ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಸ್‌ಐಆರ್ ಬಗ್ಗೆ ಜಾಗೃತಿ ಅಗತ್ಯ: ಬಿಎಲ್‌ಒಗಳ ಜತೆ ಸಹಕರಿಸಿ ನಿಮ್ಮ ಮತಪಟ್ಟಿ ಖಾತರಿಸಿಪಡಿಸಿಕೊಳ್ಳಿ

ಎಸ್‌ಐಆರ್ ಮ್ಯಾಪಿಂಗ್ ವಿಚಾರದಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಶೇ.95.21 ಸಾಧನೆ ಮಾಡಿದೆ. ಇದರ ಉದ್ದೇಶ ಜಿಲ್ಲೆಯಲ್ಲಿ ಯಾವೊಬ್ಬ ಮತದಾರರೂ ಕೂಡ ತೀವ್ರ ಪರಿಷ್ಕರಣೆಯಿಂದ ಹೊರಗುಳಿಯ ಬಾರದು ಎಂಬುದೇ ಆಗಿದೆ. 2025ರ ಗಣತಿಯಂತೆ ಗೌರಿಬಿದನೂರು ತಾಲೂಕಿನಲ್ಲಿ 2,14,052 ಮತದಾರ ರ ಪೈಕಿ 205689 ಮತದಾರರ ಮ್ಯಾಪಿಂಗ್ ಆಗಿದ್ದು ಶೇಕಡವಾರು. 96.09ರಷ್ಟು ಸಾಧನೆ ಆಗಿದೆ.

ಅರ್ಹ ಮತದಾರರಿಗೆ ಭಯಬೇಡ; ಅನರ್ಹ, ನಕಲಿ ಮತದಾರರಿಗೆ ಅವಕಾಶವಿಲ್ಲ

ಅರ್ಹ ಮತದಾರರಿಗೆ ಭಯಬೇಡ, ಅನರ್ಹ, ನಕಲಿ ಮತದಾರರಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಎಸ್‌ಐಆರ್ ಬಗ್ಗೆ ಸ್ಪಷ್ಟನೆ ನೀಡಿದರು. -

Profile
Ashok Nayak Jun 4, 2026 11:02 PM

ಚಿಕ್ಕಬಳ್ಳಾಪುರ : ಜಿಲ್ಲೆಯ ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿ ಮತದಾನದಿಂದ ವಂಚಿತರಾಗಬಾರದು ಹಾಗೂ ಯಾವುದೇ ಒಬ್ಬ ಅನಧಿಕೃತ ವ್ಯಕ್ತಿ ಅಥವಾ ಅನರ್ಹ ಮತದಾರ ಪಟ್ಟಿಯಲ್ಲಿ ಇರಬಾರದು ಎಂಬುದು “ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026(ಎಸೈಆರ್)ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸ್ಪಷ್ಟಪಡಿಸಿ ದರು.

ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ “ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿ ದರು.
*
ಎಸ್‌ಐಆರ್ ಮ್ಯಾಪಿಂಗ್ ವಿಚಾರದಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಶೇ.95.21 ಸಾಧನೆ ಮಾಡಿದೆ. ಇದರ ಉದ್ದೇಶ ಜಿಲ್ಲೆಯಲ್ಲಿ ಯಾವೊಬ್ಬ ಮತದಾರರೂ ಕೂಡ ತೀವ್ರ ಪರಿಷ್ಕರಣೆಯಿಂದ ಹೊರ ಗುಳಿಯಬಾರದು ಎಂಬುದೇ ಆಗಿದೆ. 2025ರ ಗಣತಿಯಂತೆ ಗೌರಿಬಿದನೂರು ತಾಲೂಕಿನಲ್ಲಿ 2,14,052 ಮತದಾರರ ಪೈಕಿ 205689 ಮತದಾರರ ಮ್ಯಾಪಿಂಗ್ ಆಗಿದ್ದು ಶೇಕಡವಾರು. 96.09ರಷ್ಟು ಸಾಧನೆ ಆಗಿದೆ.

ಇದನ್ನೂ ಓದಿ: Chikkaballapur News: ಭೂಮಿ ನೀಡಲು ಸಿದ್ದವಿರುವ ರೈತರ ಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಿ ಎಂದು ಒತ್ತಾಯ

ಬಾಗೇಪಲ್ಲಿ-204705 ಮತದಾರರ ಪೈಕಿ 195825 ಶೇ.95.66, ಚಿಕ್ಕಬಳ್ಳಾಪುರ-209225, 196728-ಶೇ.94.03, ಶಿಡ್ಲಘಟ್ಟ- 209868, 200306. ಶೇ.95.44, ಚಿಂತಾಮಣಿ- 211843, 219941, ಶೇ.95.21 ರಷ್ಟು ಮ್ಯಾಪಿಂಗ್ ಆಗಿದ್ದು 51204 ಮಂದಿ ಮ್ಯಾಪಿಂಗ್‌ನಿಂದ ಹೊರಗುಳಿದಿದ್ದಾರೆ. ಇವರೆಲ್ಲಾ ಮ್ಯಾಪಿಂಗ್ ಒಳಗೆ ಬರಲು ಜೂ.12,13ರ ತನಕ ಅವಕಾಶ ನೀಡಲಾಗಿದೆ.

ಮತದಾರರ ಪಟ್ಟಿಯಲ್ಲಿ ಯಾವುದೇ ಅರ್ಹ ನಾಗರಿಕರು ಬಿಟ್ಟು ಹೋಗಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿಗಳನ್ನು ಸೇರ್ಪಡೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ನೀಡಿರುವ ಮಾನದಂಡಗಳAತೆ ಜಿಲ್ಲೆಯಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ. ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯ ಭಾಗವಾಗಿ ಸಿದ್ದತೆಗಳ ಕಾರ್ಯ, ತರಬೇತಿ, ಮುದ್ರಣ ಕಾರ್ಯ, ಮತಗಟ್ಟೆ ಅಧಿಕಾರಿ ಗಳಿಂದ ಮನೆ ಮನೆ ಭೇಟಿ, ಮತಗಟ್ಟೆಗಳ ಪುನರ್ ವಿಂಗಡಣೆ, ಆಕ್ಷೇಪಣೆ ಸ್ವೀಕೃತಿ, ಆಕ್ಷೇಪಣೆ ವಿಲೆವಾರಿ, ಕರಡು ಮತದಾರರ ಪಟ್ಟಿ ಪ್ರಕಟಣೆ ಇತ್ಯಾದಿ ಪ್ರಕ್ರಿಯೆಗಳು ಜೂನ್ 20ರಿಂದ ಪ್ರಾರಂಭ ವಾಗಿ ಅಕ್ಟೋಬರ್ 7 ರ ಅಕ್ಟೋಬರ್ 2026ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.

ಎಸ್‌ಐಆರ್ ಪ್ರಕ್ರಿಯೆ ವೇಳಾಪಟ್ಟಿ
ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತಂತೆ ನಡೆಯುವ ವೇಳಾ ಪಟ್ಟಿ ಹೀಗಿದೆ. ಮತದಾರರ ಪಟ್ಟಿ ಸಿದ್ಧತೆ, ತರಬೇತಿ ಹಾಗೂ ಮುದ್ರಣ ಕಾರ್ಯವನ್ನು 20ರ ಜೂನ್‌ನಿಂದ 29 ಜೂನ್‌ವರೆಗೆ ನಡೆಯ ಲಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆಮನೆ ಭೇಟಿ ಕಾರ್ಯವು ಜೂನ್ 30ರಿಂದ ಜುಲೈ 29ರತನಕ ನಡೆಯಲಿದೆ. ಮತಗಟ್ಟೆಗಳ ಪುನರ್‌ವಿಂಗಡಣೆ ಕಾರ್ಯವು ಜುಲೈ 29ರೊಳಗೆ ಪೂರ್ಣ ವಾಗಿ ನಡೆಯಲಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆಯು ಆಗಸ್ಟ್ 8 ರಂದು ಆಗಲಿದೆ. ಮತದಾರ ರಿಂದ ಹಕ್ಕು ಮತ್ತು ಆಕ್ಷೇಪಣೆ ಸ್ವೀಕೃತಿಯು ಆಗಸ್ಟ್ 05ರಿಂದ ಸೆಪ್ಟಂಬರ್ 4ರತನಕ ನಡೆಯಲಿದೆ. ನೋಟೀಸ್ ಹಂತ, ಸ್ವೀಕೃತವಾದಹಕ್ಕು ಹಕ್ಕು ಆಕ್ಷೇಪಣೆ ವಿಲೇವಾರಿಯನ್ನು 5ರ ಆಗಸ್ಟ್ 2026ರಿಂದ ಆಕ್ಟೋಬರ್ 3ರತನಕ ನಡೆಯಲಿದೆ.

ಜಿಲ್ಲೆಯಲ್ಲಿ ನಡೆಯುವ ಎಸ್‌ಐಆರ್ ಪ್ರಕ್ರಿಯೆಗಳ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸುವ ಸಂಬಂಧ ಇಂದು ಕಾರ್ಯಾಗಾರವನ್ನು ಹಮ್ಮಿಕೊಂಡು ಮಾಹಿತಿ ನೀಡಲಾಗಿದೆ. ಮುಂದಿನ ಎಲ್ಲ ಪ್ರಕ್ರಿಯೆಗಳ ಮಾಹಿತಿಯನ್ನು ಕಾಲೋಚಿತವಾಗಿ ತಿಳಿಸಿ ಕೊಡಲಾಗುತ್ತದೆ. ಜಿಲ್ಲಾಡಳಿತದ ಈ ಕಾರ್ಯಕ್ಕೆ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಬುತ್ ಮಟ್ಟದ ಏಜೆಂಟರು, ಸಮಸ್ತ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿ ದರು. ಅಂತಿಮ ಮತದಾರರ ಪಟ್ಟಿ ಪ್ರಕಟಣೆಯನ್ನು 7ರ ಆಕ್ಟೋಬರ್ 2026ರಂದು ಮಾಡಲಾಗು ವುದು.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2025ರ ಮತದಾರ ಪಟ್ಟಿ ಅನ್ವಯ ಜಿಲ್ಲೆಯಲ್ಲಿ 10,69,693 ಮತದಾರರು ಇದ್ದಾರೆ ಈ ಪೈಕಿ 10,18,489 ಮತದಾರರ ಮ್ಯಾಪಿಂಗ್ ಕಾರ್ಯವನ್ನು ಮಾಡಿ ಶೇ.95.21 ರಷ್ಟು ಪ್ರಗತಿ ಸಾಧಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗಾಗಿ 5 ಮತದಾರ ನೋಂದಣಾಧಿಕಾರಿಗಳು, 10 ಸಹಾಯಕ ಮತದಾರ ನೋಂದಣಾಧಿಕಾರಿಗಳು, 1293 ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ)ಹಾಗೂ 129 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದರು.

ಈ ಮತಗಟ್ಟೆ ಅಧಿಕಾರಿಗಳು ಈ ತಿಂಗಳ 30 ರಿಂದ ಜುಲೈ-29 ರವರೆಗೆ  ಮತದಾರರ ಮನೆ ಮನೆಗಳಿಗೆ ಭೇಟಿ ಮಾಡಿ ಜಿಲ್ಲೆಯ 10,69,693 ಮತದಾರರಿಗೂ ಗಣತಿ ನಮೂನೆ(ಎನುಮರೇಷನ್ ಫಾರಂ) ಯನ್ನು ದ್ವಿಪ್ರತಿಯಲ್ಲಿ ವಿತರಣೆ ಮಾಡಿ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಹ ಅವರೇ ಸ್ವೀಕೃತಿ ಮಾಡಲಿದ್ದಾರೆ. ಮತದಾರರು ಗಣತಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸದೇ ಇದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನಮೂದಾಗುವುದಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲ ನಾಗರಿಕರು ಮತಗಟ್ಟೆ ಅಧಿಕಾರಿಗಳು ನೀಡುವ ಈ ನಮೂನೆಯನ್ನು ಭರ್ತಿ ಮಾಡಿ ಹಿಂತಿರುಗಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

1200ಕ್ಕೂ ಹೆಚ್ಚು ಮತದಾರರು ಇರುವ ಜಿಲ್ಲೆಯ 149 ಮತಗಟ್ಟೆಗಳಲ್ಲಿ ಹೆಚ್ಚುವರಿ ಮತಗಟ್ಟೆ ತೆರೆಯಲು  ಕ್ರಮ ವಹಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ರಾಜಕೀಯ ಪಕ್ಷದ ಮತಗಟ್ಟೆ ಮಟ್ಟದ ಏಜೆಂಟ್-2ರನ್ನು ನೇಮಕ ಮಾಡಬೇಕಾಗಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಏಜೆಂಟರುಗಳ ಪಟ್ಟಿಯನ್ನು ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಕಾಂಗ್ರೆಸ್ ಪಕ್ಷದ ಪ್ರತಿನಿಧಿ, ಮಧುಸೂದನ್, ಭಾರತೀಯ ಜನತಾ ಪಕ್ಷದ ಪ್ರತಿನಿಧಿ ಲಕ್ಷ್ಮೀ ನಾರಾಯಣಗುಪ್ತ, ಸಿಪಿಐಎಂ. ಪಕ್ಷದ ಪ್ರತಿನಿಧಿ ಮುನಿಕೃಷ್ಣಪ್ಪ ಸೇರಿದಂತೆ ಎಲ್ಲ ತಾಲ್ಲೂಕುಗಳ ತಹಸೀಲ್ದಾರರು, ನಗರಾಡಳಿತ ಸಂಸ್ಥೆಗಳ ಪೌರಾಯುಕ್ತರುಗಳು, ಮುಖ್ಯಾಧಿಕಾರಿಗಳು ಹಾಜರಿದ್ದರು.
*
2002 ಮತ್ತು 2026ರಂತೆ ವಿಧಾನ ಸಭಾಕ್ಷೇತ್ರಗಳ ಮಾಹಿತಿ
ಕ್ರಮಸಂಖ್ಯೆ- 2026ರಂತೆ ವಿಧಾನಸಭಾ ಕ್ಷೇತ್ರದ ಹೆಸರು ಸಂಖ್ಯೆ, 2002ರಂತೆ ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಸಂಖ್ಯೆ
೦೧. ಗೌರಿಬಿದನೂರು-139, 2002ರಲ್ಲಿ-064,
೦೨. ಬಾಗೇಪಲ್ಲಿ-140,   2002ರಲ್ಲಿ-067
೦೩. ಚಿಕ್ಕಬಳ್ಳಾಪುರ-141, 2002ರಲ್ಲಿ-065,
೦೪. ಶಿಡ್ಲಘಟ್ಟ-142,    2002ರಲ್ಲಿ-66
೦೫. ಚಿಂತಾಮಣಿ-143,   2002ರಲ್ಲಿ-068, ವೇಮಗಲ್-074