ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ರಸ್ತೆ ಗುಂಡಿಗಳ ನಡುವೆ ಸಂಚಾರ – ರಾಜೀವ್ ಗಾಂಧಿ ಲೇಔಟ್ ನಿವಾಸಿಗಳ ಸಂಕಷ್ಟ

ಕಳೆದ 20 ರಿಂದ 25 ದಿನಗಳಿಂದ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾತ್ರ ಪೂರ್ಣಗೊಂಡಿಲ್ಲ. ಪರಿಣಾಮ ರಸ್ತೆ ಸಂಪೂರ್ಣ ಕೆಸರುಮಯವಾಗಿ ವಾಹನ ಸವಾರರಿಗೆ ದೊಡ್ಡ ತೊಂದರೆಯಾಗಿದೆ. ಕೆಲವೆಡೆ ವಾಹನಗಳು ಗುಂಡಿಗಳಲ್ಲಿ ಸಿಲುಕಿ ಕೊಳ್ಳುತ್ತಿರುವ ಘಟನೆಗಳು ಕೂಡ ನಡೆಯುತ್ತಿವೆ.

ರಸ್ತೆ ಗುಂಡಿಗಳ ನಡುವೆ ಸಂಚಾರ – ರಾಜೀವ್ ಗಾಂಧಿ ಲೇಔಟ್ ನಿವಾಸಿಗಳ ಸಂಕಷ್ಟ

-

Profile
Ashok Nayak May 20, 2026 12:06 AM

ಶಿಡ್ಲಘಟ್ಟ: ನಗರದ ರಾಜೀವ್ ಗಾಂಧಿ ಲೇಔಟ್‌ನಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ ಹಾಗೂ ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು ದಿನನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯ ನಂತರ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಎಲ್ಲೆಲ್ಲೂ ನೀರು ನಿಂತು ಗುಂಡಿಗಳು ಕಾಣದಂತಾಗಿವೆ.

ಈ ರಸ್ತೆಯ ಮೂಲಕ ಪ್ರತಿದಿನ ಶಾಲಾ ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಸಾರ್ವಜನಿಕರ ಸಂಚಾರ ನಡೆಯುತ್ತಿದ್ದು, ಅಪಾಯದ ನಡುವೆಯೇ ಜನರು ಓಡಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ವಿಶೇಷವಾಗಿ ಶಾಲಾ ಮಕ್ಕಳು ಸುರಕ್ಷಿತವಾಗಿ ಸಂಚರಿಸುವ ಬಗ್ಗೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: Shidlaghatta News: ಜನರ ವಿಶ್ವಾಸವೇ ನನ್ನ ರಾಜಕೀಯ ಶಕ್ತಿ: ಪುಟ್ಟು ಆಂಜಿನಪ್ಪ

ಸ್ಥಳೀಯರ ಪ್ರಕಾರ, ಕಳೆದ 20 ರಿಂದ 25 ದಿನಗಳಿಂದ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾತ್ರ ಪೂರ್ಣಗೊಂಡಿಲ್ಲ. ಪರಿಣಾಮ ರಸ್ತೆ ಸಂಪೂರ್ಣ ಕೆಸರುಮಯವಾಗಿ ವಾಹನ ಸವಾರರಿಗೆ ದೊಡ್ಡ ತೊಂದರೆಯಾಗಿದೆ. ಕೆಲವೆಡೆ ವಾಹನಗಳು ಗುಂಡಿಗಳಲ್ಲಿ ಸಿಲುಕಿ ಕೊಳ್ಳುತ್ತಿರುವ ಘಟನೆಗಳು ಕೂಡ ನಡೆಯುತ್ತಿವೆ.

ರಾತ್ರಿ ವೇಳೆ ವಿದ್ಯುತ್ ಕಡಿತವಾದರೆ ರಸ್ತೆ ಪರಿಸ್ಥಿತಿ ಇನ್ನಷ್ಟು ಭಯಾನಕವಾಗುತ್ತದೆ ಎಂದು ನಿವಾಸಿ ಗಳು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ನಗರಸಭೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

image

"ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಬರುತ್ತಾರೆ. ಈಗ ಜನರ ಸಮಸ್ಯೆ ಕೇಳಲು ಯಾರೂ ಇಲ್ಲ. ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ. ಶಾಲಾ ವಾಹನಗಳು ಓಡಾ ಡಲು ತುಂಬಾ ಕಷ್ಟವಾಗುತ್ತಿದೆ. ಯಾರಾದರೂ ಪ್ರಾಣ ಕಳೆದುಕೊಂಡ ನಂತರವೇ ಕ್ರಮ ಕೈಗೊಳ್ಳುತ್ತಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು."

-ನಾಗಭೂಷಣ್ ಸ್ಥಳೀಯ ನಿವಾಸಿ