ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನರಸಿಂಹನ ಅವತಾರದಲ್ಲಿ 22 ಅಡಿ ಗಣೇಶ; ಬೈಪಾಸ್ ಗಣೇಶೋತ್ಸವಕ್ಕೆ ಭರದ ಸಿದ್ಧತೆ

ಬೈಪಾಸ್ ಗಣೇಶೋತ್ಸವ ಗೆಳೆಯರ ಬಳಗದಿಂದ ಕಳೆದ 23 ವರ್ಷಗಳಿಂದ ವಿಜೃಂಭಣೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಜಾಗೃತಿಯ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳಿಗೂ ಆದ್ಯತೆ ನೀಡುತ್ತಿರುವ ಬಳಗ, ಪ್ರತಿ ವರ್ಷವೂ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ.

ಬೈಪಾಸ್ ಗಣೇಶೋತ್ಸವಕ್ಕೆ ಭರದ ಸಿದ್ಧತೆ

-

Profile
Ashok Nayak Sep 2, 2026 10:49 PM

23ನೇ ವರ್ಷದ ಉತ್ಸವಕ್ಕೆ ಸಜ್ಜು

ಪರಿಸರ ಸ್ನೇಹಿ ಮೂರ್ತಿ, ರಕ್ತದಾನ–ಆರೋಗ್ಯ ತಪಾಸಣಾ ಶಿಬಿರ

ಗೌರಿಬಿದನೂರು: ರಾಜ್ಯದಲ್ಲಿಯೇ ಚಿತ್ರದುರ್ಗದ ಗಣೇಶೋತ್ಸವದ ಬಳಿಕ ಎರಡನೇ ಅತಿದೊಡ್ಡ ಗಣೇಶೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಬೈಪಾಸ್ ಗಣೇಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ನರಸಿಂಹನ ಅವತಾರದ ಸುಮಾರು 22 ಅಡಿ ಎತ್ತರದ ಗಣೇಶ ಮೂರ್ತಿ ಭಕ್ತರ ಪ್ರಮುಖ ಆಕರ್ಷಣೆಯಾಗಲಿದೆ.

ಬೈಪಾಸ್ ಗಣೇಶೋತ್ಸವ ಗೆಳೆಯರ ಬಳಗದಿಂದ ಕಳೆದ 23 ವರ್ಷಗಳಿಂದ ವಿಜೃಂಭಣೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಜಾಗೃತಿಯ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳಿಗೂ ಆದ್ಯತೆ ನೀಡುತ್ತಿರುವ ಬಳಗ, ಪ್ರತಿ ವರ್ಷವೂ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ.

ಇದನ್ನೂ ಓದಿ: Sowthadka Ganapathi Temple: ಈ ಗಣಪತಿಗೆ ಘಂಟೆ ಕೊಟ್ಟರೆ ಸಾಕು ಸಮಸ್ಯೆಗಳೆಲ್ಲಾ ಮಾಯ! ದೇವಸ್ಥಾನದ ವಿಶೇಷತೆ ಏನು?

ಗಣೇಶೋತ್ಸವ ನಡೆಯುವ ಸ್ಥಳದಲ್ಲಿ ಈಗಾಗಲೇ ಭೂಮಿಪೂಜೆ ನೆರವೇರಿಸಿ ಮೂರ್ತಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಳೆದ 20 ದಿನಗಳಿಂದ ಕೊಲ್ಕತ್ತಾದ ನುರಿತ ಶಿಲ್ಪಿ ಸಫಾನ್ ಅವರ ನೇತೃತ್ವ ದಲ್ಲಿ ಸುಮಾರು 15 ಮಂದಿ ಕಲಾವಿದರ ತಂಡ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಸ್ಥಳೀಯ ಕೆರೆಗಳ ಮಣ್ಣಿನ ಜತೆಗೆ ಗಂಗಾ ನದಿಯ ಮಣ್ಣನ್ನು ಬಳಸಿ ಪರಿಸರ ಸ್ನೇಹಿ ಮೂರ್ತಿ ರೂಪಿಸಲಾಗುತ್ತಿದೆ.

ಉತ್ಸವದ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಧಾರ್ಮಿಕ ಕಾರ್ಯ ಕ್ರಮ, ಪ್ರಸಾದ ವಿತರಣೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯುತ್ ದೀಪಾಲಂಕಾರದೊಂದಿಗೆ ಉತ್ಸವ ಆಚರಿಸಲಾಗುವುದು. ನಾಡಿನ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕ ಬೈಪಾಸ್ ರವಿಕುಮಾರ್ ತಿಳಿಸಿದ್ದಾರೆ.