ನಾಯಿಗಳ ದಾಳಿಗೆ ಸಿಲುಕಿ ತಪತೇಶ್ವರ ಕಾಲೋನಿಯ ಮನೆಯ ಶೌಚಾಲಯಕ್ಕೆ ಸೇರಿದ ಜಿಂಕೆ ರಕ್ಷಣೆ
ತಪತೇಶ್ವರ ಕಾಲೋನಿಗೆ ಆಕಸ್ಮಿಕವಾಗಿ ಕಾಡು ಜಿಂಕೆಯೊಂದು ಆಗಮಿಸಿತ್ತು. ಇದನ್ನು ಕಂಡ ಬೀದಿ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿ ಕಚ್ಚಲು ಪ್ರಾರಂಭಿಸಿದವು. ನಾಯಿಗಳ ದಾಳಿಯಿಂದ ಭಯಭೀತಗೊಂಡ ಜಿಂಕೆ, ಪ್ರಾಣ ರಕ್ಷಿಸಿಕೊಳ್ಳಲು ಓಡುವಾಗ ಸ್ಥಳೀಯ ನಿವಾಸಿ ವೆಂಕಟರಮಣ ಎಂಬುವವರ ಮನೆಯ ಶೌಚಾಲಯದ ಒಳಗೆ ನುಗ್ಗಿತ್ತು
-
ಚಿಂತಾಮಣಿ: ನಗರದ ತಪತೇಶ್ವರ ಕಾಲೋನಿಯಲ್ಲಿ ಭಾನುವಾರ ತಡರಾತ್ರಿ ನಡೆದ ಘಟನೆ ಯೊಂದರಲ್ಲಿ, ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಬಂದ ಜಿಂಕೆಯೊಂದನ್ನು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಚಿಂತಾಮಣಿ ನಗರಕ್ಕೆ ಹೊಂದಿಕೊಂಡಿರು ಕೆಲ ಬೆಟ್ಟ ಗುಡ್ಡ ಪ್ರದೇಶವಾಗಿದ್ದು ಇತ್ತೀಚಿನ ದಿನಗಳಲ್ಲಿ ಮಳೆ ಇಲ್ಲದೆ ಹಾಗೂ ಯಾವುದೇ ಆಹಾರ ಸರಿಯಾದ ರೀತಿಯಲ್ಲಿ ಸಿಗದೇ ವನ್ಯಜೀವಿ ಗಳು ನಗರ ಹೊತ್ತ ಪ್ರಯಾಣ ಬೆಳೆಸಿದೆ.
ತಪತೇಶ್ವರ ಕಾಲೋನಿಗೆ ಆಕಸ್ಮಿಕವಾಗಿ ಕಾಡು ಜಿಂಕೆಯೊಂದು ಆಗಮಿಸಿತ್ತು. ಇದನ್ನು ಕಂಡ ಬೀದಿ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿ ಕಚ್ಚಲು ಪ್ರಾರಂಭಿಸಿದವು. ನಾಯಿಗಳ ದಾಳಿಯಿಂದ ಭಯಭೀತಗೊಂಡ ಜಿಂಕೆ, ಪ್ರಾಣ ರಕ್ಷಿಸಿಕೊಳ್ಳಲು ಓಡುವಾಗ ಸ್ಥಳೀಯ ನಿವಾಸಿ ವೆಂಕಟರಮಣ ಎಂಬುವವರ ಮನೆಯ ಶೌಚಾಲಯದ ಒಳಗೆ ನುಗ್ಗಿತ್ತು.
ಇದನ್ನೂ ಓದಿ: Chinthamani News: ಕೃಷಿ ಇಲಾಖೆ ನೇಮಕಾತಿ ನಿಯಮ ಉಲ್ಲಂಘನೆ ಆರೋಪ: ಕೃಷಿ ಪದವೀಧರರಿಂದ ಬೃಹತ್ ಪ್ರತಿಭಟನೆ!
ಜಿಂಕೆಯ ಕಿರುಚಾಟ ಮತ್ತು ನಾಯಿಗಳ ಬೊಗಳುವಿಕೆಯಿಂದ ಎಚ್ಚೆತ್ತುಕೊಂಡ ವೆಂಕರಮಣ ಮತ್ತು ಅವರ ಕುಟುಂಬಸ್ಥರು ತಕ್ಷಣವೇ ಜಾಗರೂಕರಾಗಿ, ಶೌಚಾಲಯದ ಹೊರಗೆ ಚಿಲಕ ಹಾಕಿ ಜಿಂಕೆಯನ್ನು ಸುರಕ್ಷಿತವಾಗಿ ಬಂಧಿಸಿದ್ದಾರೆ. ಬಳಿಕ ಮನೆಯ ಮಾಲೀಕರು ತಕ್ಷಣವೇ ನಗರಠಾಣೆ ಪೊಲೀಸರಿಗೆ ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ವಿಷಯ ತಿಳಿದು ಕಾರ್ಯಾಚರಣೆಗೆ ಇಳಿದ ವಲಯ ಅರಣ್ಯಾಧಿಕಾರಿ ವೀರಭದ್ರಪ್ಪ ಕುಂಬಾರ್ ಅವರ ನೇತೃತ್ವದಲ್ಲಿ, ಚಾಲಕ ಹರೀಶ್ ಕುಮಾರ್ ಮತ್ತು ಸಿಬ್ಬಂದಿ ನರಸಿಂಹಮೂರ್ತಿ ಅವರನ್ನೊಳಗೊಂಡ ತಂಡ ಸ್ಥಳಕ್ಕೆ ಧಾವಿಸಿತು. ಶೌಚಾಲಯದಲ್ಲಿದ್ದ ಜಿಂಕೆಯನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ, ನಾಯಿಗಳ ಕಡಿತದಿಂದ ಗಾಯಗೊಂಡಿದ್ದ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ರವಾನಿಸಿದ್ದಾರೆ.
ನಾಯಿಗಳ ಕಚ್ಚಾಟದಿಂದ ರಕ್ಷಣೆ ಮಾಡಿ ಜೀವವನ್ನು ರಕ್ಷಿಸಿದ ವೆಂಕಟರಮಣ ಅವರ ಕುಟುಂಬದ ಕಾರ್ಯಕ್ಕೆ ಅರಣ್ಯ ಇಲಾಖೆಯ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.