Chikkabalapur News: ಭೂಮಾಪಕರ ಮೇಲೆ ಹಲ್ಲೆಗೆ ಖಂಡನೆ
ಭೂ ದಾಖಲೆಗಳ ಉಪ ನಿರ್ದೇಶಕಿ ನಿಖಿತ ಹಾಗೂ ಶಾಸಕ ಕೆಎಚ್ ಪುಟ್ಟಸ್ವಾಮಿ ಗೌಡರಿಗೆ ಮನವಿ ಸಲ್ಲಿಸಿದ ಸಂಘ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ಭೂಮಾಪಕರು ಅಗ್ರಹಿಸಿದರು
Source : Chikkaballapur Reporter
ಗೌರಿಬಿದನೂರು : ಕಳೆದ ಡಿ.26ರಂದು ಚಿಂತಾಮಣಿ ತಾಲ್ಲೂಕಿನ ಮುರಗಮಲ್ಲ ಹೋಬಳಿ ಪೆದ್ದೊರು ಗ್ರಾಮದಲ್ಲಿ ಸ,ನಂ,೧೭೧\೦೨ ರ ಹದ್ದು ಬಸ್ತು ಅಳೆತೆ ವೇಳೆ ಪರವಾ ನಗಿ ಭೂಪಮಾಪಕ ಮೇಲೆ ಹಲ್ಲೆ ನಡೆಸಿವುದು ತಾಲೂಕು ಭೂಮಾಪಕರ ಸಂಘ ಖಂಡನೆ ವ್ಯಕ್ತಪಡಿಸಿದರು.
ಈ ಕುರಿತು ಭೂ ದಾಖಲೆಗಳ ಉಪ ನಿರ್ದೇಶಕಿ ನಿಖಿತ ಹಾಗೂ ಶಾಸಕ ಕೆಎಚ್ ಪುಟ್ಟಸ್ವಾಮಿ ಗೌಡರಿಗೆ ಮನವಿ ಸಲ್ಲಿಸಿದ ಸಂಘ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ಭೂಮಾಪಕರು ಅಗ್ರಹಿಸಿದರು.
ಈ ಬಗ್ಗೆ ತಾಲ್ಲೂಕು ಅಧ್ಯಕ್ಷ ಹೇಮರೆಡ್ಡಿ ಮಾತನಾಡಿ ಪೆದ್ದೊರಿನ ಸ,ನಂ,೧೭೧\೨ ರ ಹದ್ದ ಬಸ್ತು ಅಳೆತೆ ಪರವಾನಗಿ ಪಡೆದಿರುವ ವೆಂಕಟರವಣಪ್ಪ ಅವರು ಡಿ.24 ರಂದು ಪೊಲೀಸ್ ಬಂದೋಬಸ್ತುನಲ್ಲಿ ಜಮೀನು ಅಳೆತೆ ಕೆಲಸ ನಿರ್ವಹಿಸುತ್ತಿದ್ದಾಗ ಬಾಜುದಾರರು ಭೂ ಮಾಪಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು. ಈ ಕೂಡಲೆ ತಪ್ಪಿಸಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ಇದೇ ವೇಳೆಯಲ್ಲಿ ಭೂಮಾಪಕರಾದ ಟಿ.ಶ್ರೀನಿವಾಸಮೂರ್ತಿ, ಗಂಗಾಧರ್, ಗಿರೀಶ್, ನಾಗ ರಾಜು,ಲೋಕೇಶ್ ಬಾಬು.ಶ್ರೀನಿವಾಸರೆಡ್ಡಿ.ಮುಂತಾದವರು ಹಾಜರಿದ್ದರು.
ಗೌರಿಬಿದನೂರಿನಲ್ಲಿ ಹೆಚ್ಚಾದ ಕಳ್ಳರ ಕಾಟ : ನಗನಾಣ್ಯ ದೋಚಿ ಪರಾರಿ
ಗೌರಿಬಿದನೂರು: ಮನೆಯ ಬೀಗ ಹೊಡೆದು ಮನೆಗೆ ನುಗ್ಗಿರುವ ಕಳ್ಳರು ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಗೌರಿಬಿದನೂರು ನಗರದ ೧೨ನೇ ವಾರ್ಡ್ ತ್ಯಾಗರಾಜ ಕಾಲೋನಿಯಲ್ಲಿ ನಡೆದಿದೆ.
ಅಶ್ವತ್ ನಾರಾಯಣ್ ಎಂಬುವರ ನಡೆದಿದ್ದು ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತ್ಯಾಗರಾಜ ಕಾಲೋನಿಯಲ್ಲಿ ವಾಸವಿರುವ ಅಶ್ವತ್ ನಾರಾಯಣ್ ಶೆಟ್ಟಿ, ಶೈಲಜಾ ದಂಪತಿ ಗಳು ಆರೋಗ್ಯ ತಪಾಸಣೆಗೆಂದು ಮನೆಗೆ ಬೀಗ ಹಾಕಿಕೊಂಡು ಕಳೆದ ಶುಕ್ರವಾರ ದಂದು ಬೆಂಗಳೂರಿಗೆ ಹೋಗಿರುತ್ತಾರೆ. ಆರೋಗ್ಯ ತಪಾಸಣೆ ಮುಗಿಸಿಕೊಂಡ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿರುವ ಮಗ ಆಕಾಶ್ ಮನೆಗೆ ಹಬ್ಬಕ್ಕೆಂದು ಹೋಗಿದ್ದು ಅಲ್ಲಿ ಉಳಿದುಕೊಂಡಿರುತ್ತಾರೆ.
ಹೀಗೆ ೩-೪ ದಿನಗಳಿಂದ ಬೀಗ ಜಡಿದಿರುವ ಮನೆಯನ್ನು ಗಮನಿಸಿದ ಖದೀಮರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಮನೆ ಬೀಗ ಒಡೆದು ಒಳಗೆ ನುಗ್ಗಿ ಎರಡು ಬೀರುಗಳನ್ನು ತೆಗೆದು ಅದರಲ್ಲಿದ್ದ ಚಿನ್ನದ ನೆಕ್ಲೆಸ್, ೪ ಚಿನ್ನದ ಚೈನುಗಳು, ೧ ಜೊತೆ ಬಳೆ, ೩ ಬ್ರಾಸ್ಲೆಟ್, ೧ ಚಿನ್ನದ ಉಂಗುರ ಸೇರಿ ಒಂದು ಲಕ್ಷ ರೂಪಾಯಿ ನಗದನ್ನು ದೋಚಿದ್ದಾರೆ ಎಂದು ಶೈಲಜಾ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಚಂದ್ರಕಲಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ.ಜತೆಗೆ ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Crime News: ಉಜ್ಜೈನಿ ಮಹಾಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ದುರಂತ; ಯಂತ್ರಕ್ಕೆ ದುಪ್ಪಟಾ ಸಿಲುಕಿ ಮಹಿಳೆ ಸಾವು