Valentine Day: ನಂದಿ ಬೆಟ್ಟಕ್ಕೆ ಇಂದು ಪ್ರೇಮಿಗಳಿಗೆ ಪ್ರವೇಶವಿಲ್ಲ
ಫೆಬ್ರವರಿ 14ರ ಪ್ರೇಮಿಗಳ ದಿನ ನಂದಿಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇದೇ ವೇಳೆ ಕೆಲವು ಅಹಿತಕರ ಘಟನೆಗಳು ನಡೆದ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಆದೇಶದ ಪ್ರಕಾರ, ಶನಿವಾರ ನಂದಿ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳು ಅಥವಾ ಪ್ರವಾಸಿಗರನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
ನಂದಿ ಬೆಟ್ಟ -
ಚಿಕ್ಕಬಳ್ಳಾಪುರ, ಫೆ.14 : ಇಂದು ಪ್ರೇಮಿಗಳ ದಿನದ (valentine day) ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಂದಿ ಬೆಟ್ಟಕ್ಕೆ (Nandi hills) ಪ್ರವಾಸಿಗರು ಪ್ರವೇಶಿಸುವುದನ್ನು ನಿಷೇಧಿಸಿ ಚಿಕ್ಕಬಳ್ಳಾಪುರ (Chikkaballapuara) ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿರುವ ಈ ಗಿರಿಧಾಮವು ಸಾಮಾನ್ಯವಾಗಿ ವಾರಾಂತ್ಯ ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿ ಹೆಚ್ಚಿನ ಜನಸಂದಣಿಯನ್ನು ಹೊಂದಿರುತ್ತದೆ. ವಿಶೇಷ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಿರುತ್ತದೆ.
ಫೆಬ್ರವರಿ 14ರ ಪ್ರೇಮಿಗಳ ದಿನ ನಂದಿಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇದೇ ವೇಳೆ ಕೆಲವು ಅಹಿತಕರ ಘಟನೆಗಳು ನಡೆದ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಆದೇಶದ ಪ್ರಕಾರ, ಶನಿವಾರ ನಂದಿ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳು ಅಥವಾ ಪ್ರವಾಸಿಗರನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
ನಿರ್ಬಂಧವನ್ನು ಜಾರಿಗೊಳಿಸಲು ಪ್ರವೇಶ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ, ನಂದಿ ಬೆಟ್ಟಕ್ಕೆ 3,000 ರಿಂದ 3,500 ದ್ವಿಚಕ್ರ ವಾಹನಗಳಲ್ಲಿ ಮತ್ತು 1,500 ರಿಂದ 1,700 ನಾಲ್ಕು ಚಕ್ರ ವಾಹನಗಳಲ್ಲಿ 16 ರಿಂದ 18 ಸಾವಿರ ಪ್ರವಾಸಿಗರು ಆಗಮಿಸುತ್ತಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಜಿ ತಿಳಿಸಿದ್ದಾರೆ.
Chikkaballapur News: ಮಹಾಶಿವರಾತ್ರಿ ಹಾಗೂ ನಂದಿ ಜಾತ್ರೆಗೆ ಹರಿಕೃಷ್ಣ ಫೌಂಡೇಷನ್ ವತಿಯಿಂದ ಉಚಿತ ಆಟೋ ಸೇವೆ