ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಬಳ್ಳಾಪುರ ಜಿ.ಪಂ. ಕರಡು ಮೀಸಲಾತಿ ಪ್ರಕಟ: 28 ಕ್ಷೇತ್ರಗಳ ಆಕ್ಷೇಪಣೆ ಸಲ್ಲಿಸಲು ಅ.19 ಕೊನೆದಿನ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993' ಹಾಗೂ 2023ರ ನಿಯಮಗಳನ್ವಯ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ 28 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಆವರ್ತನ (ಖoಣಚಿಣioಟಿ) ಆಧಾರದ ಮೇಲಿನ ಕರಡು ಮೀಸಲಾತಿ ಪಟ್ಟಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ್ದು 28 ಕ್ಷೇತ್ರಗಳ ಸಮಗ್ರ ಮಾಹಿತಿ ಇಲ್ಲಿದೆ.

ಚಿಕ್ಕಬಳ್ಳಾಪುರ ಜಿ.ಪಂ. ಕರಡು ಮೀಸಲಾತಿ ಪ್ರಕಟ

-

Profile
Ashok Nayak Oct 10, 2026 12:11 PM

ಚಿಕ್ಕಬಳ್ಳಾಪುರ: ಜಿಲ್ಲೆಯ 28 ಜಿಲ್ಲಾಪಂಚಾಯಿತಿ ಕ್ಷೇತ್ರಗಳ ಸಂಬಂಧ ಮೀಸಲು ಕರಡು ಪಟ್ಟಿ ಪ್ರಕಟವಾಗಿದ್ದು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19ರ ಸಂಜೆ 5ಗಂಟೆಯೇ ಕೊನೆಯ ದಿನವಾಗಿದೆ. ನಂತರ ಬಂದ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸರಕಾರ ತಿಳಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993' ಹಾಗೂ 2023ರ ನಿಯಮಗಳನ್ವಯ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ 28 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಆವರ್ತನ (ಖoಣಚಿಣioಟಿ) ಆಧಾರದ ಮೇಲಿನ ಕರಡು ಮೀಸಲಾತಿ ಪಟ್ಟಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ್ದು 28 ಕ್ಷೇತ್ರಗಳ ಸಮಗ್ರ ಮಾಹಿತಿ ಇಲ್ಲಿದೆ.  

ಅಕ್ಟೋಬರ್ 9, 2026ರಂದು ಹೊರಡಿಸಲಾದ ಈ ಅಧಿಸೂಚನೆಗೆ (ಸಂಖ್ಯೆ: ಖಆPಖ 170 ZPS 2023) ಸಂಬಂಧಿಸಿದಂತೆ ಸಾರ್ವಜನಿಕರು ಅಥವಾ ಜನಪ್ರತಿನಿಧಿಗಳು ತಮ್ಮ ಆಕ್ಷೇಪಣೆಗಳನ್ನು ಅಕ್ಟೋಬರ್ 19, 2026 (ಸೋಮವಾರ) ಸಂಜೆ 5 ಗಂಟೆಯೊಳಗೆ ಪೂರಕ ದಾಖಲೆಗಳೊಂದಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.  

ಇದನ್ನೂ ಓದಿ: Chikkaballapur News: ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಕಾನೂನು ಪಾಲನೆಗೆ ಅಧಿಕಾರಿಗಳಿಗೆ ತರಬೇತಿ

ಜಿ.ಪಂ. 28 ಪ್ರಾದೇಶಿಕ ಕ್ಷೇತ್ರಗಳ ಮೀಸಲಾತಿ ಪಟ್ಟಿ

ಸರ್ಕಾರದ ಅಧಿಸೂಚನೆಯಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ 28 ಕ್ಷೇತ್ರಗಳಿಗೆ ನಿಗದಿಪಡಿಸಲಾದ ಮೀಸಲಾತಿ ವಿವರ ಈ ಕೆಳಗಿನಂತಿದೆ:
ಗೌರಿಬಿದನೂರು ತಾಲೂಕು ಮಾಹಿತಿ  
1 1-ಹೊಸೂರು-ಅನುಸೂಚಿತ ಪಂಗಡ (Sಖಿ)
2 2-ವಿದುರಾಶ್ವತ್ಥ- ಸಾಮಾನ್ಯ
3 3-ನಗರಗೆರೆ -ಅನುಸೂಚಿತ ಜಾತಿ (Sಅ)
4 4-ದಾರಿನಾಯಕನಪಾಳ್ಯ- ಸಾಮಾನ್ಯ
5 5-ತೊಂಡೇಭಾವಿ-ಹಿAದುಳಿದ ವರ್ಗ "ಅ" (ಮಹಿಳೆ)
6 6-ಮಿಣಕನಗುರ್ಕಿ-ಅನುಸೂಚಿತ ಜಾತಿ (Sಅ)
7 7-ಮಂಚೇನಹಳ್ಳಿ-ಸಾಮಾನ್ಯ (ಮಹಿಳೆ)
8 8-ತಿಪ್ಪೇನಹಳ್ಳಿ-ಸಾಮಾನ್ಯ (ಮಹಿಳೆ)
9 9-ನಂದಿ-ಅನುಸೂಚಿತ ಜಾತಿ (Sಅ)
10 10-ಮಂಚನಬಲೆ-ಅನುಸೂಚಿತ ಜಾತಿ (ಮಹಿಳೆ)
11 11-ಮಂಡಿಕಲ್ಲು-ಸಾಮಾನ್ಯ (ಮಹಿಳೆ)
12 12-ಸೋಮೇನಹಳ್ಳಿ-ಸಾಮಾನ್ಯ
13 13-ಬೀಚಗಾನಹಳ್ಳಿ -ಅನುಸೂಚಿತ ಜಾತಿ (ಮಹಿಳೆ)
14 14-ಬಾಗೇಪಲ್ಲಿ ಅನುಸೂಿತ ಪಂಗಡ (Sಖಿ)
15 15-ಗೂಳೂರು-ಸಾಮಾನ್ಯ
16 16-ಮಿಟ್ಟೇಮರಿ-ಸಾಮಾನ್ಯ
17 17-ದಿನ್ನೂರಹಳ್ಳಿ-ಸಾಮಾನ್ಯ (ಮಹಿಳೆ)
18 18-ಪಾತಪಾಳ್ಯ-ಅನುಸೂಚಿತ ಪಂಗಡ (ಮಹಿಳೆ)
19 19-ಅಬ್ಲೂಡು-ಸಾಮಾನ್ಯ
20 20-ಚೀಮಂಗಲ-ಅನುಸೂಚಿತ ಜಾತಿ (ಮಹಿಳೆ)
21 21-ಜಂಗಮಕೋಟೆ-ಸಾಮಾನ್ಯ (ಮಹಿಳೆ)
22 22-ತಳಗವಾರ- ಸಾಮಾನ್ಯ
2323-ಊಲವಾಡಿ- ಹಿಂದುಳಿದ ವರ್ಗ "ಅ"
24 24-ಕೊನಪಲ್ಲಿ- ಅನುಸೂಚಿತ ಪಂಗಡ (ಮಹಿಳೆ)
25 25-ಮುರುಗಮಲ್ಲ - ಸಾಮಾನ್ಯ (ಮಹಿಳೆ)
26 26-ಬಟ್ಲಹಳ್ಳಿ- ಅನುಸೂಚಿತ ಜಾತಿ (ಮಹಿಳೆ)
27 27-ಚೇಳೂರು- ಸಾಮಾನ್ಯ (ಮಹಿಳೆ)
28 28-ಚಾಕವೇಲು-ಅನುಸೂಚಿತ ಜಾತಿ (Sಅ)

ಪ್ರವರ್ಗವಾರು ಸ್ಥಾನಗಳ ವಿವರ
ಸಾಮಾನ್ಯ: 14 ಸ್ಥಾನಗಳು (ಅದರಲ್ಲಿ ಮಹಿಳೆಯರಿಗೆ 7)  
ಅನುಸೂಚಿತ ಜಾತಿ (Sಅ): 8 ಸ್ಥಾನಗಳು (ಅದರಲ್ಲಿ ಮಹಿಳೆಯರಿಗೆ 4)  
ಅನುಸೂಚಿತ ಪಂಗಡ (Sಖಿ): 4 ಸ್ಥಾನಗಳು (ಅದರಲ್ಲಿ ಮಹಿಳೆಯರಿಗೆ 2)  
ಹಿಂದುಳಿದ ವರ್ಗ 'ಅ': 2 ಸ್ಥಾನಗಳು (ಅದರಲ್ಲಿ ಮಹಿಳೆಯರಿಗೆ 1) ಒಟ್ಟು ಮಹಿಳಾ ಮೀಸಲಾತಿ: 28 ಸ್ಥಾನಗಳ ಪೈಕಿ 14 ಸ್ಥಾನಗಳು ಮಹಿಳೆಯರಿಗೆ ಮೀಸಲು ಇಡಲಾಗಿದೆ.  

ಆಕ್ಷೇಪಣೆ ಸಲ್ಲಿಸಲು ವಿಳಾಸ

ಆಕ್ಷೇಪಣೆಗಳಿದ್ದಲ್ಲಿ, ಪೂರಕ ಆಧಾರಿತ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕಾದ ವಿಳಾಸ:  
ಸರ್ಕಾರದ ಕಾರ್ಯದರ್ಶಿ (ಪಂಚಾಯತ್ ರಾಜ್),ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಬಹುಮಹಡಿಗಳ ಕಟ್ಟಡ, ೩ನೇ ಹಂತ, ೩ನೇ ಮಹಡಿ,ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು-560001.  
19.10.2026ರ ಸಂಜೆ 5 ಗಂಟೆಯ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸ ಲಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಸರಕಾರ ತಿಳಿಸಿದೆ.