Fine for No helmet wearing: ಹೆಲ್ಮೆಟ್ ಇಲ್ಲದವರಿಗೆ ದಂಡದ ಬಿಸಿ ಮುಟ್ಟಿಸಿದ ಚಿಂತಾಮಣಿ ಪೊಲೀಸರು
ಹೆಲ್ಮೆಟ್ ಬಳಕೆ ಕಡ್ಡಾಯವಿದ್ದರೂ ಬಳಸದೇ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಓಡಿಸಲು ಡಿ.12 ರವರೆಗೆ ಅವಧಿ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಗಡುವು ನೀಡಿದ್ದರು. ಹೆಲ್ಮೆಟ್ ಕಡ್ಡಾಯಕ್ಕೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿ ದ್ವಿ ಚಕ್ರವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
-
ಚಿಂತಾಮಣಿ: ಭಾರತದ ಮೋಟಾರು ವಾಹನ ಕಾಯಿದೆ ಪ್ರಕಾರ, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ₹1,000 ದಂಡ ವಿಧಿಸಲಾಗುತ್ತದೆ ಮತ್ತು ಡ್ರೈವಿಂಗ್ ಲೈಸೆನ್ಸ್ 3 ತಿಂಗಳವರೆಗೆ ಅಮಾನತುಗೊಳ್ಳಬಹುದು. ಜೊತೆಗೆ ಅರ್ಧ ಹೆಲ್ಮೆಟ್‌ಗೂ ದಂಡವಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇದರ ಕಟ್ಟುನಿಟ್ಟಿನ ಜಾರಿ ಆರಂಭವಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿಯೂ ಹೆಲ್ಮೆಟ್ ಧರಿಸ ದವರಿಗೆ ಪೆಟ್ರೋಲ್ ಹಾಕದಂತೆ ಸೂಚಿಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಹೆಲ್ಮೆಟ್ ಬಳಕೆ ಕಡ್ಡಾಯವಿದ್ದರೂ ಬಳಸದೇ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಓಡಿಸಲು ಡಿ.12 ರವರೆಗೆ ಅವಧಿ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಲು ಗಡುವು ನೀಡಿದ್ದರು. ಹೆಲ್ಮೆಟ್ ಕಡ್ಡಾಯಕ್ಕೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿ ದ್ವಿ ಚಕ್ರವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
ಇದನ್ನೂ ಓದಿ: Chinthamani Crime: ITC ನಕಲಿ ಕಂಪನಿಯ ಸಿಗರೇಟ್ ಮಾರಾಟ: ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ
ಅರ್ಧ ಹೆಲ್ಮೆಟ್ ಧರಿಸಿ, ಹೆಲ್ಮೆಟ್ ಧರಿಸದ ಹಿಂಬದಿ ಸವಾರರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿ ಎಂದು ಸಲಹೆ ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ಯಾವುದೇ ಒತ್ತಡಕ್ಕೂ ಮಣಿಯದೆ ದಂಡ ಹಾಕುತ್ತಿರುವುದು ಕೆಲವರಿಗೆ ತೊಂದರೆಯಾಗುತ್ತಿದ್ದರೂ ಸಹ ಸಾರ್ವಜನಿಕ ವಲಯದಲ್ಲಿ ಪೊಲೀಸರ ಕಾರ್ಯದ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿತ್ತು.
ಇದರ ಬೆನ್ನಲ್ಲೇ ಚಿಂತಾಮಣಿ ನಗರ ಠಾಣೆಯ ಪೊಲೀಸರು ಹಾಗೂ ಗ್ರಾಮಾಂತರ ಸೇರಿದಂತೆ ಕೆಂಚಾಲಹಳ್ಳಿ ಬಟ್ಲಹಳ್ಳಿ, ಪೊಲೀಸರು ಸಹ ರಸ್ತೆಗೆ ಇಳಿದು ಹೆಲ್ಮೆಟ್ ಹಾಕದೆ ಇರುವ ದ್ವಿಚಕ್ರ ವಾಹನ ಸವಾರರಿಗೆ 500 ರೂ ರಂತೆ ದಂಡ ಬಿಸಿ ಮುಟ್ಟುಸುತ್ತಿದ್ದಾರೆ.
ಇದುವವರಿಗೆ ಚಿಂತಾಮಣಿ ತಾಲೂಕಿನ ಎಲ್ಲಾ ಠಾಣಾಗಳಿಂದ ಸುಮಾರು 6 ಲಕ್ಷಕ್ಕಿಂತ ಹೆಚ್ಚು ದಂಡ ವಸೂಲಿ ಮಾಡಲಾಗಿದೆ ಎಂದು ಅಂದಾಜಿಸಲಾಗುತ್ತಿದೆ.