ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜ್ಯದಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟ; ಒಂದೇ ತಿಂಗಳಲ್ಲಿ 3,509 ಕೋಟಿ ಆದಾಯ!

ರಾಜ್ಯದಲ್ಲಿ ಅಬಕಾರಿ ಆದಾಯದಲ್ಲಿ ಐತಿಹಾಸಿಕ ಏರಿಕೆಯನ್ನು ಕಂಡಿದ್ದು ಮೇ ಮತ್ತು ಜೂನ್ ತಿಂಗಳ ಮದ್ಯದ ವ್ಯಾಪಾರದಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ ಮೂರೂವರೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದುಬಂದಿದೆ. ಹೊಸ ಆಲ್ಕೋಹಾಲ್-ಇನ್-ಬೀವರೇಜ್ (AIB) ಅಬಕಾರಿ ನೀತಿಯನ್ನು ಪ್ರಾರಂಭಿಸಿದ ಬಳಿಕ ಈ ಏರಿಕೆ ಕಂಡು ಬಂದಿದೆ.

ರಾಜ್ಯದಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 17, 2026 10:35 AM

ಬೆಂಗಳೂರು: ರಾಜ್ಯದಲ್ಲಿ ಅಬಕಾರಿ ಆದಾಯದಲ್ಲಿ ಐತಿಹಾಸಿಕ ಏರಿಕೆಯನ್ನು ಕಂಡಿದ್ದು ಮೇ ಮತ್ತು ಜೂನ್ ತಿಂಗಳ ಮದ್ಯದ ವ್ಯಾಪಾರದಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ ಮೂರೂವರೆ (liquor sales) ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದುಬಂದಿದೆ. ಹೊಸ ಆಲ್ಕೋಹಾಲ್-ಇನ್-ಬೀವರೇಜ್ (AIB) ಅಬಕಾರಿ ನೀತಿಯನ್ನು ಪ್ರಾರಂಭಿಸಿದ ಬಳಿಕ ಈ ಏರಿಕೆ ಕಂಡು ಬಂದಿದೆ. ಹೊಸ ನೀತಿಯು ಮದ್ಯವನ್ನು ಬಾಟಲಿಯ ಗಾತ್ರಕ್ಕಿಂತ ಹೆಚ್ಚಾಗಿ ಅದರ ಆಲ್ಕೋಹಾಲ್ ಅಂಶವನ್ನು ಆಧರಿಸಿ ತೆರಿಗೆ ವಿಧಿಸುತ್ತದೆ.

ಆಲ್ಕೋಹಾಲ್ ಇನ್ ಬೆವರೇಜ್ ಅಂಶವನ್ನು ಆಧರಿಸಿ ಮದ್ಯಕ್ಕೆ ತೆರಿಗೆ ವಿಧಿಸುವ ಹೊಸ ಅಬಕಾರಿ ನೀತಿಯು ದಾಖಲೆಯ ಆರಂಭವನ್ನು ನೀಡಿದ್ದು, ಇದು ಜಾರಿಗೆ ಬಂದ ಕೇವಲ ಒಂದು ತಿಂಗಳೊಳಗೆ 3,509 ಕೋಟಿ ರೂ ಆದಾಯ ಗಳಿಸಿದೆ. ಹೊಸ ಅಬಕಾರಿ ನೀತಿಯಲ್ಲಿ, ಪ್ರೀಮಿಯಂ ಬ್ರ್ಯಾಂಡ್‌ಗಳನ್ನು ಅಗ್ಗವಾಗಿಸುತ್ತದೆ ಮತ್ತು ಅಗ್ಗದ ಸ್ಥಳೀಯ ಮದ್ಯದ ಮೇಲೆ ತೆರಿಗೆಯನ್ನು ಹೆಚ್ಚಿಸುತ್ತದೆ. ಒಂದೇ ತಿಂಗಳಲ್ಲಿ 3,509 ಕೋಟಿ ರೂ.ಗಳಿಗೂ ಹೆಚ್ಚು ಆದಾಯವನ್ನು ಗಳಿಸಿದೆ ಎನ್ನಲಾಗಿದೆ.

ವಿಶೇಷವಾಗಿ ಈ ಬಾರಿ ಬಿಯರ್ ಭಾರಿ ಪ್ರಮಾಣದಲ್ಲಿ ಮಾರಾಟವಾಗಿದೆ. ಕಳೆದ ವರ್ಷ ಮೇ 11 ರಿಂದ ಜೂನ್ 11ರ ಅವಧಿಗೆ ಹೋಲಿಸಿದರೆ, ಈ ವರ್ಷ ಇದೇ ಅವಧಿಯಲ್ಲಿ ಬಿಯರ್ ಮಾರಾಟ ಶೇಕಡಾ 59.4 ರಷ್ಟು ಹೆಚ್ಚಾಗಿದ್ದು, ಬರೋಬ್ಬರಿ 403.1 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಇತ್ತ ಐಎಂಎಲ್ ಮದ್ಯದ ಮಾರಾಟ ಕೂಡ ಹೆಚ್ಚಾಗಿದ್ದು, 443.5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಇತ್ತ ಐಎಂಎಲ್ ಮದ್ಯದ ಮಾರಾಟ ಕೂಡ ಹೆಚ್ಚಾಗಿದ್ದು, 443.5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,022 ಕೋಟಿ ರೂ ವ್ಯಾಪಾರವಾಗಿತ್ತು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಹಣ್ಣು-ತರಕಾರಿ, ಖಾದ್ಯ ಎಣ್ಣೆ ದುಬಾರಿ ಸಾಧ್ಯತೆ

ಸಾಮಾನ್ಯ ಜನರು ಹೆಚ್ಚಾಗಿ ಬಳಸುವ ವಿಸ್ಕಿ, ರಮ್, ಬ್ರಾಂಡಿ ಮತ್ತು ವೋಡ್ಕಾದಂತಹ ಅಗ್ಗದ ಮದ್ಯಗಳ ಬೆಲೆ ಶೇ.20ರಿಂದ 30ರಷ್ಟು ಏರಿಕೆಯಾಗಿದೆ. ಬಿಯರ್‌, ಪ್ರೀಮಿಯಂ ಮತ್ತು ಐಷಾರಾಮಿ ವಿದೇಶಿ ಬ್ರಾಂಡ್‌ ಮದ್ಯಗಳ ದರ‌ ಶೇ.16ರಿಂದ 20ರಷ್ಟು ಇಳಿಕೆಯಾಗಿದೆ. ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಯ ಆದಾಯ ಸಂಗ್ರಹಣೆ ಗುರಿಯನ್ನು 45 ಸಾವಿರ ಕೋಟಿ ರೂ.ಗೆ ಹೆಚ್ಚಿಸಿದೆ.