ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SSLC Achievers honoured: ಎಸ್.ಎಸ್.ಎಲ್.ಸಿ ಸಾಧಕರಿಗೆ ನೇತಾಜಿ ಫೌಂಡೇಶನ್‌ನಿಂದ ಸನ್ಮಾನ: ತಲಾ 5 ಸಾವಿರ ರೂ. ನಗದು ಪುರಸ್ಕಾರ

ನೇತಾಜಿ ಫೌಂಡೇಶನ್ ಕಳೆದ 9 ವರ್ಷ ಗಳಿಂದ ಸತತವಾಗಿ ಗೌರಿಬಿದನೂರು ಮತ್ತು ಮಂಚೇನ ಹಳ್ಳಿ ತಾಲ್ಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿರಂತರ ವಾಗಿ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಾಜಮುಖಿ ಕಾರ್ಯವನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು

ಎಸ್.ಎಸ್.ಎಲ್.ಸಿ ಸಾಧಕರಿಗೆ ನೇತಾಜಿ ಫೌಂಡೇಶನ್‌ನಿಂದ ಸನ್ಮಾನ

'ನೇತಾಜಿ ಫೌಂಡೇಶನ್ ಪದಾಧಿಕಾಆರಿಗಳು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತಿಯೊಬ್ಬರಿಗೂ ತಲಾ ೫ ಸಾವಿರ ರೂ. ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. -

Profile
Ashok Nayak Apr 27, 2026 12:12 AM

ಮಂಚೇನಹಳ್ಳಿ: ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಂಚೇನಹಳ್ಳಿ ತಾಲ್ಲೂಕಿನ (ಗೌರಿಬಿದನೂರು ಬ್ಲಾಕ್) ನಾಲ್ಕು ಪ್ರತಿಭಾವಂತ ವಿದ್ಯಾರ್ಥಿಗಳನ್ನು 'ನೇತಾಜಿ ಫೌಂಡೇಶನ್' ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

'ನೇತಾಜಿ ಫೌಂಡೇಶನ್ ಪದಾಧಿಕಾಆರಿಗಳು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಅಭಿವೃದ್ಧಿ ಗಾಗಿ ಪ್ರತಿಯೊಬ್ಬರಿಗೂ ತಲಾ 5 ಸಾವಿರ ರೂ. ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸ ಲಾಯಿತು.

ಇದನ್ನೂ ಓದಿ: SSLC result: ಅಂಧ ವಿದ್ಯಾರ್ಥಿನಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊನೆಗೂ ಸಿಕ್ಕಿತು ನ್ಯಾಯ

ಈ ಸಮಾರಂಭದಲ್ಲಿ ಮಾತನಾಡಿದ ನೇತಾಜಿ ಫೌಂಡೇಶನ್ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಪ್ರಕಾಶ್ "ನೇತಾಜಿ ಫೌಂಡೇಶನ್ ಕಳೆದ 9 ವರ್ಷ ಗಳಿಂದ ಸತತವಾಗಿ ಗೌರಿಬಿದನೂರು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ.

3nt

ಅಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿರಂತರ ವಾಗಿ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಾಜಮುಖಿ ಕಾರ್ಯವನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಫೌಂಡೇಶನ್ ಕಾರ್ಯದರ್ಶಿ ಹಾಗೂ ವಕೀಲರಾದ ಅಶೋಕ್ ಎ., ರೈತ ಮುಖಂಡರು ಹಾಗೂ ವಕೀಲರಾದ ಎಂ.ಆರ್. ಲಕ್ಷ್ಮಿನಾರಾಯಣ್, ತಾಲ್ಲೂಕಿನ ಮುಖಂಡ ರಾದ ನರಸಿಂಹರೆಡ್ಡಿ, ಪ್ರಿಯಾಂಕ, ಮೋಹನ್ ಕುಮಾರ್ ಹಾಗೂ ಸ್ಥಳೀಯ ಮುಖಂಡರು ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.