Hindu conference: ಫೆಬ್ರವರಿ 1ರಂದು ಅದ್ದೂರಿಯಾಗಿ ಹಿಂದೂ ಸಮ್ಮೇಳನ
ಹಿಂದೂ ಸಮಾಜವು ಕೇವಲ ಧರ್ಮವಲ್ಲದೆ ಸಮಾಜದ ಏಕತೆ, ಸಂಸ್ಕøತ ಉಳಿವು ಮತ್ತು ಎಲ್ಲರಲ್ಲೂ ವಿಶಾಲ ಮನೋಭಾವ ಮೂಡಿಸುವ ಧರ್ಮವಾಗಿದೆ. ಅಲ್ಲದೆ ಭಾರತದ ಅಖಂಡತೆ ಕಾಪಾಡುವ ಆಶಾ ಭಾವನೆಯೂ ಹೊಂದಿದೆ. ಇದೇ ನಿಟ್ಟಿನಲ್ಲಿ ಹಿಂದೂ ಧರ್ಮದ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ 1 ಭಾನುವಾರ ರಂದು ಅದ್ದೂರಿಯಾಗಿ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ
-
ಬಾಗೇಪಲ್ಲಿ: ಹಿಂದೂ ಸಮಾಜವು ಕೇವಲ ಧರ್ಮವಲ್ಲದೆ ಸಮಾಜದ ಏಕತೆ, ಸಂಸ್ಕøತ ಉಳಿವು ಮತ್ತು ಎಲ್ಲರಲ್ಲೂ ವಿಶಾಲ ಮನೋಭಾವ ಮೂಡಿಸುವ ಧರ್ಮವಾಗಿದೆ. ಅಲ್ಲದೆ ಭಾರತದ ಅಖಂಡತೆ ಕಾಪಾಡುವ ಆಶಾ ಭಾವನೆಯೂ ಹೊಂದಿದೆ. ಇದೇ ನಿಟ್ಟಿನಲ್ಲಿ ಹಿಂದೂ ಧರ್ಮದ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ 1 ಭಾನುವಾರ ರಂದು ಅದ್ದೂರಿಯಾಗಿ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಹಿಂದೂ ಸಮ್ಮೇಳನ ಆಯೋಜನೆ ಸಮಿತಿ ಅಧ್ಯಕ್ಷ ಕೆ.ನರಸಿಂಹಪ್ಪ ತಿಳಿಸಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಈಗಾಗಲೇ ಸಮ್ಮೇಳನಕ್ಕೆ ಸಂಪೂರ್ಣ ತಯ್ಯಾರಿ ಮಾಡಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ನ್ಯಾಷನಲ್ ಕಾಲೇಜು ನಿಂದ ಸಮ್ಮೇಳನದ ಶೋಭಾಯಾತ್ರೆಯ ಭವ್ಯ ಮೆರವಣಿಗೆ ಪ್ರಾರಂಭ ವಾಗುವುದು.ಮೆರವಣಿಗೆಯಲ್ಲಿ ಎತ್ತಿನ ಗಾಡಿಗಳು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಡೊಳ್ಳು ಕುಣಿತ ಹಾಗೂ ವಾದ್ಯಗಳ ಮೂಲಕ ಎತ್ತಿನ ಗಾಡಿಗಳಲ್ಲಿ ಭಾರತ ಮಾತೆಯ ಭಾವಚಿತ್ರ ಮತ್ತು ವಿವಿಧ ಮಹಾ ಪುರುಷರ ಭಾವಚಿತ್ರಗಳ ಕಟೌಟಗಳನ್ನು ಪ್ರದರ್ಶಿಸಲಾಗುವುದು. ಈ ಮೆರವಣಿಗೆಯಲ್ಲಿ ಮಠಾಧೀಶರು, ಗಣ್ಯರು, ಸಾರ್ವಜನಿಕರು, ಮಹಿಳೆಯರು ಸೇರಿದಂತೆ ಹಲವರು ಪಾಲ್ಗೋಳ್ಳಲಿದ್ದಾರೆ. ನಂತರ ಮೆರವಣಿಗೆ ಸಮ್ಮೇಳನ ನಡೆಯುವ ಕೆ.ಹೆಚ್.ಬಿ. ಲೇಔಟ್ ಟೊಮೆಟೊ ಮಾರುಕಟ್ಟೆ ಆವರಣದಲ್ಲಿ ಸಮಾಪ್ತಿ ಗೊಳ್ಳುವುದು ಎಂದು ತಿಳಿಸಿದರು.
ಇದನ್ನೂ ಓದಿ: Bagepally News: ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಜೈಭೀಮ್ ಸಂಘಟನೆಯಿಂದ ಪ್ರತಿಭಟನೆ ಎಚ್ಚರಿಕೆ ರವಾನೆ
ನಂತರ ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಲು ಕೈವಾರ ಕ್ಷೇತ್ರ ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಮ್ ದೇವಾನಂದ, ಡಾ.ಪುಷ್ಪಲತ .ಪಿ.ಜಿ,ಶ್ವೇತಾ ಗಂಜಮ್, ಎ.ಅಪ್ಪಯ್ಯ ಶ್ರೀನಿವಾಸ್ ಬಾಬು, ಬಂಗಾರು ಬದ್ರಿನಾರಾಯಣ,ಮುನಿರಾಮಯ್ಯ,ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸು ತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಈ ಸಮ್ಮೇಳನದಲ್ಲಿ ಸುಮಾರು 10 ಸಾವಿರ ಜನರು ಸೇರುವ ನೀರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುನಿರಾಮಯ್ಯ,ವೈ.ಶ್ರೀನಿವಾಸ್ ರೆಡ್ಡಿ, ಆರ್.ಪ್ರತಾಪ್ ಹಾರ್ಡವೇರ್ ಕೃಷ್ಣಪ್ಪ, ಬಂಗಾರು ಬದ್ರಿ ನಾರಾಯಣ, ಹಾಗೂ ಇತರರು ಹಾಜರಿದ್ದರು.