticule extraction) ಮತ್ತು ಟಿಶ್ಯೂ-ಅಡಿಷನ್ (tissue-addition) ತಂತ್ರಜ್ಞಾನಗಳಲ್ಲಿ ಮೊದಲಿಗರಾಗಿ ಕಾರ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಸಂಶೋಧನೆ ಮತ್ತು ಆವಿಷ್ಕಾರಗಳು ವಕ್ರೀ ಕಾರಕ ಶಸ್ತ್ರಚಿಕಿತ್ಸೆಯ (refractive surgery) ಸಾಧ್ಯತೆಗಳನ್ನು ವಿಸ್ತರಿಸಲು ಸಹಾಯ ಮಾಡಿದ್ದು, ವಿಶ್ವಾದ್ಯಂತ ನೇತ್ರ ವೈದ್ಯಕೀಯ ಪದ್ಧತಿಯ ಮೇಲೆ ಪ್ರಭಾವ ಬೀರಿವೆ.
"1994 ರಲ್ಲಿ ಪ್ರೊ. ಡಾ. ಶ್ರೀ ಗಣೇಶ್ ಅವರಿಂದ ಸ್ಥಾಪಿಸಲ್ಪಟ್ಟ ನೇತ್ರಾಧಾಮವು, ಇಂದು ಭಾರತದ ಪ್ರಮುಖ ಕಣ್ಣಿನ ಆರೈಕೆ, ಸಂಶೋಧನೆ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿ ಬೆಳೆದಿದೆ. ಈ ಸಂಸ್ಥೆಯು ಭಾರತ ಮತ್ತು ಪ್ರಪಂಚದಾದ್ಯಂತದ ರೋಗಿಗಳಿಗೆ ಸುಧಾರಿತ ಕಣ್ಣಿನ ಆರೈಕೆಯನ್ನು ನೀಡುವ ಜೊತೆಗೆ ವೈಜ್ಞಾನಿಕ ಆವಿಷ್ಕಾರಗಳಿಗೆ ತನ್ನ ಕೊಡುಗೆಯನ್ನು ಮುಂದುವರಿಸಿದೆ."