Protest against KIADB enters 51th day: ಕೆಐಎಡಿಬಿ ವಿರುದ್ಧ ಹೋರಾಟ 51ನೇ ದಿನಕ್ಕೆ : ಉಸ್ತುವಾರಿ ಸಚಿವರ ಗೃಹ ಕಚೇರಿಗೆ ಮುತ್ತಿಗೆ
ಧರಣಿ ಪ್ರಾರಂಭಿಸಿ 41 ದಿನವಾಗಿದ್ದರೂ ಉಸ್ತುವಾರಿ ಸಚಿವರು ಮಾತ್ರ ಧರಣಿ ನಿರತ ರೈತರನ್ನು ಮಾತನಾಡಿಸಿಲ್ಲ. ಅವರ ಕಷ್ಟ ಸುಖ ಕೇಳಿಲ್ಲ ಎಂದು ಆಕ್ರೋಶಗೊಂಡ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಮತ್ತು ರೈತ ಮಹಿಳೆಯರು ತಮ್ಮ ಭೂಮಿಗಾಗಿ ಧರಣಿ ಗೃಹ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಜಂಗಮಕೋಟೆ ಕೈಗಾರಿಕ ವಲಯ ನಿರ್ಮಾಣಕ್ಕೆ ರೈತರ ಕೃಷಿ ಭೂಮಿ ನೀಡುವುದಕ್ಕೆ ವಿರೋಧಿಸಿ ಪ್ರತಿಭಟನಾ ರೈತರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವ ಡಾ.ಎಂ ಸಿ ಸುಧಾಕರ್ ಗೃಹ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. -
ಚಿಕ್ಕಬಳ್ಳಾಪುರ: ಜಿಲ್ಲೆಯ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕಾ ವಲಯ ನಿರ್ಮಾಣಕ್ಕೆ ರೈತರ ಕೃಷಿ ಭೂಮಿ ಬಳಸಬೇಡಿ ನಮ್ಮ ಭೂಮಿ ನಮ್ಮ ಹಕ್ಕು ಏನೇ ಆದರೂ ಭೂಮಿ ಕೊಡಲ್ಲ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತಪರ ಹೋರಾಟಗಾರರ ಅನಿರ್ದಿಷ್ಟ ನಡೆಸುತ್ತಿರುವ ಹೋರಾಟಕ್ಕೆ 41 ದಿನಕ್ಕೆ ಮುಟ್ಟಿದೆ.
ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸುತಿದ್ದ ಧರಣಿ ದಿಢೀರನೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ (District In-charge Minister Dr. M.C. Sudhakar) ರವರ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಧರಣಿ ಪ್ರಾರಂಭಿಸಿ 41 ದಿನವಾಗಿದ್ದರೂ ಉಸ್ತುವಾರಿ ಸಚಿವರು ಮಾತ್ರ ಧರಣಿ ನಿರತ ರೈತರನ್ನು ಮಾತನಾಡಿಸಿಲ್ಲ. ಅವರ ಕಷ್ಟ ಸುಖ ಕೇಳಿಲ್ಲ ಎಂದು ಆಕ್ರೋಶಗೊಂಡ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಮತ್ತು ರೈತ ಮಹಿಳೆಯರು ತಮ್ಮ ಭೂಮಿಗಾಗಿ ಧರಣಿ ಗೃಹ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು
ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ರೈತರು ಅನೇಕ ತಲೆಮಾರುಗಳಿಂದ ಕೃಷಿ ಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ರೈತರಿಂದ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಯಾವ ಕಾರಣಕ್ಕೂ ಒಪ್ಪ ಲಾಗುವುದಿಲ್ಲ. ಈಗಾಗಲೇ ಕೆಐಎಡಿಬಿ ಬಳಿ ಬಳಸದೆ ಇರುವ ಭೂಮಿ ಸಾಕಷ್ಟು ಇರುವಾಗ ಮತ್ತಷ್ಟು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರು ವುದು ಯಾಕೆ? ಎಂದು ಪ್ರಶ್ನಿಸಿದರು.
ಮಾರ್ಚ್ 16ರಿಂದ ನಿರಂತರ ಹಗಲೂ- ರಾತ್ರಿ ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದು, ಇದುವರೆಗೂ ಯಾವುದೇ ಜನಪ್ರತಿನಿಧಿಗಳು, ಶಾಸಕರಾಗಲಿ, ಸಚಿವರಾಗಲಿ ರೈತರನ್ನು ಸಂಪರ್ಕ ಮಾಡಲಿಲ್ಲ ಮತ್ತು ಏ.6ರಂದು ರೈತರ ಭೂಮಿಗೆ ಬೆಲೆ ನಿಗದಿ ಮಾಡಲು ನೋಟಿಸ್ ಜಾರಿ ಮಾಡಿರುತ್ತಾರೆ ಆದ್ದರಿಂದ ರೈತರು ಬೆಳಿಗ್ಗೆ ಹೋರಾಟದ ಜಾಗವಾದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಸ್ತೆ ತಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ರಸ್ತೆ ತಡೆಯನ್ನು ನಡೆಸಿದಾಗ ಜಿಲ್ಲಾಧಿಕಾರಿಗಳು ಆಗಮಿಸಿ ಕೆಐಎಡಿಬಿ ಭೂಮಿ ವಶ ಪಡಿಸಿಕೊಳ್ಳುವ ಮೊದಲು ರೈತರ ಒಪ್ಪಿಗೆ ಪಡೆದೇ ವಶ ಪಡಿಸಿಕೊಳ್ಳುತ್ತಾರೆ.
ರೈತರ ಒಪ್ಪಿಗೆ ಇಲ್ಲದೇ ಯಾವುದೇ ಭೂಮಿ ವಶಪಡಿಸಿ ಕೊಳ್ಳಲಾಗದು. ಕೆಐಎಡಿಬಿ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ವಿರೋಧಿಸಿ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ನ್ಯಾಯಾಲಯದ ತೀರ್ಪಿಗೆ ಕಾಯಬೇಕು ಎಂದು ತಿಳಿಸಿದ್ದರು. ಆದರೆ ಕೆಐಎಡಿಬಿ(KIADB) ಭೂಮಿ ವಶಪಡಿಸಿಕೊಳ್ಳುವ ಭೂಮಿಗೆ ಬೆಲೆ ನಿಗಧಿ ಸಹಾ ಮಾಡಿದೆ ಎಂದರು.
ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ನೇತ್ವತ್ವದಲ್ಲಿ ನಡೆದ ಈ ಹೋರಾಟದ ಬಗ್ಗೆ ಉಸ್ತು ವಾರಿ ಸಚಿವರು ಹೊರ ರಾಜ್ಯಕ್ಕೆ ಹೋಗಿದ್ದರಿಂದ ಅವರ ಆಪ್ತ ಕಾರ್ಯದರ್ಶಿ ಸಚಿವರಿಗೆ ಮಾಹಿತಿ ನೀಡಿದರು. ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ಸಚಿವರು ನಾನು ಹೊರರಾಜ್ಯ ದಲ್ಲಿದ್ದೇನೆ ಅಲ್ಲಿಂದ ಬಂದ ಕೂಡಲೆ ರೈತರನ್ನ ಸಂಪರ್ಕಿಸುತ್ತೇನೆ ಅವರೊಟ್ಟಿಗೆ ಮಾತು ಕತೆ ನಡೆಸುತ್ತೇನೆ ಎಂದು ದೂರವಾಣಿ ಮೂಲಕ ಸಮಜಾಯಿಸಿ ನೀಡಿದ ಮೇಲೆ ರೈತರು ಗೃಹ ಕಚೇರಿ ಪ್ರತಿಭಟನೆ ವಾಪಸ್ಸು ಪಡೆದರು.
ಆ ನಂತರ ಪೊಲೀಸರು ಅವರೆಲ್ಲರನ್ನೂ ಠಾಣೆಗೆ ಕರೆದೊಯ್ದು ಎಲ್ಲರಿಂದ ಸಹಿ ಪಡೆದು ವಾಪಸ್ಸು ಕಳಿಸಿ ಕೊಟ್ಟಿದ್ದಾರೆ.