ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Greater Bengaluru elections: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ ಚುನಾವಣೆ: ವಾರ್ಡ್‌ವಾರು ಅಂತಿಮ ಮೀಸಲಾತಿ ಪ್ರಕಟ

ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಒಪ್ಪಿದ್ದು, ಮಾರ್ಗಸೂಚಿಗಳನ್ವಯ, 2011ರ ಜನಗಣತಿಯ ಆಧಾರದ ಮೇರೆಗೆ ಒಟ್ಟು 369 ವಾರ್ಡ್‌ಗಳ ಮೀಸಲಾತಿಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಜಿಬಿಎ 5 ಪಾಲಿಕೆಗಳ ಚುನಾವಣೆ: ವಾರ್ಡ್‌ವಾರು ಅಂತಿಮ ಮೀಸಲಾತಿ ಪ್ರಕಟ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ. -

Prabhakara R
Prabhakara R Mar 8, 2026 3:05 PM

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ನಗರಾಭಿವೃದ್ಧಿ ಇಲಾಖೆಯು ಐದು ನಗರ ಪಾಲಿಕೆಗಳ (Greater Bengaluru elections) ವ್ಯಾಪ್ತಿಯ ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಒಟ್ಟು 369 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಇದರಲ್ಲಿ ಮಹಿಳೆಯರಿಗೆ ಬರೋಬ್ಬರಿ 176 ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮೀಸಲಾತಿ ವಿವರ

ಬೆಂಗಳೂರು ಕೇಂದ್ರ ನಗರ ಪಾಲಿಕೆ

ಒಟ್ಟು ವಾರ್ಡ್​​ಗಳ ಸಂಖ್ಯೆ – 63
ಎಸ್‌ಸಿ – 11 (5 ಮಹಿಳೆ)
ಎಸ್‌ಟಿ – 1
ಹಿಂದುಳಿದ ವರ್ಗ(ಎ) – 15 (ಮಹಿಳೆ 7)
ಹಿಂದುಳಿದ ವರ್ಗ(ಬಿ) – 4 (ಮಹಿಳೆ 2)
ಸಾಮಾನ್ಯ – 32 (ಮಹಿಳೆ 16)
ಮಹಿಳೆಯರಿಗೆ ಒಟ್ಟು 30 ವಾರ್ಡ್​​ಗಳು ಮೀಸಲು

ಬೆಂಗಳೂರು ಪೂರ್ವ ನಗರ ಪಾಲಿಕೆ

ಒಟ್ಟು ವಾರ್ಡ್ ಗಳ ಸಂಖ್ಯೆ – 50
ಎಸ್‌ಸಿ – 7 (ಮಹಿಳೆ 3)
ಎಸ್‌ಟಿ – 1
ಹಿಂದುಳಿದ ವರ್ಗ (ಎ) – 14 (ಮಹಿಳೆ 7)
ಹಿಂದುಳಿದ ವರ್ಗ (ಬಿ) – 3 (ಮಹಿಳೆ 1)
ಸಾಮಾನ್ಯ – 25 (ಮಹಿಳೆ 12)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 23

ಬೆಂಗಳೂರು ಪಶ್ಚಿಮ ನಗರ ಪಾಲಿಕೆ

ಒಟ್ಟು ವಾರ್ಡ್ ಗಳ ಸಂಖ್ಯೆ – 112
ಎಸ್‌ಸಿ – 9 (ಮಹಿಳೆ 4)
ಎಸ್‌ಟಿ – 2 (ಮಹಿಳೆ 1)
ಹಿಂದುಳಿದ ವರ್ಗ (ಎ) – 30 (ಮಹಿಳೆ 15)
ಹಿಂದುಳಿದ ವರ್ಗ (ಬಿ) – 7 (ಮಹಿಳೆ 3)
ಸಾಮಾನ್ಯ – 64 (ಮಹಿಳೆ 32)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 55

ಬೆಂಗಳೂರು ಉತ್ತರ ನಗರ ಪಾಲಿಕೆ

ಒಟ್ಟು ವಾರ್ಡ್ ಗಳ ಸಂಖ್ಯೆ – 72
ಎಸ್‌ಸಿ – 9 (ಮಹಿಳೆ 4)
ಎಸ್‌ಟಿ – 2 (ಮಹಿಳೆ 1)
ಹಿಂದುಳಿದ ವರ್ಗ (ಎ) – 19(ಮಹಿಳೆ 9)
ಹಿಂದುಳಿದ ವರ್ಗ (ಬಿ) – 5(ಮಹಿಳೆ 2)
ಸಾಮಾನ್ಯ – 37 (ಮಹಿಳೆ 18)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 34

ಬೆಂಗಳೂರು ದಕ್ಷಿಣ ನಗರ ಪಾಲಿಕೆ

ಒಟ್ಟು ವಾರ್ಡ್ ಗಳ ಸಂಖ್ಯೆ – 72
SC – 7 (ಮಹಿಳೆ 3)
ST – 1
ಹಿಂದುಳಿದ ವರ್ಗ (ಎ) – 19 ( =ಮಹಿಳೆ 9)
ಹಿಂದುಳಿದ ವರ್ಗ (ಬಿ) – 5 (ಮಹಿಳೆ 2)
ಸಾಮಾನ್ಯ – 40 (ಮಹಿಳೆ 20)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು- 34

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ ವಾರ್ಡುಗಳ ಕರಡು ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಸ್ವೀಕೃತವಾದ ಎಲ್ಲಾ ಸಲಹೆ/ ಆಕ್ಷೇಪಣೆಗಳನ್ನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಲಾಗಿತ್ತು. ಇವುಗಳನ್ನು ಸಮಿತಿ ಕೂಲಂಕಷವಾಗಿ ಪರಿಶೀಲಿಸಿ, ಕೆಲ ಬದಲಾವಣೆಗಳನ್ನು ಮಾಡಿ ಅಂತಿಮ ಮೀಸಲಾತಿಯನ್ನು ಸಿದ್ಧಪಡಿಸಿತ್ತು. ಹೀಗೆ ಸಿದ್ದಪಡಿಸಲಾದ ಮೀಸಲಾತಿ ಪಟ್ಟಿಯು ಮಾರ್ಗಸೂಚಿಯ ಅನುಸಾರ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳಾ ಮೀಸಲಾತಿ ಹಾಗೂ ಸಾಮಾನ್ಯ (ಮೀಸಲೇತರ) ಸ್ಥಾನಗಳ ಪ್ರಮಾಣವನ್ನು ಕಾಯ್ದುಕೊಂಡಿರುವುದನ್ನು ಖಚಿತಪಡಿಸಿಕೊಂಡು ಸಮಿತಿಯು ಅಂತಿಮ ಮೀಸಲಾತಿ ಪಟ್ಟಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ನೇಪಾಳ ಚುನಾವಣೆ: ಭರ್ಜರಿ ಗೆಲುವಿನತ್ತ RPS, ಮಾಜಿ ಪ್ರಧಾನಿಗೆ ಭಾರೀ ಮುಖಭಂಗ

ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪಿದ್ದು, ದಿನಾಂಕ:19-12-2025 ರಲ್ಲಿನ ಮಾರ್ಗಸೂಚಿಗಳನ್ವಯ, 2011ರ ಜನಗಣತಿಯ ಆಧಾರದ ಮೇರೆಗೆ ಒಟ್ಟು 369 ವಾರ್ಡ್‌ಗಳ ಮೀಸಲಾತಿಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.