ಆರಂಭದಲ್ಲೇ ವಿವಾದದ ಕಿಡಿ ಹೊತ್ತಿಸಿದ ಜಮೀರ್
ಪಾಕ್ ಪರ ಘೋಷಣೆ ಕೂಗಿದರೂ ಸುಮ್ಮನಿದ್ರಿ. ಧ್ವಜಾರೋಹಣಕ್ಕೆ ಒಬ್ಬ ಸಚಿವ ಹೋಗಲ್ಲ ಅಂದ್ರೂ ಸುಮ್ಮನೆ ಇರುತ್ತೀರಾ? ಎಂದು ಸಚಿವ ಜಮೀರ್ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು. ಸಚಿವ ಜಮೀರ್ ಪರ ಡಿಸಿಎಂ ಜಿ.ಪರಮೇಶ್ವರ್ ಸ್ಪಷ್ಟನೆಗೆ ಪ್ರಯತ್ನಿಸುತ್ತಾ, ಸಚಿವ ಜಮೀರ್ ಮನವಿ ಕೊಟ್ಟಿರುವುದು ಬೇರೆ ಜಿಲ್ಲಾ ಉಸ್ತುವಾರಿ ಕೊಡಿ ಅಂತ. ಇದರಲ್ಲಿ ಬೇರೇನು ಇಲ್ಲ ಎಂದು ಸಮರ್ಥಿಸಿ ಕೊಂಡರು. ಇದಕ್ಕೆ ಆಕ್ಷೇಪಿಸಿದ ಸುನಿಲ್ ಕುಮಾರ್, ನೀವು ಸುಮ್ಮನೆ ಸಮರ್ಥನೆ ಮಾಡಬೇಡಿ. ರಾಷ್ಟ್ರ ಧ್ವಜ ಹಾರಿಸಲು ಸಮಯ ಇಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.
-
ಧ್ವಜಾರೋಹಣಕ್ಕೆ ಗೈರು: ಜಮೀರ್ ಪತ್ರಕ್ಕೆ ಪ್ರತಿಪಕ್ಷ ಕೆಂಡ
ವಿಧಾನಸಭೆ: ಹೈಕಮಾಂಡ್ ಮಟ್ಟದಲ್ಲಿ ಭಾರೀ ಲಾಬಿ ನಡೆಸಿ ಸಚಿವಗಿರಿ ಉಳಿಸಿಕೊಂಡಿರುವ ಜಮೀರ್ ಅಹಮದ್ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರ ಸಂಪುಟ ಸೇರಿದ ಆರಂಭದಲ್ಲೇ ವಿವಾದಕ್ಕೆ ಗುರಿಯಾಗಿದ್ದಾರೆ. ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿ ನಿಯುಕ್ತಿಗೊಂಡಿದ್ದ ಸಚಿವ ಜಮೀರ್ ಅಹಮದ್ ಅವರು ಧ್ವಜಾರೋಹಣಕ್ಕೆ ಹೋಗಲು ಆಗಲ್ಲ ಎಂದು ಸಿಎಂಗೆ ಪತ್ರ ಬರೆದಿರುವುದು ಪ್ರತಿಪಕ್ಷಗಳಿಗೆ ಆಹಾರವಾಗಿದ್ದು, ಜಮೀರ್ ನಡೆ ಖಂಡಿಸಿ ವಿಧಾನಸಭೆಯಲ್ಲಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದ ಘಟನೆ ನಡೆದಿದೆ.
ಈ ನಡುವೆ ಜಮೀರ್ ಪತ್ರ ಬರೆಯುತ್ತಿದ್ದಂತೆ ವಿಜಯನಗರದ ಉಸ್ತುವಾರಿಯನ್ನಾಗಿ ಬಸಂತಪ್ಪ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜಮೀರ್ ಪತ್ರ ವಿಷಯವನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಸಮಯ ಇಲ್ಲ ಅಂತ ಸ್ವಾತಂತ್ರ್ಯೋ ತ್ಸವ ದಿನ ಧ್ವಜಾರೋಹಣ ಮಾಡಲ್ಲ ಅಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಬದಲಾಯಿಸಿ ಎಂದಿದ್ದಾರೆ. ಸಚಿವರು ಸ್ವಾತಂತ್ರ್ಯೋತ್ಸವಕ್ಕೆ ಬೆಲೆ ಕೊಡೋದು ಇದೇನಾ? ಸ್ವಾತಂತ್ರ್ಯೋತ್ಸವ ಧ್ವಜಾರೋಹಣದಲ್ಲಿ ಭಾಗವಹಿಸುವುದು ಸಚಿವರಿಗೆ ಗೌರವದ ವಿಚಾರ. ಇವರಿಗೆ ಸಮಯ ಇಲ್ಲ ಅಂದರೆ ಅವರನ್ನು ಏಕೆ ಇಟ್ಕೊಂಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Zameer Ahmed Khan: ಕಾಂಗ್ರೆಸ್‌ನಲ್ಲಿ ಬದಲಾದ ಅಲ್ಪಸಂಖ್ಯಾತ ಆದ್ಯತೆ
ಪಾಕ್ ಪರ ಘೋಷಣೆ ಕೂಗಿದರೂ ಸುಮ್ಮನಿದ್ರಿ. ಧ್ವಜಾರೋಹಣಕ್ಕೆ ಒಬ್ಬ ಸಚಿವ ಹೋಗಲ್ಲ ಅಂದ್ರೂ ಸುಮ್ಮನೆ ಇರುತ್ತೀರಾ? ಎಂದು ಸಚಿವ ಜಮೀರ್ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು. ಸಚಿವ ಜಮೀರ್ ಪರ ಡಿಸಿಎಂ ಜಿ.ಪರಮೇಶ್ವರ್ ಸ್ಪಷ್ಟನೆಗೆ ಪ್ರಯತ್ನಿಸುತ್ತಾ, ಸಚಿವ ಜಮೀರ್ ಮನವಿ ಕೊಟ್ಟಿರುವುದು ಬೇರೆ ಜಿಲ್ಲಾ ಉಸ್ತುವಾರಿ ಕೊಡಿ ಅಂತ. ಇದರಲ್ಲಿ ಬೇರೇನು ಇಲ್ಲ ಎಂದು ಸಮರ್ಥಿಸಿಕೊಂಡರು. ಇದಕ್ಕೆ ಆಕ್ಷೇಪಿಸಿದ ಸುನಿಲ್ ಕುಮಾರ್, ನೀವು ಸುಮ್ಮನೆ ಸಮರ್ಥನೆ ಮಾಡಬೇಡಿ. ರಾಷ್ಟ್ರಧ್ವಜ ಹಾರಿಸಲು ಸಮಯ ಇಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.
ಧ್ವಜಾರೋಹಣ ಮಾಡಲು ಹೋಗಲ್ಲ ಅಂತ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿ, ಬದಲಾವಣೆ ಮಾಡುತ್ತಾರೆ. ರಾಷ್ಟ್ರೀಯ ಧ್ವಜಕ್ಕೆ, ರಾಷ್ಟ್ರೀಯತೆಗೆ ಗೌರವ ಎಲ್ಲಿದೆ? ಸಮಯಾವಕಾಶ ಇಲ್ಲ ಅಂದ ಮೇಲೆ ಯಾಕೆ ಮಂತ್ರಿ ಮಾಡಿದ್ದೀರಿ. ಮಂತ್ರಿ ಸ್ಥಾನದಿಂದ ತೆಗೆದು ಬಿಡಿ. ಇದನ್ನೂ ಸಮರ್ಥನೆ ಮಾಡಿಕೊಳ್ಳಬೇಡಿ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು. ಈ ವೇಳೆ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಮಧ್ಯ ಪ್ರವೇಶಿಸಿ, ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಸಚಿವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಎಲ್ಲದಕ್ಕೂ ರಾಜಕೀಯ ಬೆರೆಸಬೇಡಿ. ಇದು ಸರಿಯಲ್ಲ ಎಂದರು.
ಈ ವೇಳೆ ಸ್ಪೀಕರ್ ಜಿ.ಎಸ್.ಪಾಟೀಲ್ ಮಧ್ಯಪ್ರವೇಶಿಸಿ, ನೀವು ಈ ವಿಚಾರ ಚರ್ಚೆ ಮಾಡುವ ಮೊದಲು ನೋಟಿಸ್ ಕೊಡಬೇಕಿತ್ತು ಎಂದು ಹೇಳಿದರು. ಅದಕ್ಕೆ ದೇಶದ ಸ್ವಾತಂತ್ರ್ಯ, ರಾಷ್ಟ್ರ ಧ್ವಜಕ್ಕಿಂತ ನೋಟಿಸ್ ಮುಖ್ಯವಾ? ಅಂತ ಸುನಿಲ್ ಕುಮಾರ್ ಪ್ರಶ್ನಿಸಿದರು. ಮತ್ತೆ ಸಮರ್ಥನೆಗೆ ಮುಂದಾದ ಸಚಿವ ಜಿ.ಪರಮೇಶ್ವರ್, ಸಚಿವ ಜಮೀರ್‌ಗೆ ಆರೋಗ್ಯ ಸರಿ ಇಲ್ಲ, ಅದನ್ನು ನಮೂದಿಸಿದ್ದಾರೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಆಗ ಸುನಿಲ್ ಕುಮಾರ್, ಆರೋಗ್ಯ ಸರಿ ಇಲ್ಲ ಅಂತ ಎಲ್ಲೂ ಪತ್ರದಲ್ಲಿ ಹೇಳಿಲ್ಲ. ಆರೋಗ್ಯ ಸರಿ ಇಲ್ಲ ಅಂದರೆ ಮಂತ್ರಿ ಯನ್ನೇ ಬದಲಿಸಿ ಅಂತ ಬಿಜೆಪಿ ಶಾಸಕರು ಒತ್ತಾಯಿಸಿದರು. ಸರಕಾರದ ಉತ್ತರಕ್ಕೆ ಸಮಾಧಾನ ಗೊಳ್ಳದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರಬಂದರು.
ದೇಶಕೆ ತೋರಿದ ಅಗೌರವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ಹೇಳಿದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ದೇಶಕೆ ತೋರಿದ ಅಗೌರವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ಹೇಳಿದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಆಗಸ್ಟ್ 15ರಂದು ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲವೆಂದು ಸಚಿವ ಜಮೀರ್ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು ಮನೆ, ಆಸ್ತಿ ಕಳೆದುಕೊಂಡು ಜೈಲಿಗೆ ಹೋಗಿದ್ದರು. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಸಚಿವರಿಗೆ ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮಯವಿಲ್ಲ. ಇಂತಹವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರನ್ನಾಗಿ ಮಾಡಿದ್ದಾರೆ. ಇದು ಸಚಿವ ಜಮೀರ್ ಅಹ್ಮದ್ ದೇಶಕ್ಕೆ ಮಾಡಿರುವ ಅಪಮಾನ. ಈ ರೀತಿ ಮಾಡುವುದು ಸಂವಿಧಾನಕ್ಕೆ ತೋರುವ ಅಗೌರವ ಎಂದು ಟೀಕಿಸಿದರು.
ದೇಶಕೆ ತೋರಿದ ಅಗೌರವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ಹೇಳಿದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
*
ಉಸ್ತುವಾರಿ ಸಚಿವರ ಪಟ್ಟಿಯಿಂದ ಹೆಸರು ಕೈ ಬಿಡಲು ಕೋರಿ ಮುಖ್ಯಮಂತ್ರಿಗೆ ಜಮೀರ್ ಅಹ್ಮದ್ ಪತ್ರ
ವಿಜಯನಗರದ ಉಸ್ತುವಾರಿಯಾಗಿ ಬಸಂತಪ್ಪ ಅವರನ್ನು ನೇಮಿಸಿ ಸಿಎಂ ಕಚೇರಿಯಿಂದ ಆದೇ