ವರಸೆಯಲ್ಲಿ ತಮ್ಮನಾಗುವವನ ಜತೆ ಯುವತಿ ಲವ್; ಪೋಷಕರು ವಿರೋಧಿಸಿದ್ದಕ್ಕೆ ಓಡಿ ಹೋಗಿ ಮದುವೆ!
ಕುಟುಂಬದ ಲೆಕ್ಕಾಚಾರದ ಪ್ರಕಾರ ಯುವಕನು ಯುವತಿಗೆ ವರಸೆಯಲ್ಲಿ ತಮ್ಮನಾಗಬೇಕು. ಈ ಕಾರಣಕ್ಕಾಗಿ ಅವರ ಪ್ರೀತಿಗೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬೇರೆ ಹುಡುಗನ ಜತೆ ಮದುವೆ ನಿಶ್ಚಯಿಸಿ, ಕಲ್ಯಾಣ ಮಂಟಪವನ್ನೂ ಬುಕ್ ಮಾಡಲಾಗಿತ್ತು. ಈ ನಡುವೆ ಯುವಕನ ಜತೆ ಯುವತಿ ಪರಾರಿಯಾಗಿ ಮದುವೆಯಾಗಿದ್ದಾಳೆ.
-
ಚಿಕ್ಕಬಳ್ಳಾಪುರ: ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಿದ್ದ ಜೋಡಿಯೊಂದು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ, ಮದುವೆಯಾಗಿ ಈಗ ರಕ್ಷಣೆ ಕೋರಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿರುವುದು ಜಿಲ್ಲೆಯಲ್ಲಿ ನಡೆದಿದೆ. ದೇವನಹಳ್ಳಿ ಮೂಲದ ಶಶಿಕಲಾ (29) ಹಾಗೂ ಹೊಸಕೋಟೆಯ ಪ್ರವೀಣ್ (24) ಪ್ರೀತಿಸಿ, ಮದುವೆಯಾದವರು.
ಮೂರು ವರ್ಷಗಳ ಹಿಂದೆ ಸಂಬಂಧಿಕರ ಮನೆಗೆ ಹೋದಾಗ ಪರಿಚಯವಾದ ಈ ಜೋಡಿ, ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟಿಂಗ್ ಮೂಲಕ ಹತ್ತಿರವಾಗಿದ್ದರು. ಕಾಲಕ್ರಮೇಣ ಗೆಳೆತನ ಪ್ರೀತಿಗೆ ತಿರುಗಿತ್ತು. ಆದರೆ, ಕುಟುಂಬದ ಲೆಕ್ಕಾಚಾರದ ಪ್ರಕಾರ ಪ್ರವೀಣ್ ಶಶಿಕಲಾಗೆ ವರಸೆಯಲ್ಲಿ ತಮ್ಮನಾಗಬೇಕು. ಈ ಕಾರಣಕ್ಕಾಗಿಯೇ ಇವರ ಪ್ರೀತಿಗೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಶಶಿಕಲಾಗೆ ಬೇರೆ ಹುಡುಗನ ಜತೆ ಮದುವೆ ನಿಶ್ಚಯಿಸಿ, ಕಲ್ಯಾಣ ಮಂಟಪವನ್ನೂ ಬುಕ್ ಮಾಡಲಾಗಿತ್ತು.
ಮನೆ ಕಡೆಯವರು ನಿಗದಿಪಡಿಸಿದ ಮದುವೆಗೆ ಒಪ್ಪದ ಶಶಿಕಲಾ, ಕೊನೆಗೂ ತನ್ನ ಪಟ್ಟು ಬಿಡದೆ ಪ್ರಿಯಕರ ಪ್ರವೀಣ್ ಜತೆ ಎಸ್ಕೇಪ್ ಆಗಿದ್ದಾರೆ. ಇಬ್ಬರೂ ಮದುವೆಯಾದ ನಂತರ ಈಗ ಜೀವ ಬೆದರಿಕೆ ಇದೆ ಎಂದು ಹೆದರಿ ಚಿಕ್ಕಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಗೆ ರಕ್ಷಣೆ ಕೋರಿ ದೂರು ನೀಡಿದ್ದಾರೆ.
26 ವರ್ಷದ ಯುವತಿ ಜತೆ ಪ್ರೀತಿಗೆ ಮನೆಯವರ ಅಡ್ಡಿ: ಮನನೊಂದು 15 ವರ್ಷದ ಬಾಲಕ ಆತ್ಮಹತ್ಯೆ
ಬೆಂಗಳೂರು: 26 ವರ್ಷದ ಯುವತಿ ಜತೆ ಪ್ರೀತಿಗೆ ಮನೆಯವರು ಅಡ್ಡಿಪಡಿಸಿದ ಹಿನ್ನೆಲೆ ವಿಷ ಸೇವಿಸಿ 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣದ (Channapatna News) ರಾಜಾಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ. ಬಿಡದಿ ಮೂಲದ ಬಾಲಕ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಮೇ 4ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬಿಡದಿ ಮೂಲದ 26 ವರ್ಷದ ಯುವತಿ ಜತೆ ಬಾಲಕ ಪ್ರೀತಿಯಲ್ಲಿ ಬಿದ್ದಿದ್ದ. ಈ ಬಗ್ಗೆ ಪೋಷಕರಿಗೆ ವಿಚಾರ ಗೊತ್ತಾಗಿದ್ದು, ಬಾಲಕನಿಗೆ ಬೈದು ಬುದ್ಧಿ ಹೇಳಿದ್ದರು. ನಿಮ್ಮಿಬ್ಬರಿಗೂ ವಯಸ್ಸಿನ ಅಂತರ ಇದೆ, ಇದನ್ನು ಇಲ್ಲಿಗೆ ನಿಲ್ಲಿಸುವಂತೆ ತಾಕೀತು ಮಾಡಿದ್ದರು. ಆದರೂ ಬಾಲಕ ಹಾಗೂ ಯುವತಿ ವಾಟ್ಸಾಪ್, ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದಾದ ಬಳಿಕ ಮನೆ ಬಿಟ್ಟು ಬಂದಿದ್ದ ಬಾಲಕ ಚನ್ನಪಟ್ಟಣದ ತನ್ನ ಸ್ನೇಹಿತನ ಮನೆಯಲ್ಲಿದ್ದ.
ತುಮಕೂರಲ್ಲಿ ಲವ್, ಮ್ಯಾರೇಜ್, ದೋಖಾ ಪ್ರಕರಣ; ಗರ್ಭಿಣಿ ಪತ್ನಿಯನ್ನು ಬಿಟ್ಟು ಮತ್ತೊಂದು ಮದುವೆಗೆ ಮುಂದಾದ ಪತಿ
ಯುವತಿ ಜತೆ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಏ.29ರಂದು ವಿಷ ಸೇವಿಸಿ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಸ್ನೇಹಿತರು ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 4ರಂದು ಬಾಲಕ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆ ಮಗನ ಸಾವಿಗೆ ಯುವತಿಯೇ ಕಾರಣ ಎಂದು ಬಾಲಕನ ಪೋಷಕರು ದೂರು ನೀಡಿದ್ದು, ಈ ಸಂಬಂಧ ಯುವತಿ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.