Chikkaballapur News: ಅಧಿಕಾರಿಗಳು ದರ್ಪ ಬಿಟ್ಟು ನ್ಯಾಯಯುತ ತೆರವುಗೊಳಿಸಿ
ಕೈವಾರ ತಾತಯ್ಯನವರ ದೇವಸ್ಥಾನದ ಸಮೀಪ ಸರ್ಕಲ್ ಹಾಗೂ ಅಕ್ಕಪಕ್ಕ ಹಲವು ಜನರು ಪುಟ್ ಪಾತ್ ಒತ್ತುವರಿ ಮಾಡಿಕೊಂಡು ಅಂಗಡಿಗಳು ಹಾಕಿಕೊಂಡಿದ್ದರು
Source : Chikkaballapur Reporter
ಅನುಕೂಲ ಮಾಡಿಕೊಟ್ಟು ಒತ್ತುವರಿ ತೆರವುಗೊಳಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ
ಚಿಂತಾಮಣಿ: ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ ಅಧಿಕಾರಿಗಳು ದರ್ಪ ಬಿಟ್ಟು ನ್ಯಾಯ ಯುತ ತೆರವುಗೊಳಿಸಿ ನಾವು ಸಹಕಾರ ನೀಡುತ್ತೇವೆ ಎಂದು ಪುಟ್ ಪಾತ್ ಒತ್ತುವರಿ ತೆರವು ಗೊಳಿಸಲು ಬಂದ ಅಧಿಕಾರಿಗಳ ಮೇಲೆ ಅಂಗಡಿ ಮಾಲೀಕರು ಗರಂ ಆಗಿ ಆಕ್ರೋಶ ಗೊಂಡರು.
ಚಿಂತಾಮಣಿ ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೈವಾರ ತಾತಯ್ಯನವರ ಕ್ಷೇತ್ರ ಇಡೀ ರಾಜ್ಯದಲ್ಲೇ ಹೆಸರು ವಾಸಿಯಾಗಿದ್ದು.ಇಲ್ಲಿಗೆ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿರುತ್ತಾರೆ.
ಕೈವಾರ ತಾತಯ್ಯನವರ ದೇವಸ್ಥಾನದ ಸಮೀಪ ಸರ್ಕಲ್ ಹಾಗೂ ಅಕ್ಕಪಕ್ಕ ಹಲವು ಜನರು ಪುಟ್ ಪಾತ್ ಒತ್ತುವರಿ ಮಾಡಿಕೊಂಡು ಅಂಗಡಿಗಳು ಹಾಕಿಕೊಂಡಿದ್ದರು.
ಇಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕರಿಬಸಪ್ಪ ಹಾಗೂ ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಪುಟ್ ಪಾತ್ ಒತ್ತುವರಿ ತೆರವು ಮಾಡಲು ಮುಂದಾದಾಗ ಸ್ಥಳೀ ಯರು ಅಧಿಕಾರಿಗಳ ಮೇಲೆ ಗರಂ ಆಗಿ ಒತ್ತುವರಿ ತೆರವುಗೊಳಿಸಬೇಕೆಂದರೆ ಮೊದಲು ನಮ್ಮಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ.ಯಾಕಂದರೆ ಸುಮಾರು ವರ್ಷಗಳಿಂದ ಬಡವರು ಅಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡಿಕೊಳ್ಳುತ್ತಿದ್ದಾರೆ.
ಅವರ ಹೊಟ್ಟೆಗೆ ಹೊಡೆಯಬೇಡಿ.ಏಕಾಏಕಿ ಪಂಚಾಯತಿ ಅಧಿಕಾರಿಗಳು ಬಂದು ಪುಟ್ ಪಾತ್ ತೆರವು ಗೊಳಿಸಿ ಎಂದು ಹೇಳಿದರೆ.ನಾವುಗಳು ಎಲ್ಲಿಗೆ ಹೋಗಬೇಕು ಅಧಿಕಾರಿಗಳು ಬಡವರ ಜೊತೆ ಚೆಲ್ಲಾಟವಾಡಬೇಡಿ, ಒಂದು ಕಡೆ ಪುಟ್ ಪಾತ್ ಒತ್ತುವರಿ ತೆರವುಗೊಳಿಸು ವುದು ಮತ್ತೊಂದು ಕಡೆ ಬಿಡುವುದು ನ್ಯಾಯಯುತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ದಾಗ, ಪಂಚಾಯತಿ ಅಧಿಕಾರಿಗಳು ಕೆಲವೊಂದು ಕಡೆ ಪುಟ್ ಪಾತ್ ಒತ್ತುವರಿಯನ್ನು ತೆರವುಗೊಳಿಸಿ,ಕೆಲ ಅಂಗಡಿ ಮಾಲೀಕರು ಅಂಗಡಿ ಮುಂಭಾಗ ಶಿಟುಗಳನ್ನು ಹಾಕಿ ಕೊಂಡಿದ್ದು, ಸ್ವಯಂ ಪ್ರೇರಿತವಾಗಿ ತೆರವು ಗೊಳ್ಳಿಸದಿದ್ದರೆ ನಾವುಗಳೇ ಖುದ್ದಾಗಿ ಬಂದು ತೆರವುಗೊಳಿಸುತ್ತೇವೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಚ್ಚರಿಕೆ ನೀಡಿ ಹೋದರು.
ರಸ್ತೆ ಅಗಲೀಕರಣ ಮಾಡಕ್ಕೆ ಪುಟ್ ಪಾತ್ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ ಎಂದು ಮಾಹಿತಿ ಗೊತ್ತಾಗಿದೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ