ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SIR: ಎಸ್‌ʼಐಆರ್‌ ಪರಿಷ್ಕರಣೆ: ಶೇ.99.96 ರಷ್ಟು ಪೂರ್ಣ

2026ರ ಜೂನ್ 16ರಂದು ಮತದಾರರ ಪಟ್ಟಿಯಲ್ಲಿ ಇದ್ದ 5,54,32,314 ಮತದಾರರಿಗೆ ಎನ್ಯು ಮರೇಷನ್ ಫಾರ್ಮ್ʼಗಳನ್ನು ಮನೆ ಮನೆಗೆ ತಲುಪಿಸಿ, ಅವುಗಳನ್ನು ಮರಳಿ ಪಡೆದು ಡಿಜಿಟಲೀಕರಣ ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈವರೆಗೆ 5,53,3,75 ಫಾರ್ಮ್‌ಗಳನ್ನು ಡಿಜಿಟಲೀಕರಿಸಲಾಗಿದೆ. ಕೇವಲ 22,977 ಫಾರ್ಮ್‌ಗಳು ಮಾತ್ರ ಬಾಕಿ ಉಳಿದಿದ್ದು, ಇವು ಸಹ ಒಂದು ಅಥವಾ ಎರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ

SIR: ಎಸ್‌ʼಐಆರ್‌ ಪರಿಷ್ಕರಣೆ: ಶೇ.99.96 ರಷ್ಟು ಪೂರ್ಣ

-

Profile
Ashok Nayak Aug 6, 2026 8:45 AM

ಆ.17ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ

16.3 ಲಕ್ಷಕ್ಕೂ ಹೆಚ್ಚು ಮತದಾರರು ಪತ್ತೆಯಾಗಿಲ್ಲ

ಬೆಂಗಳೂರು ವ್ಯಾಪ್ತಿಯಲ್ಲಿ ಕೇವಲ ಶೇ.52.42 ಎನ್ಯೂಮರೇಷನ್ ಫಾರ್ಮ್ ವಾಪಸ್: ಅನ್ಬುಕುಮಾರ್

ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಆಗ 5ರ ವೇಳೆಗೆ ಶೇ.99.96ರಷ್ಟು ಎನ್ಯುಮರೇಷನ್ ಕಾರ್ಯ ಪೂರ್ಣಗೊಂಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಎಸ್‌ಐಆರ್ ಪರಿಷ್ಕರಣೆ ಪ್ರಕ್ರಿ ಯೆಯಲ್ಲಿ 16.3 ಲಕ್ಷಕ್ಕೂ ಹೆಚ್ಚು ಮತದಾರರು ಪತ್ತೆಯಾಗಿಲ್ಲ.

2026ರ ಜೂನ್ 16ರಂದು ಮತದಾರರ ಪಟ್ಟಿಯಲ್ಲಿ ಇದ್ದ 5,54,32,314 ಮತದಾರರಿಗೆ ಎನ್ಯು ಮರೇಷನ್ ಫಾರ್ಮ್ʼಗಳನ್ನು ಮನೆ ಮನೆಗೆ ತಲುಪಿಸಿ, ಅವುಗಳನ್ನು ಮರಳಿ ಪಡೆದು ಡಿಜಿಟಲೀ ಕರಣ ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈವರೆಗೆ 5,53,3,75 ಫಾರ್ಮ್‌ಗಳನ್ನು ಡಿಜಿಟಲೀಕರಿಸಲಾಗಿದೆ. ಕೇವಲ 22,977 ಫಾರ್ಮ್‌ಗಳು ಮಾತ್ರ ಬಾಕಿ ಉಳಿದಿದ್ದು, ಇವು ಸಹ ಒಂದು ಅಥವಾ ಎರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.

ಜಿಬಿಎ ವ್ಯಾಪ್ತಿಯಲ್ಲಿ ಶೇ.52.42 ಫಾರ್ಮ್‌ಗಳಷ್ಟೇ ವಾಪಸ್: ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿ ಯಲ್ಲಿ ಒಟ್ಟು 1,03,88,363 ಮತದಾರರು ಇದ್ದಾರೆ. ಇವರಲ್ಲಿ 5,445,663 ಫಾರ್ಮ್‌ಗಳು ಮಾತ್ರ ವಾಪಸ್ ಬಂದಿದ್ದು, ಇದು ಶೇ.52.42ಕ್ಕೆ ಸಮನಾಗಿದೆ. ಆದ್ದರಿಂದ ಆಗ 17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 54.45 ಲಕ್ಷ ಮತದಾರರ ಹೆಸರುಗಳಷ್ಟೇ ಸೇರ್ಪಡೆಯಾಗಲಿದ್ದು, ಉಳಿದ 49,42,777ಮಂದಿ ಎಎಸ್‌ಡಿಒ ವರ್ಗದಲ್ಲಿ ಇರಲಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಆ.8ರ ಸಂಜೆವರೆಗೆ ಫಾರ್ಮ್ ತಿದ್ದುಪಡಿಗೆ ಅವಕಾಶ: ಸ್ಥಳಾಂತರ ಅಥವಾ ಗೈರು ಪಟ್ಟಿಗೆ ಸೇರಿದವರು ಕರ್ನಾಟಕದ ಬೇರೆ ಭಾಗದಲ್ಲಿ ವಾಸವಾಗಿದ್ದರೆ, ಅವರು ಹೊಸ ವಿಳಾಸದಲ್ಲಿ ಫಾರ್ಮ್-6 ಮೂಲಕ ನೋಂದಣಿ ಮಾಡಿಕೊಳ್ಳ ಬೇಕು. ಫಾರ್ಮ್-6 ಪ್ರತಿಯೊಂದು ಬಿಎಲ್ಒ ಬಳಿ ಲಭ್ಯವಿದ್ದು, ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಈಗಾಗಲೇ ಸುಮಾರು 3.80 ಲಕ್ಷ ಮಂದಿ ಆನ್‌ಲೈನ್ ಮೂಲಕ ಫಾರ್ಮ್-6 ಸಲ್ಲಿಸಿದ್ದಾರೆ. ಯಾವುದೇ ಮತದಾರರಿಗೆ ಬಿಎಲ್ಒ‌ ಎನ್ಯುಮರೇಷನ್ ಫಾರ್ಮ್ ನೀಡದೆ ಇದ್ದರೆ ಅಥವಾ ತಪ್ಪಾಗಿ ಎಎಸ್‌ಡಿಒ ಪಟ್ಟಿಗೆ ಸೇರಿಸಿದ್ದರೆ ಕೂಡಲೇ ಸಂಬಂಧಿತ ಬಿಎಲ್ಒ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು.

ಅಗತ್ಯವಿದ್ದರೆ ಆಗ 8ರ ಸಂಜೆವರೆಗೆ ಫಾರ್ಮ್‌ನ್ನು ಓವರ್‌ರೈಟ್ (ತಿದ್ದುಪಡಿ) ಮಾಡುವ ಅವಕಾಶ ಇದೆ. ಬಿಎಲ್ಒ ಹಂತದಲ್ಲಿಯೇ ಪಟ್ಟಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳು ಕೂಡ ಪಟ್ಟಿ ಪರಿಶೀಲಿಸಿ ತಪ್ಪುಗಳಿದ್ದರೆ ತಿಳಿಸಬೇಕು. ಮತದಾರರ ಪಟ್ಟಿಯ ಪರಿಶೀಲನೆಯಲ್ಲಿ ಇದುವರೆಗೆ ಸುಮಾರು 6,79,904‌  ಪುನರಾ ವರ್ತಿತ (ಡೂಪ್ಲಿಕೇಟ್) ಮತದಾರರನ್ನು ಗುರುತಿಸಲಾಗಿದೆ ಎಂದರು.

ಶೇ.79.93 ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಒಟ್ಟು ಮತದಾರರಲ್ಲಿ 4,43,04,632 (ಶೇ.79.93) ಮಂದಿ ಸಹಿ ಮಾಡಿ ತಮ್ಮ ವಿವರಗಳನ್ನು ಸಲ್ಲಿಸಿರುವುದರಿಂದ, ಅವರ ಹೆಸರುಗಳು ಆಗ 17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿವೆ. ಇನ್ನೊಂದೆಡೆ 1,11,04,705 (20.03%)) ಮಂದಿ ಮತದಾರರು ಎಎಸ್‌ಡಿಒ ಪಟ್ಟಿಗೆ ಸೇರಿದ್ದಾರೆ ಅದರಲ್ಲಿ ಗೈರು- 1,430,012, ವಿಳಾಸ ಬದಲಾವಣೆ- 6,664,943, ಮೃತರು- 16,30,872, ದ್ವಿಪಾತ್ರ ನೋಂದಣಿ-6,89,904, ಸಹಿ ನಿರಾಕರಣೆ ಸೇರಿದಂತೆ 4,88,974 ಜತೆಗೆ ಮೃತರು, ಡುಪ್ಲಿಕೇಟ್ ಹಾಗೂ ಸಹಿ ನಿರಾಕರಿಸಿದವರ ಒಟ್ಟು ಸಂಖ್ಯೆ ಸುಮಾರು 28.07 ಲಕ್ಷ ಎಂದು ಅನ್ಬು ಕುಮಾರ್ ತಿಳಿಸಿದರು.

34 ಲಕ್ಷಕ್ಕೂ ಹೆಚ್ಚು ನೋ ಮ್ಯಾಪಿಂಗ್ ಪ್ರಕರಣಗಳು

ಕರಡು ಪಟ್ಟಿ ಪ್ರಕಟವಾದ ಬಳಿಕ ಸುಮಾರು 34.07 ಲಕ್ಷ ನೋ ಮ್ಯಾಪಿಂಗ್ ಪ್ರಕರಣಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಅವುಗಳಲ್ಲಿ 2002ರ ದಾಖಲೆಗಳಿಗೆ ಹೊಂದಾಣಿಕೆಯಾಗದ ಮಾಹಿತಿ, ಸಂಬಂಧಿಕರ ದಾಖಲೆಗಳ ವ್ಯತ್ಯಾಸ, ಅಗತ್ಯ ದಾಖಲೆಗಳು ಲಭ್ಯವಿಲ್ಲದ ಪ್ರಕರಣಗಳು ಸೇರಿವೆ. ಇಂತಹ ಪ್ರಕರಣಗಳಿಗೆ ನಿಯಮಾನುಸಾರ ನೋಟಿಸ್ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಒಟ್ಟು 67 ದೂರುಗಳು ಬಂದಿದ್ದು, ಜುಲೈ 18ರಂದೇ ಸಮಸ್ಯೆ ಸರಿಪಡಿಸಿ, ಜುಲೈ 19ರಂದು ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗಿದೆ.

ಫಾರಂ-6ಗೆ ಕೊನೆಯ ದಿನಾಂಕ ನಿಗದಿಯಿಲ್ಲ

ಹೊಸ ಮತದಾರರು ಹಾಗೂ ವಿಳಾಸ ಬದಲಿಸಿಕೊಂಡವರು ಫಾರ್ಮ್-6 ಮೂಲಕ ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು. 2026ರ ಸೆಪ್ಟೆಂಬರ್ 16ರೊಳಗೆ ಫಾರ್ಮ್-6 ಸಲ್ಲಿಸಿದವರ ಹೆಸರು ಅಕ್ಟೋಬರ್ 17ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಯಾಗಲಿದೆ. ಅದರ ನಂತರ ಸಲ್ಲಿಸುವ ಅರ್ಜಿಗಳನ್ನು ಪೂರಕ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

image

ಇಲ್ಲಿಯವರೆಗೆ ಬಿಎಲ್‌ಒ ಎನ್ಯೂಮರೇಷನ್ ಕಾರ್ಯದಲ್ಲಿ ನಿರತರಾಗಿದ್ದ ಕಾರಣ ಫಾರ್ಮ್-6 ವಿತರಣೆ ಸೀಮಿತವಾಗಿತ್ತು. ಈಗ ಆಗ 8ಕ್ಕೆ ಮುನ್ನವೇ ಫಾರ್ಮ್-6 ವಿತರಿಸಲು ಎಲ್ಲಾ ಬಿಎಲ್‌ಒಗಳಿಗೆ ನಿರ್ದೇಶನ ನೀಡಲಾಗಿದೆ. ಬೆಂಗಳೂರು ಮಹಾನಗರ ಪ್ರದೇಶಕ್ಕೆ ಮಾತ್ರ ಸುಮಾರು 10 ಲಕ್ಷ ಫಾರ್ಮ್-6 ಮುದ್ರಿಸಲಾಗಿದ್ದು, ಅಗತ್ಯವಿದ್ದರೆ ಇನ್ನಷ್ಟು ಮುದ್ರಿಸಲು ಸಿದ್ಧತೆ ಮಾಡಿಕೊಂಡಿದೆ.

-ಅನ್ಬುಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ