ZEN: ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆ ಆರಂಭಿಸುವ ಮೂಲಕ ದಕ್ಷಿಣ ಭಾರತದಲ್ಲಿ ಅಸ್ತಿತ್ವ ವಿಸ್ತರಿಸಿದ ಝೆನ್ ಡೈಮಂಡ್
ಆಭರಣಗಳನ್ನು ಸೂಕ್ಷ್ಮವಾಗಿ ರೂಪಿಸುವಲ್ಲಿ ಹಾಗೂ ಹೊಸ ಬಗೆಯಲ್ಲಿ ಸಿದ್ಧಪಡಿಸುವಲ್ಲಿ ಬಹಳ ಶ್ರೀಮಂತವಾದ ಪರಂಪರೆಯನ್ನು ಈ ಬ್ರ್ಯಾಂಡ್ ಹೊಂದಿದೆ. ವಿವೇಚನೆಯಿಂದ ಖರೀದಿ ಮಾಡುವ, ವಿಶಿಷ್ಟವಾದ ಹಾಗೂ ಸೂಕ್ಷ್ಮವಾಗಿ ಸಿದ್ಧಪಡಿಸಿದ ಉತ್ಪನ್ನಗಳನ್ನುಬಯಸುವ ಗ್ರಾಹಕರಿಗೆ ಈ ಬ್ರ್ಯಾಂಡ್ ಆಧುನಿಕತೆ ಮತ್ತು ಹೊಸತನವನ್ನು ಹೊಂದಿರುವ ಆಭರಣಗಳನ್ನು ಒದಗಿಸುತ್ತಿದೆ.

-

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಉತ್ಕೃಷ್ಟ ಆಭರಣಗಳ ಝೆನ್ ಡೈಮಂಡ್ ಬ್ರ್ಯಾಂಡ್, ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸುವ ಮೂಲಕ ತನ್ನ ಹೆಜ್ಜೆಗುರುತುಗಳನ್ನು ಬಲಪಡಿಸುತ್ತಿದೆ. ಈ ಬ್ರ್ಯಾಂಡ್ 450ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಮುಂಬೈನ ಬಾಂದ್ರಾ, ಬೊರಿವಲಿಯಲ್ಲಿ ಆರಂಭಿಸಿದ ಮಳಿಗೆಗಳ ಯಶಸ್ಸಿನ ನಂತರ ಝೆನ್ ಡೈಮಂಡ್ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಮತ್ತು ಫೀನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಮಳಿಗೆ ಆರಂಭಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ.
ಫೀನಿಕ್ಸ್ ಮಾರ್ಕೆಟ್‌ಸಿಟಿ ಮತ್ತು ಮಾಲ್ ಆಫ್ ಏಷ್ಯಾದಲ್ಲಿನ ಮಳಿಗೆಗಳು ಝೆನ್ ಡೈಮಂಡ್‌ನ ವಿಶಿಷ್ಟವಾದ ಆಭರಣಗಳ ಸಂಗ್ರಹವನ್ನು ಹೊಂದಿವೆ. ಅತ್ಯುತ್ತಮ ಗುಣಮಟ್ಟದ ನೈಸರ್ಗಿಕ ವಜ್ರಗಳ ಆಭರಣ ಸಿದ್ಧಪಡಿಸುವಲ್ಲಿ ಹೊಂದಿರುವ ಪರಿಣತಿಯ ಮೂಲಕ ಝೆನ್ ಡೈಮಂಡ್ ಸಮಕಾಲೀನ ವಿನ್ಯಾಸಗಳು ಹಾಗೂ ಬಹುಕಾಲದಿಂದ ಉಳಿದು ಬಂದಿರುವ ನಾಜೂಕಿನ ವಿನ್ಯಾಸ ಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ.
ಆಭರಣಗಳನ್ನು ಸೂಕ್ಷ್ಮವಾಗಿ ರೂಪಿಸುವಲ್ಲಿ ಹಾಗೂ ಹೊಸ ಬಗೆಯಲ್ಲಿ ಸಿದ್ಧಪಡಿಸುವಲ್ಲಿ ಬಹಳ ಶ್ರೀಮಂತವಾದ ಪರಂಪರೆಯನ್ನು ಈ ಬ್ರ್ಯಾಂಡ್ ಹೊಂದಿದೆ. ವಿವೇಚನೆಯಿಂದ ಖರೀದಿ ಮಾಡುವ, ವಿಶಿಷ್ಟವಾದ ಹಾಗೂ ಸೂಕ್ಷ್ಮವಾಗಿ ಸಿದ್ಧಪಡಿಸಿದ ಉತ್ಪನ್ನಗಳನ್ನುಬಯಸುವ ಗ್ರಾಹಕರಿಗೆ ಈ ಬ್ರ್ಯಾಂಡ್ ಆಧುನಿಕತೆ ಮತ್ತು ಹೊಸತನವನ್ನು ಹೊಂದಿರುವ ಆಭರಣಗಳನ್ನು ಒದಗಿಸುತ್ತಿದೆ.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಕೈಗೆಟಕುವ ದರ ಹಾಗೂ ವಿಶ್ವಾಸವನ್ನು ಆಧಾರಸ್ತಂಭವನ್ನಾಗಿ ಮಾಡಿಕೊಂಡು ನಿರ್ಮಾಣ ಆಗಿರುವ ಝೆನ್ ಬ್ರ್ಯಾಂಡ್, ಬೆಲೆಯ ಮೇಲೆ ಗಮನ ಇರಿಸುತ್ತಲೇ ವಿಶಿಷ್ಟ ಶೈಲಿಯನ್ನೂ ಅರಸುವ ಇಂದಿನ ಗ್ರಾಹಕರ ಮನಸ್ಸಿನಲ್ಲಿ ಅನುರಣಿಸುತ್ತಿರುತ್ತದೆ. ಉತ್ತಮ ಗುಣಮಟ್ಟದ ಆಭರಣಗಳ ಜೊತೆಯಲ್ಲೇ ಝೆನ್ ಡೈಮಂಡ್ ಬ್ರ್ಯಾಂಡ್ ಐಷಾರಾಮಿ ವರ್ಗದ ಸುಗಂಧ ದ್ರವ್ಯಗಳು, ಟೈಗಳು, ವಾಚುಗಳು, ಪೆನ್ನುಗಳು ಮತ್ತು ಚಿನ್ನದ ನಾಣ್ಯಗಳನ್ನು ಕೂಡ ಗ್ರಾಹಕರಿಗೆ ನೀಡುತ್ತಿದೆ. ಹೀಗಾಗಿ ಝೆನ್ ಡೈಮಂಡ್ ಮಳಿಗೆಗಳು ಇಂತಹ ಉತ್ಪನ್ನಗಳನ್ನು ಬಯಸುವವರಿಗೆ ಹೇಳಿ ಮಾಡಿಸಿದ ತಾಣದಂತೆ ಆಗಿದೆ.
ಬೆಂಗಳೂರಿನ ಮಳಿಗೆಯ ಉದ್ಘಾಟನೆ ಬಗ್ಗೆ ಮಾತನಾಡಿದ ಝೆನ್ ಡೈಮಂಡ್‌ನ ವ್ಯವಸ್ಥಾಪ ನಿರ್ದೇಶಕ ನೀಲ್ ಸೊನಾವಾಲಾ, “ನಮ್ಮ ಬ್ರ್ಯಾಂಡ್‌ಗೆ ಭಾರತವು ಯಾವಾಗಲೂ ಬಹಳ ಮಹತ್ವದ ಮಾರುಕಟ್ಟೆಯಾಗಿದೆ. ಮುಂಬೈನಲ್ಲಿ ನಾವು ಆರಂಭಿಸಿದ ಮಳಿಗೆಗಳಿಗೆ ದೊರೆತ ಭಾರಿ ಪ್ರತಿಕ್ರಿಯೆ ಯು ನಮಗೆ ಬಹಳ ಉತ್ತೇಜನ ನೀಡಿದೆ. ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸುವ ಮೂಲಕ ಝೆನ್ ಡೈಮಂಡ್‌ನ ಕೌಶಲದ ಪರಂಪರೆಯನ್ನು ದಕ್ಷಿಣ ಭಾರತಕ್ಕೆ ತರುತ್ತಿರುವುದಕ್ಕೆ ನಮಗೆ ರೋಮಾಂಚನ ಆಗುತ್ತಿದೆ. ನಮ್ಮಲ್ಲಿನ ಸಂಗ್ರಹಗಳು ಪರಂಪರೆಯನ್ನು ಸಮಕಾಲೀನ ವಿನ್ಯಾಸದ ಜೊತೆ ಬಹಳ ಸುಲಲಿತವಾಗಿ ಬೆರೆಸುತ್ತವೆ. ಆ ಮೂಲಕ ಅವು ಇಂದಿನ ರಸಿಕರಿಗೆ ಅತ್ಯಂತ ಸೂಕ್ತವಾದ ಆಯ್ಕೆಯಾಗುತ್ತವೆ” ಎಂದು ಹೇಳಿದ್ದಾರೆ.
ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಸೆಂಟರ್ ಡೈರೆಕ್ಟರ್ ಹಾಗೂ ದಕ್ಷಿಣ ವಲಯದ ಮಾರುಕಟ್ಟೆ ನಿರ್ದೇಶಕಿ ರಿತು ಮೆಹ್ತಾ “ಬೆಂಗಳೂರಿನಲ್ಲಿ ಮಳಿಗೆಗಳ ವಿಸ್ತರಣೆಗೆ ಝೆನ್ ಡೈಮಂಡ್ ಜೊತೆ ಪಾಲು ದಾರಿಕೆ ಹೊಂದುತ್ತಿರುವುದಕ್ಕೆ ನಮಗೆ ಸಂತಸ ಆಗುತ್ತಿದೆ. ಫೀನಿಕ್ಸ್ ಮಾಲ್‌ನಲ್ಲಿ ನಮ್ಮ ಪೋಷಕರಿಗೆ ಬಹಳ ಉತ್ತಮವಾದ ಖರೀದಿ ಅನುಭವ ಸಿಗುವಂತೆ ಮಾಡುವ ಬದ್ಧತೆಯನ್ನು ನಾವು ಹೊಂದಿ ದ್ದೇವೆ. ಝೆನ್ ಡೈಮಂಡ್‌ನಂತಹ ಜಾಗತಿಕ ಮಟ್ಟದ ಹೆಸರುವಾಸಿ ಬ್ರ್ಯಾಂಡ್ ನಮ್ಮಲ್ಲಿಗೆ ಸೇರ್ಪಡೆ ಆಗಿರುವುದು ನಮ್ಮಲ್ಲಿನ ಮಳಿಗೆಗಳ ಮಟ್ಟವನ್ನು ಹೆಚ್ಚು ಮಾಡುತ್ತದೆ. ನಮ್ಮಲ್ಲಿನ ಎರಡೂ ಮಳಿಗೆಗಳಲ್ಲಿ ಗ್ರಾಹಕರು ತಮಗೆ ವಿಶಿಷ್ಟವಾದ ಆಭರಣಗಳನ್ನು ಕಂಡುಕೊಳ್ಳುವಂತೆ ಆಗಲಿ ಎಂದು ಹಾರೈಸುತ್ತೇವೆ” ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಳಿಗೆಗಳನ್ನು ಆರಂಭಿಸುವ ಮೂಲಕ ಝೆನ್ ಡೈಮಂಡ್ ಭಾರತದಲ್ಲಿ ಉತ್ಕೃಷ್ಟ ಆಭರಣಗಳಿಗೆ ಹೊಸ ವ್ಯಾಖ್ಯಾನ ನೀಡುವ ತನ್ನ ಕನಸಿಗೆ ಮತ್ತಷ್ಟು ಇಂಬು ಕೊಟ್ಟಿದೆ. ಜಾಗತಿಕ ವಿನ್ಯಾಸಗಳನ್ನು ಶ್ರೇಷ್ಠತೆಯೊಂದಿಗೆ ಬಹಳ ಸುಲಲಿತವಾಗಿ ಮಿಳಿತಗೊಳಿಸುವ ಕೆಲಸ ವನ್ನು ಝೆನ್ ಡೈಮಂಡ್ ಬ್ರ್ಯಾಂಡ್ ಮಾಡುತ್ತದೆ.
ನೈಸರ್ಗಿಕ ವಜ್ರದ ಪ್ರಮಾಣೀಕರಣವನ್ನು ಒದಗಿಸುವ ಕೆಲವೇ ಕೆಲವರ ಪೈಕಿ ಝೆನ್ ಡೈಮಂಡ್ ಬ್ರ್ಯಾಂಡ್ ಕೂಡ ಒಂದು. ಈ ಮೂಲಕ ಇದು ಗ್ರಾಹಕರಿಗೆ ತನ್ನಲ್ಲಿನ ಆಭರಣಗಳ ಉತ್ಕೃಷ್ಟ ಗುಣಮಟ್ಟದ ಬಗ್ಗೆ ಹಾಗೂ ಅಧಿಕೃತತೆಯ ಬಗ್ಗೆ ವಿಶ್ವಾಸ ಹೆಚ್ಚಿಸುತ್ತದೆ.