ಅಡ್ವಾನ್ಸ್ ನೀಡಿದ್ದು 1 ಲಕ್ಷ, ಕೈಗೆ ಸಿಕ್ಕಿದ್ದು 20 ಸಾವಿರ; ವಂಚಿಸಿದ ಬೆಂಗಳೂರು ಮನೆ ಮಾಲೀಕನ ವಿರುದ್ಧ ಮಹಿಳೆ ಆಕ್ರೋಶ!
Viral News: ವರ್ಷಪೂರ್ತಿ ಸರಿಯಾಗಿ ಬಾಡಿಗೆ ಪಾವತಿ ಮಾಡಿದರೂ ಮಾಲೀಕನೊಬ್ಬ ಒಟ್ಟು 1 ಲಕ್ಷ ಹಣದಲ್ಲಿ 80,396 ರೂಪಾಯಿ ಕಡಿತಗೊಳಿಸಿ ತನ್ನ ಕೈಗೆ ಕೇವಲ 20,000 ರೂಪಾಯಿ ನೀಡಿದ್ದಾನೆಂದು ಮಹಿಳೆ ಆಕ್ರೋಶಗೊಂಡಿದ್ದಾಳೆ. ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದ ಯುವಕ- ಯುವತಿಯರಿಗೆ ಇದೊಂದು ದೊಡ್ಡ ಹೊರೆ ಎಂದು ಅವರು ಬರೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು,ಜು.21: ಉದ್ಯೋಗ ನಿಮಿತ್ತ ಬೆಂಗಳೂರಿಗೆ ಹೊರಟ ಪ್ರತಿಯೊಬ್ಬರಿಗೂ ಬಾಡಿಗೆ ಹಣ ಪಾವತಿಸುವುದು ದೊಡ್ಡ ಹರಸಾಹಸದ ಕೆಲಸ. ದುಡಿದ ಅರ್ಧ ಭಾಗದಷ್ಟು ಇದಕ್ಕೆ ಮೀಸಲಿಟ್ಟರೂ ಹಲವು ಷರತ್ತುಗಳೊಂದಿಗೆ ದೊಡ್ಡ ಮೊತ್ತದ ಮುಂಗಡ ಹಣವನ್ನು ಕೂಡ ಪಾವತಿಸಬೇಕು.ಆದರೆ ಅಡ್ವಾನ್ಸ್ ಹಣ ಎಂದು ಪಾವತಿ ಮಾಡಿದರೂ ವಾಪಸ್ಸು ನಮ್ಮ ಕೈಗೆ ಸೇರುತ್ತದೆ ಎನ್ನುವ ಗ್ಯಾರಂಟಿಯೂ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ವರ್ಷಪೂರ್ತಿ ಸರಿಯಾಗಿ ಬಾಡಿಗೆ ಪಾವತಿ ಮಾಡಿದರೂ ಮಾಲೀಕನೊಬ್ಬ ಒಟ್ಟು 1 ಲಕ್ಷ ಹಣದಲ್ಲಿ 80,396 ರೂಪಾಯಿ ಕಡಿತಗೊಳಿಸಿ ತನ್ನ ಕೈಗೆ ಕೇವಲ 20,000 ರೂಪಾಯಿ ನೀಡಿದ್ದಾನೆಂದು ಮಹಿಳೆ ಆಕ್ರೋಶಗೊಂಡಿದ್ದಾಳೆ. ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದ ಯುವಕ- ಯುವತಿಯರಿಗೆ ಇದೊಂದು ದೊಡ್ಡ ಹೊರೆ ಎಂದು ಅವರು (Viral News) ಬರೆದುಕೊಂಡಿದ್ದಾರೆ.
ಪೂಜಾ ಎಂಬ ಬಳಕೆದಾರರು ಬೆಂಗಳೂರಿನಲ್ಲಿ 2BHK ಅಪಾರ್ಟ್‌ಮೆಂಟ್ ಗೆ1 ಲಕ್ಷ ಮೊತ್ತ ಮುಂಗಡ ಹಣವನ್ನು ಪಾವತಿ ಮಾಡಿದ್ದಾರೆ. ಪೋಸ್ಟ್ ಪ್ರಕಾರ, ಬಾಡಿಗೆದಾರರು ಒಂದು ವರ್ಷ ಅಪಾರ್ಟ್ಮೆಂಟ್‌ನಲ್ಲಿಯೇ ಇದ್ದು ಮತ್ತು ಪ್ರತಿ ತಿಂಗಳು ಯಾವುದೇ ವಿಳಂಬವಿಲ್ಲದೆ ಸಮಯಕ್ಕೆ ಸರಿಯಾಗಿ ಬಾಡಿಗೆಯನ್ನು ಪಾವತಿ ಸುತ್ತಿದ್ದರು.ಆದರೆ ಒಂದು ವರ್ಷದ ನಂತರ ಮನೆ ಖಾಲಿ ಮಾಡಲು ಬಯಸಿದಾಗ ಸೆಟಲ್ ಮೆಂಟ್ ಬಿಲ್ ನೋಡಿ ಅವರೇ ದಂಗಾಗಿ ಹೋಗಿದ್ದಾರೆ.
A guy rented a 2BHK apartment in Bangalore and paid a ₹1 lakh security deposit to the landlord.
— Pooja (@poojaofficial5) July 20, 2026
For an entire year,
he paid his rent on time every single month.
Because of his job, he was constantly traveling and barely stayed in the apartment on average,
only about 6-7… pic.twitter.com/YobzKeT1vt
ಈ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದರೂ, ಈ ಮಹಿಳೆ ತನ್ನ ಕೆಲಸದ ಕಾರಣದಿಂದಾಗಿ ಅಲ್ಲಿ ಬಹಳ ಕಡಿಮೆ ಸಮಯವನ್ನು ಕಳೆದಿದ್ದರು. ಆಗಾಗ್ಗೆ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದರಿಂದ ಪ್ರತಿ ತಿಂಗಳು ಆರರಿಂದ ಏಳು ದಿನಗಳು ಮಾತ್ರ ಅಪಾರ್ಟ್ಮೆಂಟ್ ನಲ್ಲಿ ಇದ್ದರು. ಮಾಲೀಕನ ಎಲ್ಲ ನಿಯಮಗಳನ್ನು ಅನುಸರಿಸಿದ್ದೂ ಎಂದಿಗೂ ಪಾರ್ಟಿಗಳನ್ನು ಆಯೋಜಿಸಲಿಲ್ಲ. ಅಪಾರ್ಟ್ಮೆಂಟ್ ಅನ್ನು ಸ್ವಚ್ಛತೆಯಿಂದ ನೋಡಿಕೊಂಡಿದ್ದರು. ಆದರೆ ಮಾಲೀಕನು ಮನೆ ಖಾಲಿ ಮಾಡುವಾಗ ಒಟ್ಟು 1 ಲಕ್ಷ ರೂಪಾಯಿಯಲ್ಲಿ , ಕೈಗೆ ಕೇವಲ 20,000 ರೂಪಾಯಿ ಕೊಟ್ಟಿದ್ದಾನೆ.
ಮಾಲೀಕನ ಬಿಲ್‌ನಲ್ಲಿ ಅಪಾರ್ಟ್‌ಮೆಂಟ್‌ಗೆ ಪೈಂಟ್ ಬಳಿಯುವುದು, ಮನೆ ಶುಚಿಗೊಳಿಸುವಿಕೆ, ಸೋಫಾ ಕ್ಲಿನಿಂಗ್, ರೆಫ್ರಿಜರೇಟರ್ ಸೇವೆ, ಶವರ್ ಹಾಗೂ ಬಾಗಿಲಿನ ಲಾಕ್ ಬದ ಲಾವಣೆ,ಸರ್ವಿಸ್ ಚಾರ್ಜ ಹೀಗೆ ನೆಪ ಹೇಳಿ ಹಣ ವಸೂಲಿ ಮಾಡಲಾಗಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾ ದಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದನ್ನು 'ಹಗಲು ದರೋಡೆ' ಎಂದು ಟೀಕಿಸಿದ್ದಾರೆ.
ಅನೇಕರು ಮಾಲೀಕನ ವರ್ತನೆ ವಿರುದ್ಧ ಕಿಡಿಕಾರಿದ್ದು ಬೆಂಗಳೂರಿನಲ್ಲಿ ಮುಂಗಡ ಹಣವನ್ನು ವಸೂಲಿ ಮಾಡಿ ಕೊಳ್ಳುವುದು ದೊಡ್ಡ ದಂದೆಯಾಗಿದೆ. ಮನೆಮಾಲೀಕರು ಅಡ್ವಾನ್ಸ್ ಹಣವನ್ನು ಮನೆ ಅಪ್‌ಗ್ರೇಡ್ ಮಾಡಿಕೊಳ್ಳಲು ತೆಗೆದುಕೊಳ್ಳುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು " ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸುವುದು ಉತ್ತಮ" ಎಂದು ಬರೆದಿದ್ದಾರೆ. ಮತ್ತೊಬ್ಬರು ಇಂತಹ ಮನೆ ಮಾಲೀಕರಿಗೆ ಸರಿಯಾದ ಶಿಕ್ಷೆ ವಿಧಿಸಲು ಆಗ್ರಹಿಸಿದ್ದಾರೆ..