Chikkaballapur News: ಸಂಸದ ಸುಧಾಕರ್ ವಿರುದ್ಧದ ಆರೋಪಗಳಿಗೆ ಬಿಜೆಪಿ ಮುಖಂಡರು ತಿರುಗೇಟು
ಸಂಸದ ಸುಧಾಕರ್ ಅವರಿಗೆ ಅಡ್ಜೆಸ್ಟ್ಮೆಂಟ್ ರಾಜಕಾರಣವೇ ತಿಳಿದಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆ ಯ ವೇಳೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಅವರು ಶ್ರಮಪಟ್ಟಿದ್ದರು. ಯಾರಾದರೂ ಸೋತರೆ ಅದಕ್ಕೆ ಸುಧಾಕರ್ ಅವರನ್ನು ಕಾರಣವೆಂದು ಹೇಳುವುದು ಸರಿಯಲ್ಲ. ಇನ್ನೂ ಚೀಮುಲ್ ಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿ ಪರ ಇದ್ದರು ಎನ್ನುವುದು ಶುದ್ಧ ಸುಳ್ಳು . ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯವೂ ಇಲ್ಲ
ಸಂಸದ ಡಾ. ಕೆ. ಸುಧಾಕರ್ ಅವರು ಸದಾ ರೈತರಪರ ಕೆಲಸಗಳನ್ನು ಮಾಡುತ್ತಿರುವ ಬದ್ಧತೆಯುಳ್ಳ ನಾಯಕರು. ಅಡ್ಜೆಸ್ಟ್ಮೆಂಟ್ ರಾಜಕಾರಣವು ಅವರ ರಾಜಕೀಯ ಜೀವನದಲ್ಲೇ ಇಲ್ಲ ಎಂಬುದನ್ನು ಜೆಡಿಎಸ್ ಮುಖಂಡರು ಅರಿಯಬೇಕು ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದರು. -
ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್(MP Dr. K. Sudhakar) ಅವರು ಸದಾ ರೈತರಪರ ಕೆಲಸಗಳನ್ನು ಮಾಡು ತ್ತಿರುವ ಬದ್ಧತೆಯುಳ್ಳ ನಾಯಕರು. ಅಡ್ಜೆಸ್ಟ್ಮೆಂಟ್ ರಾಜಕಾರಣವು ಅವರ ರಾಜಕೀಯ ಜೀವನ ದಲ್ಲೇ ಇಲ್ಲ ಎಂಬುದನ್ನು ಜೆಡಿಎಸ್ ಮುಖಂಡರು ಅರಿಯಬೇಕು ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕರು, ಸುದ್ದಿಗೋಷ್ಠಿಯಲ್ಲಿ ಶಿಡ್ಲಘಟ್ಟ ಶಾಸಕ ರವಿಕುಮಾರ್(Shidlaghatta MLA Ravikumar) ಪರವಾಗಿ ಕೆಲವರು ಮಾಡಿರುವ ಆರೋಪ ಗಳಿಗೆ ತಿರುಗೇಟು ನೀಡಿದರು.
ಡಿಸಿ ಕಚೇರಿ ಬಳಿ ನಡೆಯುತ್ತಿರುವ ರೈತರ ಪರ ಹೋರಾಟಕ್ಕೆ ಸಂಸದ ಸುಧಾಕರ್ ಅವರು ಬೆಂಬಲ ನೀಡಿದ್ದಾರೆಯೇ ಹೊರತು,ಯಾರನ್ನೂ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂಬು ದನ್ನು ಅರಿಯಬೇಕು. ಅರಿತು ಮಾತನಾಡಬೇಕು ಎಂದರು.
ಚಿಮುಲ್(Chimul) ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ, ಶಿಡ್ಲಘಟ್ಟ ಶಾಸಕ ರವಿಕುಮಾರ್ ಹಾಗೂ ಡಾ.ಕೆ. ಸುಧಾಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇದ್ದರೆ,ಅದನ್ನು ಹೈಕಮಾಂಡ್ ಮಟ್ಟದಲ್ಲಿ ಕುಳಿತು ಚರ್ಚಿಸಿ ಸರಿಪಡಿಸಿಕೊಳ್ಳಲಾಗುತ್ತದೆ. ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಮುಖಂಡರು ಚಿಮುಲ್ ಚುನಾವಣೆಯ ವೇಳೆ ಸಂಸದ ಸುಧಾಕರ್ ವಿರುದ್ಧ ಮಾಡಲಾಗಿರುವ ಆರೋಪಗಳು ಆಧಾರರಹಿತವಾಗಿದ್ದು,ಸುಧಾಕರ್ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸ ಲಿಲ್ಲ ಅವರು ಪಕ್ಷದ ಅಭ್ಯರ್ಥಿಗಳನ್ನೇ ಬೆಂಬಲಿಸಿದ್ದು,ಇತರರಿಗೆ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪೇರೇಸಂದ್ರ ಕ್ಷೇತ್ರದಿಂದ ನನ್ನ ಗೆಲುವಿಗೆ ಸಂಸದ ಡಾ.ಕೆ.ಸುಧಾಕರ್ ಅವರೆ ಕಾರಣ ಎಂದ ಅವರು ಕೋಲಾರ ಹಾಲು ಒಕ್ಕೂಟದಿಂದ ಚಿಮುಲ್ ಆಗಲು ಸಂಸದ ಡಾ ಕೆ ಸುಧಾಕರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಎಲ್ಲಿ ರೈತರಿಗೆ ಅನ್ಯಾಯ ಆಗುತ್ತೋ ಅಲ್ಲಿ ಸಂಸದ ಡಾ .ಕೆ.ಸುಧಾಕರ್ ಅವರು ರೈತರ ಪರವಾಗಿ ನಿಲ್ಲಿತ್ತಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ರೈತರ ಧರಣಿಯಲ್ಲಿ ಭಾಗವಹಿಸಿ ರೈತರ ಪರ ಮಾತನಾಡಿದ್ದಾರೆಯೆ ಹೊರತು ಯಾರ ವಿರುದ್ಧವೂ ಟೀಕಿಸಿಲ್ಲ.
ಜಂಗಮಕೋಟೆ ಹೋಬಳಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಹಾಗಾಗಿ ಅಲ್ಲಿನ ಶಾಸಕರು ರೈತರ ಪರ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ. ಹೊರತು ಯಾರ ವಿರುದ್ಧ ಮಾತನಾಡಿಲ್ಲ. ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಸತ್ಯಾಸತ್ಯತೆ ಅರಿತು ಮಾತನಾಡಬೇಕು ಎಂದು ಹೇಳಿದರು.
ಸಂಸದ ಸುಧಾಕರ್ ಅವರಿಗೆ ಅಡ್ಜೆಸ್ಟ್ಮೆಂಟ್ ರಾಜಕಾರಣವೇ ತಿಳಿದಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆ ಯ ವೇಳೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಅವರು ಶ್ರಮಪಟ್ಟಿದ್ದರು. ಯಾರಾದರೂ ಸೋತರೆ ಅದಕ್ಕೆ ಸುಧಾಕರ್ ಅವರನ್ನು ಕಾರಣವೆಂದು ಹೇಳುವುದು ಸರಿಯಲ್ಲ. ಇನ್ನೂ ಚೀಮುಲ್ ಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿ ಪರ ಇದ್ದರು ಎನ್ನುವುದು ಶುದ್ಧ ಸುಳ್ಳು . ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯವೂ ಇಲ್ಲ ಎಂದು ತಿರುಗೇಟು ನೀಡಿದರು.
ನಾವು ಎಲ್ಲರೂ ಸೇರಿ ರೈತರ ಪರ ಧ್ವನಿ ಎತ್ತಬೇಕು. ತಮ್ಮ ಫಲವತ್ತಾದ ಜಮೀನು ಉಳಿಸಿಕೊಳ್ಳಲು ರೈತರು ನಡೆಸುತ್ತಿರುವ ಧರಣಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿಡ್ಲಘಟ್ಟ ಮಾಜಿ ಶಾಸಕ ಎಂ. ರಾಜಣ್ಣ,ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಗಂಗರೆಕಾಲುವೆ ಪ್ರಸಾದ್,ಮಾಜಿ ಅಧ್ಯಕ್ಷ ಕಾಳೇಗೌಡ,ಎಸ್‌ಕೆಎಲ್ ದ್ಯಾವಪ್ಪ,ಸೀಕಲ್ ಆನಂದ್ ಗೌಡ,ತೇಜೇಂದ್ರ ಪಾಪು ಸೇರಿದಂತೆ ಹಲವರು ಉಪಸ್ಥಿತರಿದ್ದರು.