ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸಂಘಟಿತರಾದರೆ ಮಾತ್ರ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಸಾಧ್ಯ: ರಾಜ್ಯಾಧ್ಯಕ್ಷ ಜಿ.ನಂಜುಂಡಪ್ಪ

ಮಂಚೇನಹಳ್ಳಿ ತಾಲ್ಲೂಕು ಬೈಲ್‌ಬಸಪ್ಪ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್ ರಾಮ್ ಜನಪರ ಹೋರಾಟಗಳ ಒಕ್ಕೂಟ ಭಾನು ವಾರ ರಾಜ್ಯಾಧ್ಯಕ್ಷ ಜಿ.ನಂಜುAಡಪ್ಪ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮAಚೇನಹಳ್ಳಿ ಪಟ್ಟಣದಲ್ಲಿ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಹೇಳಿಕೆ

ಅಸಮ ಸಮಾಜದಲ್ಲಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಬೇಕಾದರೆ ಬಾಬಾ ಸಾಹೇಬರು ಹಾಕಿಕೊಟ್ಟಿರುವ ಹೋರಾಟದ ಮಾರ್ಗದಲ್ಲಿ ನಂಬಿಕೆಯಿಟ್ಟು ಮುನ್ನಡೆದರೆ ಮಾತ್ರ ಸಾಧ್ಯ ಎಂದು ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್ ರಾಮ್ ಜನಪರ ಹೋರಾಟಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ನಂಜುಂಡಪ್ಪ ತಿಳಿಸಿದರು.

Profile Ashok Nayak Feb 16, 2025 9:04 PM

ಗೌರಿಬಿದನೂರು : ಅಸಮ ಸಮಾಜದಲ್ಲಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಬೇಕಾದರೆ ಬಾಬಾ ಸಾಹೇಬರು ಹಾಕಿಕೊಟ್ಟಿರುವ ಹೋರಾಟದ ಮಾರ್ಗದಲ್ಲಿ ನಂಬಿಕೆಯಿಟ್ಟು ಮುನ್ನಡೆದರೆ ಮಾತ್ರ ಸಾಧ್ಯ ಎಂದು ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್ ರಾಮ್ ಜನಪರ ಹೋರಾಟಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ನಂಜುಂಡಪ್ಪ ತಿಳಿಸಿದರು. ಮಂಚೇನಹಳ್ಳಿ ತಾಲ್ಲೂಕು ಬೈಲ್‌ಬಸಪ್ಪ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್ ರಾಮ್ ಜನಪರ ಹೋರಾಟಗಳ ಒಕ್ಕೂಟ ಭಾನು ವಾರ ರಾಜ್ಯಾಧ್ಯಕ್ಷ ಜಿ.ನಂಜುಂಡಪ್ಪ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು.

ಇದನ್ನೂ ಓದಿ: Chikkaballapur News: ಅಪರಾಧ ಪ್ರಕರಣಗಳ ಪತ್ತೆಗೆ ಸಾರ್ವಜನಿಕರ ಸಹಕಾರ ಅಗತ್ಯ : ಎಸ್ಪಿ.ಕುಶಲ್ ಚೌಕ್ಸೆ

ದಲಿತರಪರ ಸಂಘಟನೆಗಳು ಹತ್ತು ಹಲವಾಗಿದ್ದರೂ ನಮ್ಮಗಳ ಮಾರ್ಗ ಒಂದೇ, ಅದು ಬಾಬಾ ಸಾಹೇಬರು ಹಾಕಿಕೊಟ್ಟ ಮಾರ್ಗವಾಗಿದೆ. ಸ್ವಾತಂತ್ರ್ಯ ಬಂದು 78ವರ್ಷಗಳಾದರೂ ದಮನಿತರ ಹಕ್ಕುಗಳು ಅರಣ್ಯರೋಧನವಾಗಿವೆ.ನಮ್ಮ ನಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಸಂಘಟನೆ ಯಲ್ಲಿ ನಂಬಿಕೆಯಿಟ್ಟು ಒಗ್ಗೂಡುವುದು ಅಗತ್ಯ. ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್ ರಾಮ್ ಜನಪರ ಹೋರಾಟಗಳ ಒಕ್ಕೂಟದ ನೂತನ ಪದಾಧಿಕಾರಿಗಳು ಸ್ವಾರ್ಥವನ್ನು ಬಿಟ್ಟು ಸಮುದಾಯದ ಹಿತಾಸಕ್ತಿಗೆ ಶ್ರಮಿಸಬೇಕು ಎಂದರು.

ಇದೇ ವೇಳೆ ಮಂಚೇನಹಳ್ಳಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಕಾರ್ಯಯೋಜನೆ ಬಗ್ಗೆ ಕಿವಿ ಮಾತು ಹೇಳಿದರು.

*

ಅದರಂತೆ ತಾಲ್ಲೂಕು ಅಧ್ಯಕ್ಷರಾಗಿ ಬಾಲಪ್ಪ, ಉಪಾಧ್ಯಕ್ಷರಾಗಿ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಯಾಗಿ ಹರೀಶ್ ಎಂ.ಎನ್, ಸಹ ಕಾರ್ಯದರ್ಶಿಯಾಗಿ ಜಯಸಿಂಹ, ಖಜಾಂಚಿಯಾಗಿ ಕೆ. ಎಂ.ರವಿ ಕುಮಾರ್, ಸಹ ಖಜಾಂಚಿಯಾಗಿ ನರಸಿಂಹಪ್ಪ, ಸಂಚಾಲಕರಾಗಿ ಲಕ್ಷ್ಮೀ ನರಸಪ್ಪ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುಮಿತ್ರಾ, ಉಪಾಧ್ಯಕ್ಷರಾಗಿ ಗಾಯಿತ್ರಿ, ಚೈತ್ರ, ನಿರ್ದೇಶಕರಾಗಿ ನಾರಾಯ ಣಪ್ಪ, ಬಾಲಕೃಷ್ಣ ತಾಲ್ಲೂಕು ಸಮಿತಿ ಸದಸ್ಯರಾಗಿ ನಾಗರಾಜು ನರಸಿಂಹಮೂರ್ತಿ, ನಾಗರಾಜ್, ನಾಗೇಶ್, ಬಾಲಪ್ಪ, ಮೂರ್ತಿ, ತಿಮ್ಮರಾಜು, ಕದಿರಪ್ಪ ಮುಂತಾದವರು ಉಪಸ್ಥಿತರಿದ್ದರು.