Gudibande News: ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿ: ಮುನಿಕೃಷ್ಣ
ಹಿಂದೂ – ಮುಸ್ಲಿಂ ಎಂಬ ಬೇಧಭಾವವಿಲ್ಲದೆ ಸೌಹಾರ್ದತೆಯಿಂದ ಎಲ್ಲರೂ ಜೀವನ ಸಾಗಿಸಬೇಕು. ಈ ನಿಟ್ಟಿನಲ್ಲಿ ಗುಡಿಬಂಡೆಯಲ್ಲಿ ಅನಾದಿಕಾಲದಿಂದಲೂ ಯಾವುದೇ ಕೋಮು ಗಲಭೆಗಳಿಗೆ ಆಸ್ಪದ ನೀಡದೇ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲೂ ಮುಂದುವರೆಯಬೇಕು. ಬಕ್ರೀದ್ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಶಾಂತಿಯುತವಾಗಿ ಆಚರಣೆ ಮಾಡಿ ಎಂದು ಸಲಹೆ ನೀಡಿದರು.
ಪಟ್ಟಣದ ಗಜನಾಣ್ಯ ಪಟ್ಟುಸಾಲೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಬಕ್ರೀದ್ ಹಬ್ಬದ ಶಾಂತಿ ಸಭೆ ಕಾರ್ಯಕ್ರಮದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ ಮಾತನಾಡಿದರು. -
ಗುಡಿಬಂಡೆ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್(Bakrid) ಹಬ್ಬವನ್ನು ಪ್ರತಿಯೊಬ್ಬರೂ ಜಾತಿ, ಮತ ಭೇದವಿಲ್ಲದೆ ಪರಸ್ಪರ ಪ್ರೀತಿ, ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಗುಡಿಬಂಡೆ ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ(Gudibande Police Circle Inspector Munikrishna) ತಿಳಿಸಿದರು.
ಪಟ್ಟಣದ ಗಜನಾಣ್ಯ ಪಟ್ಟುಸಾಲೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆ(Gudibande Police Station) ವತಿಯಿಂದ ಆಯೋಜಿಸಿದ್ದ ಬಕ್ರೀದ್ ಹಬ್ಬದ ಶಾಂತಿ ಸಭೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಹಿಂದೂ – ಮುಸ್ಲಿಂ ಎಂಬ ಬೇಧಭಾವವಿಲ್ಲದೆ ಸೌಹಾರ್ದತೆಯಿಂದ ಎಲ್ಲರೂ ಜೀವನ ಸಾಗಿಸಬೇಕು. ಈ ನಿಟ್ಟಿನಲ್ಲಿ ಗುಡಿಬಂಡೆಯಲ್ಲಿ ಅನಾದಿ ಕಾಲದಿಂದಲೂ ಯಾವುದೇ ಕೋಮು ಗಲಭೆಗಳಿಗೆ ಆಸ್ಪದ ನೀಡದೇ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕು ತ್ತಿದ್ದಾರೆ. ಅದೇ ರೀತಿ, ಮುಂದಿನ ದಿನಗಳಲ್ಲೂ ಮುಂದು ವರೆಯಬೇಕು. ಬಕ್ರೀದ್ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಶಾಂತಿ ಯುತವಾಗಿ ಆಚರಣೆ ಮಾಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: Gudibande News: ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಕರವೇಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಕೆ
ಬಳಿಕ ಮುಸ್ಲಿಂ ಮುಖಂಡರು ಸಭೆಯಲ್ಲಿ ಮಾತನಾಡಿ, ಇಡೀ ದೇಶದಲ್ಲಿಯೇ ಹಿಂದೂ ಮುಸ್ಲಿಂ ಸಮುದಾಯಗಳು ಒಗ್ಗಟ್ಟಿನಿಂದ ಬದುಕುತ್ತಿರುವುದು ಗುಡಿಬಂಡೆಯಲ್ಲಿ ಎಂದರೇ ತಪ್ಪಾಗಲಾರದು. ಮುಸ್ಲಿಂರ ಪವಿತ್ರ ಹಬ್ಬ ಬಕ್ರೀದ್ ಅನ್ನು ಹಿಂದೂ ಮುಸ್ಲಿಂರು ಸೇರಿ ಆಚರಣೆ ಮಾಡುತ್ತೇವೆ. ಇಲ್ಲಿಯವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಇನ್ನು ಮುಂದೆ ಸಹ ಇದೇ ರೀತಿಯಾಗಿ ಸೌಹಾರ್ದತೆಯಿಂದ ನಾವು ಜೀವನ ಸಾಗಿಸುತ್ತೇವೆ. ಇಲ್ಲಿ ಹಿಂದೂ ಹಬ್ಬಗಳಾಗಲೀ ಅಥವಾ ಮುಸ್ಲಿಂ ಹಬ್ಬಗಳಾಗಲಿ ಅಥವಾ ಬೇರೆ ಯಾವುದೇ ಹಬ್ಬಗಳಾದರೂ ನಾವೆಲ್ಲರೂ ಅನ್ಯೋನ್ಯತೆಯಿಂದ ಆಚರಣೆ ಮಾಡುತ್ತೇವೆ ಎಂದರು.
ಈ ಸಮಯದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮುತ್ತುರಾಜ್, ಪಪಂ ಸದಸ್ಯರಾದ ಸಿಪಿಎಂ ಬಾಬು, ಅಂಬರೀಶ್, ಮುಖಂಡರಾದ ಅಮೀರ್ ಜಾನ್, ಹಸೇನ್, ಚಾಂದ್ ಬಾಷ, ಬಡ್ಡು ಸೇರಿದಂತೆ ಹಲವರು ಹಾಜರಿದ್ದರು.