Chikkaballapur News: ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಶೋಭಾ ನಾರಾಯಣ ರೆಡ್ಡಿ, ಉಪಾಧ್ಯಕ್ಷರಾಗಿ ವೆಂಕಟಲಕ್ಷಮ್ಮ ಅವಿರೋಧ ಅಯ್ಕೆ
Chikkaballapur News: ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಶೋಭಾ ನಾರಾಯಣ ರೆಡ್ಡಿ, ಉಪಾಧ್ಯಕ್ಷರಾಗಿ ವೆಂಕಟಲಕ್ಷಮ್ಮ ಅವಿರೋಧ ಅಯ್ಕೆ
Ashok Nayak
Dec 31, 2024 9:02 PM
ಬಾಗೇಪಲ್ಲಿ: ತಾಲೂಕಿನ ಜಿಲಕರಪಲ್ಲಿ ಹಾಲು ಉತ್ಪಾಧಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಶೋಭಾ ನಾರಾಯಣರೆಡ್ಡಿ, ಉಪಾಧ್ಯಕ್ಷರಾಗಿ ವೆಂಕಟಲಕ್ಷಮ್ಮ ಅವಿರೋಧ ಅಯ್ಕೆಯಾಗಿರುವುದಾಗಿ ಚುನಾ ವಣಾಧಿಕಾರಿ ಕೆ.ಎಂ.ಮಂಜುನಾಥ ಘೋಷಿಸಿದ್ದಾರೆ.ಬಾಗೇಪಲ್ಲಿ ತಾಲೂಕಿನ ಜಿಲಕರಪಲ್ಲಿ ಹಾಲು ಉತ್ಪಾಧಕರ ಮಹಿಳಾ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿ ಯಲ್ಲಿ ಒಟ್ಟು ೧೩ ಸದಸ್ಯರ ಸಂಖ್ಯಾಬಲ ಇದ್ದು, ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಡಿ.೩೦ ರಂದು ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಎನ್.ಶೋಭಾ ನಾರಾಯಣರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟಲಕ್ಷö??ಮ್ಮ ನಾಮಪತ್ರ ಸಲ್ಲಿಸಿದ್ದು, ಎರಡು ಸ್ಥಾನಗಳಿಗೆ ಎರಡನೇ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಎನ್.ಶೋಭಾ ನಾರಾಯಣರೆಡ್ಡಿ, ಉಪಾಧ್ಯರಾಗಿ ವೆಂಕಟಲಕ್ಷ್ಮಮ್ಮ ಅಯ್ಕೆಯಾಗಿರುತ್ತಾರೆ.
೯ ಸದಸ್ಯರು ಹಾಜರು, ೪ ಸದಸ್ಯರು ಗೈರು: ಒಟ್ಟು ೧೩ ಸದಸ್ಯರ ಪೈಕಿ ನಾಲ್ವರು ಸದಸ್ಯರಾದ ವರಲಕ್ಷ್ಮಿ, ಮಂಜುಳಮ್ಮ, ಅನುಸೂಯಮ್ಮ, ನಾರಾಯಣಮ್ಮ ಚುನಾವಣೆಗೆ ಗೈರು ಆಗಿದ್ದು, ಉಳಿದಂತಹ ೯ ಸದಸ್ಯರಾದ ಎನ್.ಶೋಭಾ, ವೆಂಕಟಲಕ್ಷöಮ್ಮ, ಕಾಂತಮ್ಮ, ಲಕ್ಷ್ಮಿದೇವಮ್ಮ, ಮಂಜುಳಮ್ಮ, ಶಾಂತಮ್ಮ, ವೈ.ಎ.ಪಾರ್ವತಿ, ರತ್ನಮ್ಮ, ಅಲುವೇಲಮ್ಮ ಹಾಜರಾಗಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಯ್ಕೆ ಮಾಡಿಕೊಂಡಿರುತ್ತಾರೆ.ಈ ಸಂದರ್ಭದಲ್ಲಿ ಮುಖಂಡರಾದ ಅಮರಪ್ಪ, ನಾರಾಯಣರೆಡ್ಡಿ, ವರದಪ್ಪ, ಮಧುಸೂದನ, ನರೇಂದ್ರಬಾಬು, ಡೈರಿ ಕಾರ್ಯದರ್ಶಿ ಸುಗುಣಮ್ಮ ಮತ್ತಿತರರು ಇದ್ದರು.