ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA KH.Puttaswamygowda: ಮುದುಗಾನಕುಂಟೆ ಗಂಗಮ್ಮನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಮೂಲ ಸೌಲಭ್ಯ: ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ಭರವಸೆ

ಮುದುಗಾನಕುಂಟೆ ಕ್ಷೇತ್ರದ ಗಂಗಮ್ಮ ತಾಯಿಯ ದರ್ಶನಕ್ಕಾಗಿ ಪ್ರತಿ ಸೋಮವಾರ ಸಾವಿರಾರು ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥಗಳನ್ನು ನೆರೆವೇರಿಸುವಂತೆ ಗಂಗಮ್ಮ ತಾಯಿಗೆ ಅರಿಕೆ ಹೊತ್ತು ಪೂಜೆ ಸಲ್ಲಿಸುತ್ತಾರೆ,ಅದರಲ್ಲೂ ವಿಶೇಷವಾಗಿ ಶ್ರೀಕ್ಷೇತ್ರಕ್ಕೆ ಬರುವ ಮಹಿಳಾ ಯಾತ್ರಿಕರಿಗಾಗಿ ಸ್ನಾನದ ಗೃಹಗಳ ಸಂಕೀರ್ಣವನ್ನು ನಿರ್ಮಿಸಲು ಸುಮಾರು ಅರವತ್ತು ಲಕ್ಷ ರೂಪಾಯಿಗಳ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗಿತ್ತು.

ಮುದುಗಾನಕುಂಟೆ ಗಂಗಮ್ಮನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಮೂಲ ಸೌಲಭ್ಯ

-

Profile
Ashok Nayak May 19, 2026 11:44 PM

ಗೌರಿಬಿದನೂರು: ಶ್ರೀಕ್ಷೇತ್ರ ಮುದುಗಾನಕುಂಟೆ ಗಂಗಮ್ಮನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಲಿಸುವುದಾಗಿ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ(MLA KH.Puttaswamygowda) ರು ಭರವಸೆ ನೀಡಿದರು.

ಅವರು ತಾಲೂಕಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮುದುಗಾನಕುಂಟೆ ಕ್ಷೇತ್ರದಲ್ಲಿ, ಪ್ರವೇಶ ದ್ವಾರ ದಿಂದ ಗಂಗಮ್ಮ ತಾಯಿಯ ಕಲ್ಯಾಣಿಯವರೆಗೂ ಸುಮಾರು ಐವತ್ತು ಲಕ್ಷ ರೂಪಾಯಿಗಳ ವೆಚ್ಚ ದಲ್ಲಿ ನಿರ್ಮಿಸುವ ಸಿಮೆಂಟ್ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮುದುಗಾನಕುಂಟೆ ಕ್ಷೇತ್ರದ ಗಂಗಮ್ಮ ತಾಯಿಯ ದರ್ಶನಕ್ಕಾಗಿ ಪ್ರತಿ ಸೋಮವಾರ ಸಾವಿರಾರು ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥಗಳನ್ನು ನೆರೆವೇರಿಸುವಂತೆ ಗಂಗಮ್ಮ ತಾಯಿಗೆ ಅರಿಕೆ ಹೊತ್ತು ಪೂಜೆ ಸಲ್ಲಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಶ್ರೀಕ್ಷೇತ್ರಕ್ಕೆ ಬರುವ ಮಹಿಳಾ ಯಾತ್ರಿಕರಿಗಾಗಿ ಸ್ನಾನದ ಗೃಹಗಳ ಸಂಕೀರ್ಣವನ್ನು ನಿರ್ಮಿಸಲು ಸುಮಾರು ಅರವತ್ತು ಲಕ್ಷ ರೂಪಾಯಿಗಳ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗಿತ್ತು.

ಇದನ್ನೂ ಓದಿ: Gauribidanur News: ಮೇ.17ಕ್ಕೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

ಸ್ನಾನ ಗೃಹಗಳ ಸಂಕೀರ್ಣದ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿ ಇದೆ. ಶ್ರೀ ಕ್ಷೇತ್ರದ ಭಕ್ತರಿಗಾಗಿ ಶುದ್ದ ಕುಡಿಯುವ ನೀರಿನ ಘಟಕ ಅವಶ್ಯಕತೆ ಇದೆ ಎಂದು ದೇವಸ್ಥಾನ ದ ಆಡಳಿತ ಮಂಡಳಿ ಮನವಿಯನ್ನು ಸಲ್ಲಿಸಿದ್ದಾರೆ. ಅದನ್ನು ಕೂಡ ಶೀಘ್ರವಾಗಿ ನೆರವೇರಿಸುವು ದಾಗಿ ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತಿಳಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಅರವಿಂದ್, ತಾಲೂಕು ಪಂಚಾಯತಿ ಇಓ ಜಿ.ಕೆ ಹೊನ್ನಯ್ಯ, ಪೊಲೀಸ್ ವೃತ್ತ ನಿರಿಕ್ಷಕ ಅಂಜನ್ ಕುಮಾರ್, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನರಸಿಂಹರೆಡ್ಡಿ, ದೇವಸ್ಥಾನದ ಪಾರುಪತ್ತೇದಾರ ಕಿರಣ್ ಮುಖಂಡರಾದ ಲಕ್ಷ್ಮೀನಾರಾಯಣ್ ಪಟೇಲ್, ಸಾಗಾನಹಳ್ಳಿ ಶಿವಕುಮಾರ್, ದಲಿತ ಮುಖಂಡ ಕೆ.ನಂಜುಂಡಪ್ಪ, ಅಶೋಕ್ ಕುಮಾರ್, ಲೇಟೆಸ್ಟ್ ಚಂದ್ರು, ಹನುಮಂತರಾಯಪ್ಪ, ಜಬೀ, ನರಸಿಂಹಮೂರ್ತಿ, ತಿಮ್ಮರೆಡ್ಡಿ, ಆನಂದ್, ಮೂರ್ತಿ, ಗುತ್ತಿಗೆದಾರರಾದ ವಿಜಯ್ ಕುಮಾರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.