ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ದಾಳಿಯಲ್ಲಿ ಮಡಿದವರಿಗೆ ಕ್ಯಾಂಡಲ್ ಬೆಳಗಿ ಗೌರವ ಸಲ್ಲಿಕೆ,  ಬಿಜೆಪಿ ಮುಖಂಡ ಸಂದೀಪ್ ಬಿ ರೆಡ್ಡಿ ಮತ್ತು ಸಾರ್ವಜನಿಕರು ಭಾಗಿ

ಪೆಹಲ್ಗಾಂ ನಲ್ಲಿ ಪಾಕಿಸ್ತಾನ ಉಗ್ರರು ಭಾರತದ ಪ್ರವಾಸಿಗರ ಮೇಲೆ ನಡೆಸಿರುವ ಅಟ್ಟಹಾಸಕ್ಕೆ ನನ್ನ ಖಂಡನೆ ಇದೆ. ಇದೊಂದು ಹೇಡಿಗಳ ಕೃತ್ಯವಾಗಿದೆ. ಅಭಿವೃದ್ಧಿಯ ಮೂಲಕ ಭಾರತವನ್ನು ಎದುರಿಸಲಾಗದ ಪಾಕಿಸ್ತಾನ ಉಗ್ರರನ್ನು ಛೂ ಬಿಟ್ಟು ವಿಕೃತ ಆನಂದ ಪಡುತ್ತಿದೆ.

ಪಹಲ್ಗಾಮ್ ದಾಳಿ ಖಂಡಿಸಿ ಹಿಂದೂ ಸಂಘಟನೆಗಳ ಪಂಜಿನ ಮೆರವಣಿಗೆ

Profile Ashok Nayak Apr 26, 2025 11:40 PM

ಚಿಕ್ಕಬಳ್ಳಾಪುರ : ಇತ್ತೀಚೆಗೆ ಕಾಶ್ಮೀರದ ಪೆಹಲ್ಗಾಂ ನಲ್ಲಿ ನಡೆಸಿದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಟೌನ್ ಹಾಲ್ ವೃತ್ತದಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಗಂಗಮ್ಮ ಗುಡಿ ರಸ್ತೆ  ಬಜಾರ್ ರಸ್ತೆ ಎಂಜಿ ರಸ್ತೆ ಮಾರ್ಗವಾಗಿ ಶಿಡ್ಲಘಟ್ಟ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣಿ ಗೊಂಡು ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು. ಮೆರವಣಿಗೆ ಉದ್ದಕ್ಕೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಾಕಿಸ್ತಾನದ ಕೃತ್ಯವನ್ನು ಖಂಡಿಸಿ ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಮೊಳಗಿಸಿದರು.

ಈ ವೇಳೆ ಮಾತನಾಡಿದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಪೆಹಲ್ಗಾಂ ನಲ್ಲಿ ಪಾಕಿಸ್ತಾನ ಉಗ್ರರು ಭಾರತದ ಪ್ರವಾಸಿಗರ ಮೇಲೆ ನಡೆಸಿರುವ ಅಟ್ಟಹಾಸಕ್ಕೆ ನನ್ನ ಖಂಡನೆ ಇದೆ. ಇದೊಂದು ಹೇಡಿಗಳ ಕೃತ್ಯವಾಗಿದೆ. ಅಭಿವೃದ್ಧಿಯ ಮೂಲಕ ಭಾರತವನ್ನು ಎದುರಿಸಲಾಗದ ಪಾಕಿಸ್ತಾನ ಉಗ್ರರನ್ನು ಛೂ ಬಿಟ್ಟು ವಿಕೃತ ಆನಂದ ಪಡುತ್ತಿದೆ. 

ಇದನ್ನೂ ಓದಿ:Chikkaballapur News: ಸಾಧನೆ ಎಂಬುದು ದಣಿವಿರದ ಪ್ರಯಾಣ, ಯಶಸ್ಸು ಇದರ ನಿಲ್ದಾಣ : ಕೆ.ವಿ.ನವೀನ್‌ಕಿರಣ್

ಭಾರತವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂಬುದನ್ನು ಪಾಕಿಸ್ತಾನ ಮರೆತಂತಿದೆ. ಅತಿ ಶೀಘ್ರ ದಲ್ಲೇ ಉಗ್ರರ ಹೆಡೆಮುರಿ ಕಟ್ಟುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತವು ವಿಶ್ವಗುರುವಾಗುತ್ತಾ ಸಾಗುತ್ತಿರುವುದನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನ ಉಗ್ರರಿಗೆ ಬೆಂಬಲ ನೀಡುತ್ತಾ ಶಾಂತಿಯ ಬೀಡಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸಿದೆ. ಭಾರತದ ಗೃಹ ಸಚಿವರು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸರ್ಕಾರ ಇದಕ್ಕೆ ತಕ್ಕ ಶಿಕ್ಷೆ ನೀಡುವ ದಿನಗಳು ದೂರವಿಲ್ಲ ಎಂದರು.

ಫಸಲ್ಗಾಮ್ ನಲ್ಲಿ ನಡೆದಿರುವ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತಿದೆ. ವಿಪರ್ಯಾಸವೆಂದರೆ ವಿರೋಧ ಪಕ್ಷಗಳು ಗುಪ್ತಚರ ಇಲಾಖೆ ವೈಫಲ್ಯ ಎಂದು ಗೆಲಿ ಮಾಡುತ್ತಿವೆ. ದೇಶವು ಗಂಡಾಂತರ ಪರಿಸ್ಥಿತಿ ಎದುರಿಸುವಾಗ ಜವಾಬ್ದಾರಿಯುತ ವಿರೋಧ ಪಕ್ಷಗಳು ಸರ್ಕಾರದೊಟ್ಟಿಗೆ ಕೈಜೋಡಿಸ ಬೇಕು ಆ ಮೂಲಕ ಉಗ್ರರ ಶಮನಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಹಿಂದೂಪರ ಸಂಘಟನೆಗಳು ನಡೆಸಿದ ಪಂಜಿನ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮೇಯರು ಭಾಗವಹಿಸಿ ಉಗ್ರರ ಕೃತೃತ್ವವನ್ನು ಖಂಡಿಸಿದರು