ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bagepally News: ಹಿಂದೂಗಳು ಸಂಘಟಿತರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ: ಎಂ.ಅರ್.ಜಯರಾಂ

ಜಾಗೃತಿ ಕೊರತೆಯಿಂದ ಹಿಂದೂ ಧರ್ಮದ ರಕ್ಷಣೆಗೆ ಹಿನ್ನಡೆಯಾಗಿದ್ದು, ಪ್ರತಿ ಮನೆಯಲ್ಲಿಯೂ ಹಿಂದೂಗಳು ಸಂಘಟಿತರಾಗಬೇಕು. ಪ್ರತಿ ಗ್ರಾಮ, ಹೃದಯಕ್ಕೂ ಹಿಂದೂಗಳ ಸಂದೇಶ ಸಾರುವ ಮೂಲ ಉದ್ದೇಶದಿಂದ ಹಿಂದೂ ಸಮ್ಮೇಳನದ ಕಾರ್ಯಕ್ರಮ ಆಯೋಜಿಸಿದ್ದು, ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತರಾಗಬೇಕು

ಹಿಂದೂಗಳು ಸಂಘಟಿತರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ

-

Ashok Nayak
Ashok Nayak Feb 1, 2026 10:36 PM

ಬಾಗೇಪಲ್ಲಿ: ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹೋಗಲಾಡಿಸಿ ಹಿಂದೂಗಳು ಸಂಘಟಿತ ರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ಶ್ರೀ ಕ್ಷೇತ್ರದ ಕೈವಾರ ಧರ್ಮಾಧಿಕಾರಿಗಳಾದ ಎಂ.ಅರ್.ಜಯರಾಂ ಹೇಳಿದರು.

ಪಟ್ಟಣದ ಕೆ.ಹೆಚ್.ಬಿ ಲೇಔಟ್ ನಲ್ಲಿ ಬಾಗೇಪಲ್ಲಿ ತಾಲ್ಲೂಕು ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಾಗೃತಿ ಕೊರತೆಯಿಂದ ಹಿಂದೂ ಧರ್ಮದ ರಕ್ಷಣೆಗೆ ಹಿನ್ನಡೆಯಾಗಿದ್ದು, ಪ್ರತಿ ಮನೆಯಲ್ಲಿಯೂ ಹಿಂದೂಗಳು ಸಂಘಟಿತರಾಗಬೇಕು. ಪ್ರತಿ ಗ್ರಾಮ, ಹೃದಯಕ್ಕೂ ಹಿಂದೂಗಳ ಸಂದೇಶ ಸಾರುವ ಮೂಲ ಉದ್ದೇಶದಿಂದ ಹಿಂದೂ ಸಮ್ಮೇಳನದ ಕಾರ್ಯಕ್ರಮ ಆಯೋಜಿಸಿದ್ದು, ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತರಾಗಬೇಕು ಎಂದರು.

ಇದನ್ನೂ ಓದಿ: Vishwa Hindu Parishad: ಜಾತಿ, ಪಕ್ಷ ಭೇದವಿಲ್ಲದೇ ಹಿಂದೂಗಳು ಸಂಘಟಿತರಾಗಬೇಕಾಗಿದೆ: ಹಿಂದೂ ಸಮಾಜೋತ್ಸವದಲ್ಲಿ ಮೊಳಗಿದ ಹಿಂದೂ ಘೋಷ

ಬಳಿಕ ಬಾಗೇಪಲ್ಲಿ ತಾಲೂಕಿನ ಆನಂದಾಶ್ರಮದ ಶ್ರೀ ನರೋತ್ತಮಾನಂದ ಸ್ವಾಮೀಜಿಗಳು ಕಾರ್ಯ ಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ, ಹಿಂದೂಗಳೆಲ್ಲರೂ ಒಂದೇ, ಜಾತಿ, ಉಪಜಾತಿಗಳು ಸಾಕಷ್ಟು ಇರಬಹುದು, ಆದರೆ ಹಿಂದೂ ಧರ್ಮ ಒಂದೇ ಆಗಿದೆ. ಅನಾದಿ ಕಾಲದಿಂದಲೂ ಆಚರಣೆ ಯಲ್ಲಿದ್ದ ಹಿಂದೂ ಧರ್ಮದ ಪಾವಿತ್ಯ್ರತೆ, ಸಂಸ್ಕೃತಿಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಕಾಪಾಡ ಬೇಕು, ಹಿಂದೂ ಧರ್ಮವನ್ನು ಉನ್ನತೀಕರಿಸಲು ಮುಂದಾಗಬೇಕು ಎಂದರು.

ಆರ್ಯವೈಶ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ಶ್ವೇತ ಅಶ್ವತ್ಥನಾರಾಯಣ ಮಾತನಾಡಿ,
ಭಾರತೀಯ ಸಂಸ್ಕೃತಿ ಉಳಿಸಲು ಮಹಿಳೆಯರಿಂದ ಸಾಧ್ಯವಿದ್ದು, ಮನೆಯಲ್ಲಿ ನಮ್ಮ ಪರಂಪರೆ, ಆಚಾರ-ವಿಚಾರ, ಹಬ್ಬ-ಹರಿದಿನಗಳ ಆಚರಣೆಯ ಮಹತ್ವವನ್ನು ಮಕ್ಕಳಿಗೆ ಕಲಿಸಿ ಅವರ ಮೂಲಕ ಸನಾತನ ಧರ್ಮವನ್ನು ಎತ್ತಿ ಹಿಡಿಯಬೇಕು' ಎಂದು ಹೇಳಿದರು.

ಇದನ್ನೂ ಓದಿ:Hindu conference: ಫೆಬ್ರವರಿ 1ರಂದು ಅದ್ದೂರಿಯಾಗಿ ಹಿಂದೂ ಸಮ್ಮೇಳನ

ಬೃಹತ್ ಹಿಂದೂ ಸಮ್ಮೇಳನದ  ಶೋಭಾಯಾತ್ರೆ: ಬಾಗೇಪಲ್ಲಿ ತಾಲೂಕು ಹಿಂದೂ ಸಮ್ಮೇಳನ ಸಮಿತಿಯಿಂದ ಬಾಗೇಪಲ್ಲಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನದ ಬೃಹತ್ ಶೋಭಾಯಾತ್ರೆಯೂ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪಟ್ಟಣದ ನ್ಯಾಷನಲ್ ಕಾಲೇಜು ವೃತ್ತದಿಂದ ಪ್ರಾರಂಭವಾದ ಶೋಭಾಯಾತ್ರೆಯೂ ಭಜನೆ, ವಾದ್ಯ ಮೇಳ ಹಾಗೂ ಕೇಸರಿ ಧ್ವಜಗಳೊಂದಿಗೆ ನಗರಾದ್ಯಂತ ಭಕ್ತಿ ಮತ್ತು ಸಂಭ್ರಮದ ವಾತಾವರಣ ಸೃಷ್ಟಿಸಿತು.

ಸಾವಿರಾರು ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಶೋಭಾ ಯಾತ್ರೆಯಲ್ಲಿ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು, ಸಮಾಜದ ಗಣ್ಯರು, ಯುವಕರು ಹಾಗೂ ಮಕ್ಕಳು, ಮಹಿಳೆಯರು ಭಾಗವಹಿಸಿದ್ದರು.

Hindu R

ಹಿಂದೂ ಸಮ್ಮೇಳನದ ಅಂಗವಾಗಿ. ಭಾರತ ಮಾತೆ ಶ್ರೀರಾಮ ಭಾವಚಿತ್ರಗಳ ಮೆರವಣಿಗೆ ಮಾಡ ಲಾಯಿತು. ಶೋಭಯಾತ್ರೆ ಸಾಗುವ ಮಾರ್ಗದ ಉದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸಿದವು. ಸಾವಿರಾರು ಕಾರ್ಯಕರ್ತರು ಕೇಸರಿ ಶಾಲು ಕೇಸರಿ ಪೇಟ ಧರಿಸಿ ಭಾಗಿಯಾಗಿದ್ದರು. ತಮಟೆ ಡೊಳ್ಳಿನ ನಾದಕ್ಕೆ ಯುವಕರು ಕುಣಿದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮುನಿರಾಮಯ್ಯ, ಕೆ.ನರಸಿಂಹಪ್ಪ, ದೇವಾನಂದ ಡಾ.ರವೀಂದ್ರ, ಹಾಗೂ
ವಿವಿಧ ಹಿಂದು ಪರ ಸಂಘಟನೆಗಳಾದ ವಿ.ಹೆಚ್.ಪಿ. ಆರ್.ಎಸ್.ಎಸ್. ಬಜರಂಗದಳ, ಶ್ರೀರಾಮ ಸೇನೆ. ಎ.ಬಿ.ವಿ.ಪಿ. ವಿದ್ಯಾರ್ಧಿಗಳ ಸಂಘಟನೆಗಳು ಸೇರಿದಂತೆ ಮಹಿಳಾ ಸಂಘಟನೆಗಳು, ಹಿಂದೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಮೆರವಣಿಯ ಉದ್ದಕ್ಕೂ ಹಿಂದೂ ಪರ ಘೋಷಣೆಗಳನ್ನು ಕೂಗುತ್ತಿದ್ದರು.