ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kundapra Kannada Festival!: ಕುಂದಾಪ್ರ ಕನ್ನಡ ಉತ್ಸವಕ್ಕೆ ನೀವೇ ಅತಿಥಿ!

ಟೀಮ್ ಕುಂದಾಪುರಿಯ ಭಾನುವಾರ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಆಯೋಜಿಸಿರುವ ಕುಂದಾಪ್ರ ಕನ್ನಡ ಉತ್ಸವದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ವೇಗವಾಗಿ ಓಡುವ ಸಿಲಿಕಾನ್ ಸಿಟಿ ಬೆಂಗಳೂರಿನ ಬದುಕಿನ ಒತ್ತಡದಲ್ಲಿ ಭಾಷೆ-ಸಂಸ್ಕ್ರತಿ ಹಿಂದೆ ಉಳಿದುಬಿಟ್ಟಿದ್ಯೋ ಎನ್ನುವ ಭಾವ ಸಹಜ. ಹೀಗೆ ಆದಾಗೆಲ್ಲ ಮತ್ತೆ ಕೂಡಿಸಿ ಗುಣಿಸಿ ಬದುಕು-ಭಾಷೆ ಯನ್ನ ಸಂಭ್ರಮಿಸೋದು ಇಂದಿನ ತುರ್ತಾಗಿದೆ. ಇದರ ಭಾಗವಾಗಿಯೇ ಕುಂದಾಪ್ರ ಕನ್ನಡ ಉತ್ಸವ ಆಯೋಜನೆಗೊಂಡಿದೆ.

ಕುಂದಾಪ್ರ ಕನ್ನಡ ಉತ್ಸವಕ್ಕೆ ನೀವೇ ಅತಿಥಿ!

-

Profile
Ashok Nayak Aug 30, 2026 9:31 AM

ಬೆಂಗಳೂರು: ಟೀಮ್ ಕುಂದಾಪುರಿಯ ಭಾನುವಾರ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಆಯೋಜಿಸಿರುವ ಕುಂದಾಪ್ರ ಕನ್ನಡ ಉತ್ಸವದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ವೇಗವಾಗಿ ಓಡುವ ಸಿಲಿಕಾನ್ ಸಿಟಿ ಬೆಂಗಳೂರಿನ ಬದುಕಿನ ಒತ್ತಡದಲ್ಲಿ ಭಾಷೆ-ಸಂಸ್ಕ್ರತಿ ಹಿಂದೆ ಉಳಿದುಬಿಟ್ಟಿದ್ಯೋ ಎನ್ನುವ ಭಾವ ಸಹಜ. ಹೀಗೆ ಆದಾಗೆಲ್ಲ ಮತ್ತೆ ಕೂಡಿಸಿ ಗುಣಿಸಿ ಬದುಕು-ಭಾಷೆ ಯನ್ನ ಸಂಭ್ರಮಿಸೋದು ಇಂದಿನ ತುರ್ತಾಗಿದೆ. ಇದರ ಭಾಗವಾಗಿಯೇ ಕುಂದಾಪ್ರ ಕನ್ನಡ ಉತ್ಸವ ಆಯೋಜನೆಗೊಂಡಿದೆ.

ಇದನ್ನೂ ಓದಿ: Kundapra Kannada Habba 2025: ಬೆಂಗಳೂರಿನಲ್ಲಿ ಜುಲೈ 26, 27ರಂದು ʼಕುಂದಾಪ್ರ ಕನ್ನಡ ಹಬ್ಬʼ: ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ

ಇಲ್ಲಿ ನೃತ್ಯ ವೈಭವ, ಯಕ್ಷಗಾನ, ವಸ್ತುಪ್ರದರ್ಶನ, ಸಂಸ್ಕ್ರತಿ ಶಿಬಿರ, ಡಿಜೆ ಕುಂದಾಪುರ, ಯುವ ಸಂಗಮ, ಕುಂದಾಪುರ ಸಂವಾದ, ಸಭಾ ಕಾರ್ಯಕ್ರಮ, ಮೆರವಣಿಗೆ, ಯಕ್ಷಗಾನ ವೈಭವ, ಕುಂದಾ ಪ್ರದ ಆಚರಣೆಗಳ ಪ್ರದರ್ಶನ, ಕುಂದಾಪ್ರದ ಆಟೋಟ ಸ್ಪರ್ಧೆಗಳು ಸೇರಿ ಹತ್ತು ಹಲವು ಕಾರ್ಯ ಕ್ರಮಗಳು ಇರಲಿದೆ.

ಇದು ಕುಂದಾಪ್ರ ಕನ್ನಡ ಭಾಷೆ, ಬದುಕಿನ ಕಾರ್ಯಕ್ರಮವಷ್ಟೇ. ಕುಂದಾಪುರದವರಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಲ್ಲ. ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.