ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಪಿ ಖಾತೆಯಲ್ಲಿದ್ದ 9 ಲಕ್ಷ ರು. ಸ್ಥಗಿತ: ನಕಲಿ ಔಷಧಿ ಜಾಲ: 5 ಕಡೆ ಇ.ಡಿ ಶೋಧ

ರಾಜಧಾನಿಯಲ್ಲಿ ಬೆಳಕಿಗೆ ಬಂದಿರುವ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಆರ್ ದಾಖಲಿಸಿಕೊಂಡಿರುವ ಅಧಿಕಾರಿಗಳು, ನಗರದ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ನಕಲಿ ಔಷಧಿ ಜಾಲ: 5 ಕಡೆ ಇ.ಡಿ ಶೋಧ

-

Profile
Ashok Nayak Nov 4, 2026 9:41 AM

ಬೆಂಗಳೂರು: ರಾಜಧಾನಿಯಲ್ಲಿ ಬೆಳಕಿಗೆ ಬಂದಿರುವ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಆರ್ ದಾಖಲಿಸಿಕೊಂಡಿರುವ ಅಧಿಕಾರಿಗಳು, ನಗರದ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ನಕಲಿ ಔಷಧಿ ದಂಧೆಯ ಹಣಕಾಸು ವಹಿವಾಟು ಹಾಗೂ ಅದರ ಹಿಂದಿರುವ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಇ.ಡಿ ಅಧಿಕಾರಿಗಳು, ಆರೋಪಿ ವೀರೇಶ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಖಾತೆಯಲ್ಲಿದ್ದ ಸುಮಾರು 9 ಲಕ್ಷ ರು. ಹಣವನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆಗೆ ಪೂರಕವಾಗಬಹುದಾದ ಡಿಜಿಟಲ್ ಉಪಕರಣ ಗಳು, ಎಲೆಕ್ಟ್ರಾನಿಕ್ ದಾಖಲೆಗಳು ಹಾಗೂ ಇತರ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿ ದ್ದಾರೆ.

ಇದನ್ನೂ ಓದಿ: Bangalore News: ​ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ

ಪರವಾನಗಿ ಇಲ್ಲದೆ ಔಷಧಿ ಉತ್ಪಾದನೆ: ಔಷಧಿ ತಯಾರಿಕೆಗೆ ಅಗತ್ಯವಾದ ಅಧಿಕೃತ ಪರವಾನಗಿ ಪಡೆಯದೆಯೇ ಉತ್ಪಾದನಾ ಚಟುವಟಿಕೆಗಳನ್ನು ಎಂಬ ಗಂಭೀರ ಕೇಳಿಬಂದಿದೆ. ನಡೆಸಲಾಗಿದೆ ಆರೋಪ ಆರ್.ಪ್ರಶಾಂತ್ ಎಂಬುವವರು ಬಿಡದಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಈ ಅಕ್ರಮ ಚಟುವಟಿಕೆಗಳಿಗೆ ವ್ಯವಸ್ಥೆ ಕಲ್ಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕಡಿಮೆ ಬೆಲೆಗೆ ಔಷಧಿ ಖರೀದಿ: ತನಿಖೆಯ ಹೊರರಾಜ್ಯಗಳಿಂದ ದರದಲ್ಲಿ ದೊಡ್ಡ ಪ್ರಕಾರ, ಕಡಿಮೆ ಪ್ರಮಾಣದ ಔಷಧಿಗಳನ್ನು ಖರೀದಿಸಿ ತರಲಾಗು ತ್ತಿತ್ತು. ಬಳಿಕ ಅವುಗಳನ್ನು ಹೊಸ ವಯಲ್‌ಗಳಿಗೆ ವರ್ಗಾಯಿಸಿ ಮರುಪ್ಯಾಕಿಂಗ್ ಮತ್ತು ಮರುಲೇ ಬಲಿಂಗ್ ಮಾಡಲಾ ಗುತ್ತಿತ್ತು. ಈ ಮೂಲಕ ಔಷಧಿಗಳ ಮೂಲ ಮತ್ತು ಉತ್ಪಾದನೆಗೆ ಸಂಬಂಧಿಸಿದ ವಿವರಗಳನ್ನು ಮರೆಮಾಚುವ ಪ್ರಯತ್ನ ಬಗ್ಗೆಯೂ ನಡೆದಿತ್ತೇ ಎಂಬ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಆ.18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹಾಗೂ ದೊಡ್ಡೇರಿ ಭಾಗದ ಫಾರ್ಮ್ ಹೌಸ್ ಮತ್ತು ಅನಧಿಕೃತ ಪ್ಯಾಕಿಂಗ್ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ತಪಾಸಣಾ ಕಾರ್ಯಾಚರಣೆಯ ವೇಳೆ ಪ್ರಸಿದ್ಧ ಬಹುರಾಷ್ಟ್ರೀಯ ಫಾರ್ಮಾ ಕಂಪನಿಗಳು, ಬ್ರ್ಯಾಂಡ್‌ಗಳ ನಕಲಿ ಲೇಬಲ್ ಹಾಗೂ ಪ್ಯಾಕಿಂಗ್ ಸಾಮಗ್ರಿ ಮತ್ತು ಅಂದಾಜು 4.5 ರಿಂದ 5 ಕೋಟಿ ರು. ಮೌಲ್ಯದ ಜಪ್ತಿಯಾಗಿದ್ದವು.

ನಕಲಿ ಔಷಧಗಳು ತುರ್ತು ನಿಗಾ ಘಟಕಗಳಲ್ಲಿ ಗಂಭೀರ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧ ಗಳನ್ನು ಅತ್ಯಂತ ಕಳಪೆ ಮಟ್ಟದಲ್ಲಿ ನಕಲು ತಯಾರಿಸಿ, ಮಾರುಕಟ್ಟೆಗೆ ಹಾಗೂ ವಿವಿಧ ಆಸ್ಪತ್ರೆಗಳಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸರಬರಾಜು ಮಾಡುತ್ತಿದ್ದ ಆತಂಕಕಾರಿ ವಿಷಯ ಬೆಳಕಿಗೆ ಬಂದಿತ್ತು.