ʻಖುಷಿಯಿಂದ ನೆಮ್ಮದಿಯಾಗಿರುವ ಸಂಸಾರವನ್ನು ದೇವರು ನಾಶ ಮಾಡುತ್ತಾನೆʼ; ದಿಲೀಪ್ ರಾಜ್ ಪತ್ನಿಯ ನೋವಿನ ಪೋಸ್ಟ್!
ನಟ ಮತ್ತು ನಿರ್ಮಾಪಕ ದಿವಂಗತ ದಿಲೀಪ್ ರಾಜ್ ಅವರ ಅಕಾಲಿಕ ಮರಣದ ಆಘಾತದಿಂದ ಅವರ ಕುಟುಂಬ ಇಂದಿಗೂ ಹೊರಬಂದಿಲ್ಲ. ಪತ್ನಿ ಶ್ರೀವಿದ್ಯಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಸದಾ ನಗುತ್ತಾ ಖುಷಿಯಿಂದ ಇರುವ ಸಂಸಾರದ ಮೇಲೆ ದೇವರ ಕಣ್ಣು ಬೀಳುತ್ತದ, ದೇವರು ಅಂತಹ ಕುಟುಂಬವನ್ನು ನಾಶ ಮಾಡುತ್ತಾನೆ ಎಂದು ನೋವನ್ನು ಹೊರಹಾಕಿದ್ದಾರೆ.
-
ಕೆಲ ದಿನಗಳ ಹಿಂದಷ್ಟೇ ನಟ, ನಿರ್ಮಾಪಕ ದಿಲೀಪ್ ರಾಜ್ ಅವರು ಸಾವನ್ನಪ್ಪಿದ್ದರು. ಅವರ ಅಕಾಲಿಕ ಮರಣವು ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿತ್ತು. ದಿಲೀಪ್ ರಾಜ್ ಅವರ ಪತ್ನಿ ಶ್ರೀವಿದ್ಯಾ ಮತ್ತು ಮಕ್ಕಳು ಈಗಲೂ ಆ ನೋವಿನಿಂದ ಆಚೆ ಬಂದಿಲ್ಲ. ಪ್ರತಿದಿನ, ಪ್ರತಿಕ್ಷಣ ದಿಲೀಪ್‌ರನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿರುವ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ, "ದೇವರಿದ್ದಾನೆ.. ಹುಷಾರಾಗಿರಿ.." ಎಂದು ಬರೆದುಕೊಂಡದ್ದಾರೆ.
ಒಬ್ಬರಿಗೊಬ್ಬರು ಕಿತ್ತಾಡ್ಕೊಂಡೇ ಇರಬೇಕು!
"ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ, ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆ ಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೊಷಿಸುತ್ತಾ ಇರಬೇಕು.
ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು. ತಂದೆ-ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು. ಒಂದು ಮನೆಯಲ್ಲಿ ಶಾಂತಿ, ಅನ್ನೋದೇ ಇರಬಾರದು. ಒಬ್ಬರಿಗೊಬ್ಬರು ಕಿತ್ತಾಡ್ಕೊಂಡೇ ಇರಬೇಕು.."
ದಿಲೀಪ್ ರಾಜ್ ಪತ್ನಿಯ ಪೋಸ್ಟ್
ದೇವರಿದ್ದಾನೆ, ಹುಷಾರಾಗಿರಿ!
"ಯಾಕೆಂದರೆ, ದೇವರಿದ್ದಾನೆ, ಹುಷಾರಾಗಿರಿ! ಯಾರ ಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತ್ತಿರುತ್ತಾರೋ, ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ! ಅವನು ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಖಂಡಿತ ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ, ಹುಷಾರಾಗಿರಿ" ಎಂದು ಶ್ರೀವಿದ್ಯಾ ಅವರು ಬರೆದುಕೊಂಡಿದ್ದಾರೆ.
ಶ್ರೀವಿದ್ಯಾ ಪೋಸ್ಟ್‌ಗೆ ನೆಟ್ಟಿಗರು ಏನಂದ್ರು?
- ನಿಮ್ಮ ಮಾತು ನಿಜ.. ನಿಮ್ಮ ಪ್ರೀತಿಯ ಸಂಸಾರದ ಮೇಲೆ ದೇವರ ಕಣ್ಣು ಬಿತ್ತು ಅಂತ ಕಾಣುತ್ತದೆ. ದಿಲೀಪ್ ರಾಜ್ ಅಂಥ ಅದ್ಭುತವಾದ ವ್ಯಕ್ತಿ.
- ದೇವರಿಗೆ ನೆಮ್ಮದಿಯಾಗಿ ಇರುವವರನ್ನು ಕಂಡರೆ ಆಗಲ್ಲ, ನಿಜವಾಗಲೂ ದಿಲೀಪ್ ಸರ್ ಇಲ್ಲಾ ಅನ್ನೋದು ನಂಬೋಕೆ ಆಗಲ್ಲ. ನೀವು ಸ್ಟ್ರಾಂಗ್ ಆಗಿರಬೇಕು ಅಂತ ಹೇಳೋದು ಸುಲಭ. ಆದರೆ ಎಲ್ಲೊ ಇರುವ ನಮಗೇ ಇಷ್ಟು ಬೇಜಾರು ಆಗುವಾಗ, ಪ್ರತಿನಿತ್ಯ ಜೊತೆಗಿದ್ದ ನಿಮಗೆ ಎಷ್ಟು ಸಂಕಟ, ನೋವು ಅನ್ನೋದು ಹೇಳಲು ಆಗಲ್ಲ.
- ಸತ್ಯವಾದ ಮಾತು, ಒಳ್ಳೆಯವರ ಮೇಲೆ ದೇವರ ಕಣ್ಣು.. ಕೆಟ್ಟ ಕೆಲಸ ಮಾಡಿ, ಇನ್ನೊಬ್ಬರ ಮನೆ ಹಾಳು ಮಾಡುವವರನ್ನ ದೇವರು ಉದ್ಧಾರ ಮಾಡುತ್ತಾನೆ.
- ಋಣ ಇದ್ದಷ್ಟು ದಿನ ಬದುಕು.. ಇದು ನಾವು ಮೊದಲೇ ಮಾಡಿಕೊಂಡು ಬಂದ ಒಪ್ಪಂದ. ಸಾವಿಗೆ ಕೆಟ್ಟವರು ಒಳ್ಳೆಯವರು ಒಂದೇ. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಅದೇ ಜೀವನ..