ಟೀಚ್ ಫಾರ್ ಇಂಡಿಯಾದ ತರಗತಿಯಿಂದ ಜಾಗತಿಕ ವೇದಿಕೆಗೆ ಸುಮನ್
ತನ್ನ ಶಾಲೆಯಲ್ಲಿ ಸುಮನ್ ಟೀಚ್ ಫಾರ್ ಇಂಡಿಯಾ (ಟಿ.ಎಫ್.ಐ.)ನಲ್ಲಿ ಇತರೆ ಯಾವುದೇ ವಿದ್ಯಾರ್ಥಿ ಯ ಕಲಿಕೆಯಂತೆಯೇ ಇತ್ತು. ಟೀಚ್ ಫಾರ್ ಇಂಡಿಯಾ ವಿದ್ಯಾರ್ಥಿಯಾಗಿ ಆತನ ತರಗತಿಗಳು ಬರೀ ಪಠ್ಯಪುಸ್ತಕಗಳನ್ನು ಓದುವುದು ಅಥವಾ ಸಿದ್ಧಾಂತವನ್ನು ನೆನಪಿನಲ್ಲಿಟ್ಟು ಕೊಳ್ಳುವುದಲ್ಲ. ಬದಲಿಗೆ ಈ ಫೆಲೋಗಳು ಚಟುವಟಿಕೆಗಳು, ಚರ್ಚೆಗಳುಮತ್ತು ನಿಜ ಜೀವನದ ಉದಾಹರಣೆಗಳ ಮೂಲಕ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು
-
ಬೆಂಗಳೂರು: ವಿಶಿಷ್ಟ ಕಲಿಕೆಯ ಅನುಭವಗಳಿಂದ ಯು.ಡಬ್ಲ್ಯೂ.ಸಿ.ಯಲ್ಲಿ ಪೂರ್ಣ ಶಿಷ್ಯವೇತನ ದವರೆಗೆ ಸುಮನ್ ಪ್ರಯಾಣವು ಹೇಗೆ ಮಾರ್ಗದರ್ಶನ ಮತ್ತು ಕಠಿಣ ಬದ್ಧತೆಯು ಬಾಗಿಲುಗಳನ್ನು ತೆರೆಯಬಲ್ಲದು ಎಂದು ತೋರಿದೆ
ತನ್ನ ಶಾಲೆಯಲ್ಲಿ ಸುಮನ್ ಟೀಚ್ ಫಾರ್ ಇಂಡಿಯಾ (ಟಿ.ಎಫ್.ಐ.)ನಲ್ಲಿ ಇತರೆ ಯಾವುದೇ ವಿದ್ಯಾರ್ಥಿಯ ಕಲಿಕೆಯಂತೆಯೇ ಇತ್ತು. ಟೀಚ್ ಫಾರ್ ಇಂಡಿಯಾ ವಿದ್ಯಾರ್ಥಿಯಾಗಿ ಆತನ ತರಗತಿಗಳು ಬರೀ ಪಠ್ಯಪುಸ್ತಕಗಳನ್ನು ಓದುವುದು ಅಥವಾ ಸಿದ್ಧಾಂತವನ್ನು ನೆನಪಿನಲ್ಲಿಟ್ಟು ಕೊಳ್ಳುವುದಲ್ಲ. ಬದಲಿಗೆ ಈ ಫೆಲೋಗಳು ಚಟುವಟಿಕೆಗಳು, ಚರ್ಚೆಗಳುಮತ್ತು ನಿಜ ಜೀವನದ ಉದಾಹರಣೆಗಳ ಮೂಲಕ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಗುಂಪಿನಲ್ಲಿ ಕಲಿಕೆ, ಶೈಕ್ಷಣಿಕ ಕ್ರೀಡೆಗಳು ಮತ್ತು ಸಂವಹನೀಯ ಪಾಠಗಳು ಕಲಿಕೆಯನ್ನು ಸಕ್ರಿಯ ಮತ್ತು ತೊಡಗಿ ಕೊಳ್ಳುವಂತೆ ಮಾಡಿದ್ದಲ್ಲದೆ ವಿದ್ಯಾರ್ಥಿಗಳನ್ನು ತರಗತಿಯ ಆಚೆಗೂ ಸಿದ್ಧವಾಗಿಸುತ್ತಿದ್ದವು. ಈ ಕಲಿಕೆಯ ವಿಧಾನವು ಎಂದಿಗೂ ಬರೀ ಅಂಕಗಳನ್ನು ಪಡೆಯುವುದಾಗಿರಲಿಲ್ಲ; ಇದು ವಿದ್ಯಾರ್ಥಿ ಗಳಿಗೆ ಪ್ರಮುಖ ಜೀವನ ಕೌಶಲ್ಯಗಳೊಂದಿಗೆ ಸನ್ನದ್ಧಗೊಳಿಸುವುದು ಮತ್ತು ಅವರ ಕನಸುಗಳನ್ನು ಈಡೇರಿಸಿಕೊಳ್ಳಲು ವಿಶ್ವಾಸ ಮೂಡಿಸುವುದಾಗಿತ್ತು.
ಸುಮನ್ ಗೆ ಟಿ.ಎಫ್.ಐ. ಎನ್ನುವುದು ಕಲಿಕೆಗಿಂತ ಹೆಚ್ಚಿನದಾಗಿತ್ತು. ಆತ ಸಹಾನುಭೂತಿ, ನಾಯಕತ್ವ ಮತ್ತು ಸದೃಢತೆಯ ಮೌಲ್ಯಗಳನ್ನು ಅರಿತಿದ್ದಲ್ಲದೆ ತರಗತಿಯ ಒಳಗಡೆ ಮತ್ತು ಹೊರಗಡೆ ಸಹಪಾಠಿಗಳ ಬೆಂಬಲ ಪಡೆಯುತ್ತಿದ್ದನು. ಅವರ ಉತ್ತೇಜನದಿಂದ ಆತನಿಗೆ ಸವಾಲುಗಳನ್ನು ಎದುರಿಸಲು, ಅವಕಾಶಗಳನ್ನು ಕಂಡುಕೊಳ್ಳಲು ಮತ್ತು ಆತನ ಸಾಮರ್ಥ್ಯಗಳಲ್ಲಿ ನಂಬಿಕೆ ಇರಿಸಲು ನೆರವಾಯಿತು. “ನನ್ನ ಸಹಪಾಠಿಗಳು ನಾನು ನನ್ನನ್ನು ಮತ್ತು ನನ್ನ ಭವಿಷ್ಯವನ್ನು ನೋಡುವ ವಿಧಾನವನ್ನು ರೂಪಿಸಿದರು” ಎಂದು ಆತ ಹೇಳುತ್ತಾನೆ.
ಇದನ್ನೂ ಓದಿ: Harish Kera Column: ಅಪರಿಚಿತ ನಗರದಲ್ಲಿ ಬಿಡುಗಡೆಯ ನಡಿಗೆ
“ನಾನು ನನ್ನ ಸಾಮರ್ಥ್ಯದ ಕೊಂಚವನ್ನಾದರೂ ನಾನು ಕಂಡುಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ ಮತ್ತು ನಾನು ಅವರ ಮಾರ್ಗದರ್ಶನಕ್ಕೆ ಆಭಾರಿಯಾಗಿದ್ದೇನೆ” ಎಂದನು. “ಸುಮನ್ ಯು.ಡಬ್ಲ್ಯೂ.ಸಿ. (ಯುನೈಟೆಡ್ ವರ್ಲ್ಡ್ ಕಾಲೇಜ್)ಗೆ ಅರ್ಜಿ ಸಲ್ಲಿಸಿದಾಗ ಆತನ ಪ್ರಯಾಣ ಮಹತ್ತರ ಮೈಲಿಗಲ್ಲು ತಲುಪಿತು. ಈ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಬಂಧ ಬರಹ, ಗುಂಪು ಚಟುವಟಿಕೆ ಗಳು ಮತ್ತು ಹಲವು ಸಂದರ್ಶನಗಳನ್ನು ಒಳಗೊಂಡಿತ್ತು.ತನ್ನ ಸಹಪಾಠಿಯ ವಂದನಾ ಮಾರ್ಗದರ್ಶನದಲ್ಲಿ ಸುಮನ್ ಈ ಹಂತಗಳನ್ನು ಪರಿಶ್ರಮದಿಂದ ದಾಟಿದನು.
ತಂಡದ ಚಟುವಟಿಕೆಗಳಿಂದ ಪಾರಿಸರಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದು ಮತ್ತು ವೈಯಕ್ತಿಕ ಪ್ರಬಂಧಗಳವರೆಗೆ ಆತ ತನ್ನ ಬೌದ್ಧಿಕತೆ ಮತ್ತು ನಾಯಕತ್ವ ಪ್ರದರ್ಶಿಸಿದನು. ಬಹಳ ದೀರ್ಘ ಕಾಯುವಿಕೆ ನಂತರ ಆತನ ಪ್ರಯತ್ನಗಳು ಆತನ ಜೀವನವನ್ನೇ ಬದಲಾಯಿಸಿದ ಯು.ಡಬ್ಲ್ಯೂ.ಸಿ. ಅಡ್ರಿಯಾಟಿಕ್ ಗೆ ಶೇ.100 ಶಿಷ್ಯವೇತನ ಎಂಬ ಒಂದು ಕರೆಯ ಮೂಲಕ ಪುರಸ್ಕಾರ ತಂದವು. “ಆ ಕ್ಷಣವು ನನಗೆ ಅಭೂತಪೂರ್ವ ಆನಂದ, ಕೃತಜ್ಞತೆ ಮತ್ತು ಉತ್ಸಾಹ ತಂದವು” ಎಂದು ಸುಮನ್ ಹೇಳುತ್ತಾನೆ.
ಯು.ಡಬ್ಲ್ಯೂ.ಸಿ.ಯಲ್ಲಿ ಸುಮನ್ ಜವಾಬ್ದಾರಿಯುತ ಮತ್ತು ಸಕ್ರಿಯ ಜಾಗತಿಕ ನಾಗರಿಕನಾಗಿ ಬೆಳೆಯುವ ಬಯಕೆ ಹೊಂದಿದ್ದಆನೆ. ಆತ ಅರ್ಥಶಾಸ್ತ್ರ ಮತ್ತು ಜಾಗತಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ಸದೃಢಗೊಳಿಸುವ ಮತ್ತು ತನ್ನ ಸಮುದಾಯಕ್ಕೆ ಶಿಕ್ಷಣ ಮತ್ತು ಸಾಮಾಜಿಕ ಉಪಕ್ರಮಗಳ ಮೂಲಕ ಕೊಡುಗೆ ನೀಡುವ ಭರವಸೆ ಹೊಂದಿದ್ದಾನೆ. ಶಿಕ್ಷಣದ ಆಚೆಗೂ ಆತ ವಿಶ್ವಾಸ ಬೆಳೆಸಿಕೊಳ್ಳುವ, ಸಭಾಕಂಪನದಿಂದ ಹೊರ ಬರುವ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಗುಣಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಗುರಿ ಹೊಂದಿದ್ದಾನೆ.
ಸುಮನ್ ಕಥೆಯು ಬೆಂಬಲ ನೀಡುವ ಶಿಕ್ಷಕರು, ಆವಿಷ್ಕಾರಕ ಕಲಿಕೆ ಮತ್ತು ಕಠಿಣ ಬದ್ಧತೆಯು ಜಾಗತಿಕ ಅವಕಾಶಗಳ ಬಾಗಿಲುಗಳನ್ನು ತೆರೆಯಬಲ್ಲವು ಎಂದು ತೋರಿಸಿದೆ. ಆತನ ಪ್ರಯಾಣದಲ್ಲಿ ಶಿಕ್ಷಣವು ಬರೀ ಅಂಕಗಳ ಕುರಿತಾಗಿ ಅಲ್ಲ, ಅದು ಪ್ರಗತಿ, ಆವಿಷ್ಕಾರ ಮತ್ತು ದೊಡ್ಡದನ್ನು ಕನಸು ಮಾಡುವ ಧೈರ್ಯವಾಗಿದೆ. ತನ್ನ ಕಠಿಣ ಪರಿಶ್ರಮ ಮತ್ತು ಟಿ.ಎಫ್.ಐ. ರೂಪಿಸಿದ ತಳಹದಿಯಿಂದ ಸುಮನ್ ಚೇಂಜ್ ಮೇಕರ್ ಆಗುವ ದಾರಿಯಲ್ಲಿದ್ದು ವಿಶ್ವದಲ್ಲಿ ಅರ್ಥಪೂರ್ಣ ಪರಿಣಾಮ ಬೀರಲು ಸಿದ್ಧವಾಗಿದ್ದಾನೆ.