ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಸತ್ಯಸಾಯಿ ಆಸ್ಪತ್ರೆ ಬಳಿ ನಿರ್ಮಾಣವಾಗಲಿರುವ ಪ್ರಯಾಣಿಕರ ತಂಗುದಾಣ ಅಧಿಕಾರಿಗಳಿಂದ ತಡೆ

ಮುದ್ದೇನಹಳ್ಳಿ ಗ್ರಾಮದ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ನಾಗರೀಕರಿಗೆ ಅನುಕೂಲಕ್ಕಾಗಿ ಲೋಕಸಭಾ ಸದಸ್ಯರ ವಿಶೇಷ ನಿಧಿಯಲ್ಲಿ ನೂತನ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಮುಂದಾಗಿದ್ದೆವು. ಈ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಪಂಚಾಯಿತಿ ಯಿಂದ ಅನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ಪಿಡಿಒ ತಿಪ್ಪಯ್ಯ ಮತ್ತು ತಹಶೀಲ್ದಾರ್ ಅವರು ಕಾಮಗಾರಿಗೆ ತಡೆಯೊಡ್ಡಿರುವುದು ಸರಿಯಲ್ಲ

2023-24ರ ಲೋಕಸಭಾ ಸದಸ್ಯರ 5 ಕೋಟಿ ಅನುದಾನದಲ್ಲಿ ತಂಗುದಾಣಕ್ಕೆ ಚಾಲನೆ

-

Profile
Ashok Nayak Jun 14, 2026 7:51 PM

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿ ಗ್ರಾಮಪಂಚಾಯಿತಿ ಮುದ್ದೇನಹಳ್ಳಿ ಗ್ರಾಮದ ಸತ್ಯಸಾಯಿ ಆಸ್ಪತ್ರೆ ಸಮೀಪ 2023-24 ಲೋಕಸಭಾ ಸದಸ್ಯ ಬಿ.ಎನ್.ಬಚ್ಚೇಗೌಡ(Lok Sabha Member B.N. Bachegowda)ರ ಎಂ.ಪಿ.ಎಲ್. ಎ.ಡಿ ಸಂಸದ ನಿಧಿ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದ ಪ್ರಯಾಣಿ ಕರ ತಂಗುದಾಣ ಕಾಮಗಾರಿಗೆ ರಾಜಕೀಯ ದುರುದ್ದೇಶದಿಂದ ತಡೆ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ,ಬಿಜೆಪಿ ಮುಖಂಡ, ದಿಶಾ ಸಮಿತಿ ಸದಸ್ಯ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ತಾಲೂಕಿನ ಮುದ್ದೇನಹಳ್ಳಿ ಗ್ರಾಮವ್ಯಾಪ್ತಿಯ ಸತ್ಯಸಾಯಿ ಗ್ರಾಮದ ಆಸ್ಪತ್ರೆ ಎದುರಿನ ಬಸ್‌ ನಿಲ್ದಾಣದ ಕಾಮಗಾರಿಯ ಸ್ಥಳದಲ್ಲಿಯೇ ಭಾನುವಾರ ಮಧ್ಯಾಹ್ನ ನಡೆಸಿದ ತುರ್ತು ಸುದ್ದಿಗೋಷ್ಟಿ ಯನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಎಳ್ಳಷ್ಟು ಸಹಾಯವಾದರೂ ಬೆಟ್ಟದಷ್ಟು ಕೃತಜ್ಞತೆಯ ಗುಣ ಬೆಳೆಸಿಕೊಳ್ಳಬೇಕು: ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ

ಮುದ್ದೇನಹಳ್ಳಿ ಗ್ರಾಮದ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ನಾಗರೀಕರಿಗೆ ಅನುಕೂಲಕ್ಕಾಗಿ ಲೋಕಸಭಾ ಸದಸ್ಯರ ವಿಶೇಷ ನಿಧಿಯಲ್ಲಿ ನೂತನ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಮುಂದಾಗಿದ್ದೆವು. ಈ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಪಂಚಾಯಿತಿ ಯಿಂದ ಅನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ಪಿಡಿಒ ತಿಪ್ಪಯ್ಯ ಮತ್ತು ತಹಶೀಲ್ದಾರ್ ಅವರು ಕಾಮಗಾರಿಗೆ ತಡೆಯೊಡ್ಡಿರುವುದು ಸರಿಯಲ್ಲ. ಕಾಮಗಾರಿಗೂ ಮುನ್ನ ಪಿಡಬ್ಲ್ಯುಡಿ ಇಲಾಖೆಯೇ ಜಾಗ ಗುರುತಿಸಿದೆ, ಜಿಲ್ಲಾಧಿಕಾರಿಗಳಿಂದ ಅನುಮೋದನೆಯನ್ನು ಪಡೆದ ಬಳಿಕವೇ ತಂಗುದಾಣದ ಕಾಮಗಾರಿ ಆರಂಭಗೊಂಡಿತ್ತು ಎಂದರು.

ಸಂಸದ ಡಾ.ಕೆ.ಸುಧಾಕರ್(MP Dr.K.Sudhakar) ಅವರಿಗೆ ಒಳ್ಳೆ ಹೆಸರು ಬರುತ್ತದೆ ಎಂಬ ರಾಜಕೀಯ ಕಾರಣದಿಂದ ಸದರಿ ಕಾಮಗಾರಿಯನ್ನು ತಡೆಯಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಪಿಡಿಒ ಹಾಗೂ ತಹಶೀಲ್ದಾರ್ ಅವರು ಯಾರ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಮಾಧ್ಯಮದ ಮೂಲಕ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

4r

ಇವೆಲ್ಲವನ್ನೂ ಮೀರಿ ಇದೀಗ ಪ್ರಯಾಣಿಕರ ತಂಗುದಾಣದ ಜಾಗವನ್ನು ಇಂದಿರಾ ಕ್ಯಾಂಟೀನ್‌ಗೆ ಮೀಸಲಿಟ್ಟಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ ಇದು ನಿಜವೇ ಆಗಿದ್ದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಸಾಕಷ್ಟು ಪರ್ಯಾಯ ಜಾಗಗಳಿವೆ. ಪಂಚಾಯಿತಿ ಮೂಲಕವೇ ಜಾಗ ಗುರುತಿಸಲು ನಾವು ಸಿದ್ಧರಿದ್ದೇವೆ.ಇದಾಗದಿದ್ದಲ್ಲಿ ಅಗತ್ಯವಿದ್ದರೆ ನನ್ನ ಸ್ವಂತ ಜಾಗವನ್ನೇ ಇಂದಿರಾ ಕ್ಯಾಂಟೀನ್‌ಗೆ ನೀಡುತ್ತೇನೆ ಎಂದು ಶಿವಕುಮಾರ್ ಘೋಷಿಸಿದರು.

ಗ್ರಾಪಂ.ಉಪಾಧ್ಯಕ್ಷ ಶಿವರಾಜ್ ಮಾತನಾಡಿ, ಶಾಸಕರ ಕುಮ್ಮಕ್ಕಿನಿಂದಲೇ ಕಾಮಗಾರಿಗೆ ತಡೆಯೊ ಡ್ಡುವ ಕೆಲಸ ಆಗುತ್ತಿದೆ ಎಂದು ದೂರಿದ ಅವರು ಅನುಮತಿ ನೆಪದಲ್ಲಿ ಪಿಡಿಒ ತಹಶೀ ಲ್ದಾರ್ ಬಂದು ಕಾಮಗಾರಿ ನಿಲ್ಲಿಸುವ ಬದಲಿಗೆ ಸಂಬಂಧಿತ ಇಲಾಖೆ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬಹುದಿತ್ತು.ಆದರೆ ಪಿಡಿಓ ಹಾಗೂ ತಹಶೀಲ್ದಾರ್ ತರಾತುರಿಯಲ್ಲಿ ಕಾಮಗಾರಿ ನಿಲ್ಲಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು ಅನುಮೋಧನೆ ನೀಡಿರುವ ಇದೇ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು ರಾಜಕೀಯ ಉದ್ದೇಶದಿಂದ ಕಾಮಗಾರಿ ತಡೆದಿದ್ದರೆ ಅದಕ್ಕೆ ರಾಜಕೀಯ ವಾಗಿಯೇ ಉತ್ತರ ನೀಡಲು ನಾವು ಸಿದ್ಧ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಸುಬ್ರಹ್ಮಣ್ಯಚಾರಿ, ರಮೇಶ್, ಪ್ರಸಾದ್, ಪ್ರಸನ್ನ, ಗುರು, ವರುಣ್‌ಗೌಡ, ಇತರರು ಉಪಸ್ಥಿತರಿದ್ದರು.