ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: 34 ವರ್ಷಗಳ ಕಳಂಕರಹಿತ ಸೇವೆ ಸಲ್ಲಿಸಿದ ಪೋಸ್ಟ್ ಮಾಸ್ಟರ್ ಇಸ್ಮಾಯಿಲ್‌ಗೆ ಆತ್ಮೀಯ ಬೀಳ್ಕೊಡುಗೆ

ಇಸ್ಮಾಯಿಲ್ ಅವರು 1992ರಲ್ಲಿ ಅಂಚೆ ಇಲಾಖೆಗೆ ಸೇರ್ಪಡೆಯಾಗಿ ಕೋಲಾರ ವಿಭಾಗದಲ್ಲಿ ಬಿಎ ಪದವಿ ಪಡೆದ ಬಳಿಕ ಸೇವೆಗೆ ಬಂದ ಮೊದಲ ಸಿಬ್ಬಂದಿಯಾಗಿದ್ದರು. ತಮ್ಮ ಸುದೀರ್ಘ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಯಿಲ್ಲದೆ ಕರ್ತವ್ಯ ನಿರ್ವಹಿಸಿದ್ದು, ಮೃದು ಸ್ವಭಾವ, ಶಿಸ್ತು ಮತ್ತು ಸೇವಾ ಬದ್ಧತೆಯಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.

ಸಹೋದ್ಯೋಗಿಗಳಿಂದ ಸನ್ಮಾನ; ಕರ್ತವ್ಯನಿಷ್ಠ ಸೇವೆಗೆ ಪ್ರಶಂಸೆ

-

Profile
Ashok Nayak Jul 30, 2026 10:15 PM

ಚಿಂತಾಮಣಿ: ಚಿಂತಾಮಣಿ ತಾಲೂಕಿನ ವಿವಿಧ ಅಂಚೆ ಕಚೇರಿಗಳಲ್ಲಿ 34 ವರ್ಷ 3 ತಿಂಗಳುಗಳ ಕಾಲ ಕಳಂಕರಹಿತ ಹಾಗೂ ಶಿಸ್ತುಬದ್ಧ ಸೇವೆ ಸಲ್ಲಿಸಿ ನಿವೃತ್ತರಾದ ಪೋಸ್ಟ್ ಮಾಸ್ಟರ್ ಇಸ್ಮಾಯಿಲ್ ಅವರಿಗೆ ನಗರದ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಮತ್ತು ಸಹೋದ್ಯೋಗಿಗಳು ಆತ್ಮೀಯ ಬೀಳ್ಕೊಡುಗೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತರಾದ ಇಸ್ಮಾಯಿಲ್ ಅವರನ್ನು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಹಾರ ಹಾಕಿ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಹೋದ್ಯೋಗಿಗಳು ಅವರ ಸೇವಾ ನಿಷ್ಠೆ, ಸರಳತೆ ಮತ್ತು ಮಾನವೀಯ ಗುಣಗಳನ್ನು ಸ್ಮರಿಸಿ ಶುಭ ಹಾರೈಸಿದರು.

ಇದನ್ನೂ ಓದಿ: Chinthamani News: ಆರೋಗ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ; ಏಜೆಂಟ್ ವಶಕ್ಕೆ, ಗರ್ಭಪಾತದ ಮಾತ್ರೆಗಳು ಪತ್ತೆ

ಈ ಸಂದರ್ಭದಲ್ಲಿ ಮಾತನಾಡಿದ ಪಿಎಲ್‌ಐ ವ್ಯವಸ್ಥಾಪಕ ಸತೀಶ್, ಇಸ್ಮಾಯಿಲ್ ಅವರು 1992ರಲ್ಲಿ ಅಂಚೆ ಇಲಾಖೆಗೆ ಸೇರ್ಪಡೆಯಾಗಿ ಕೋಲಾರ ವಿಭಾಗದಲ್ಲಿ ಬಿಎ ಪದವಿ ಪಡೆದ ಬಳಿಕ ಸೇವೆಗೆ ಬಂದ ಮೊದಲ ಸಿಬ್ಬಂದಿಯಾಗಿದ್ದರು. ತಮ್ಮ ಸುದೀರ್ಘ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಯಿಲ್ಲದೆ ಕರ್ತವ್ಯ ನಿರ್ವಹಿಸಿದ್ದು, ಮೃದು ಸ್ವಭಾವ, ಶಿಸ್ತು ಮತ್ತು ಸೇವಾ ಬದ್ಧತೆಯಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ನಿವೃತ್ತ ಜೀವನ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪೋಸ್ಟ್ ಮ್ಯಾನ್ ಎನ್.ಎಂ.ನಾರಾಯಣಸ್ವಾಮಿ, ಅಸಿಸ್ಟೆಂಟ್ ಪೋಸ್ಟ್ ಮ್ಯಾನ್ ರಮೇಶ್, ಪಿ.ಎ.ನಾರಾಯಣಸ್ವಾಮಿ, ಅನಿಲ್, ವೆಂಕಟಚಲಪತಿ, ಗಂಗಾಧರ ಸೇರಿದಂತೆ ಅಂಚೆ ಇಲಾಖೆಯ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳು ಉಪಸ್ಥಿತರಿದ್ದು, ಇಸ್ಮಾಯಿಲ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ ಸಲ್ಲಿಸಿದರು.