Chikkaballapur News: ಸಾಹಿತಿ–ಹೋರಾಟಗಾರರ ಸೇವೆ ಪರಿಗಣಿಸಿ ಆಯ್ಕೆ ಮಾಡುವಂತೆ ಸಿ.ಕೆ.ರಾಮೇಗೌಡ ಮನವಿ
ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ಜಾಣಗೆರೆ ವೆಂಕಟರಾಮಯ್ಯ ಅವರು ಸಾಹಿತಿ, ಕಥೆಗಾರ ಹಾಗೂ ಕಾದಂಬರಿಕಾರರಾಗಿ ಗುರುತಿಸಿಕೊಂಡಿದ್ದು, ಕನ್ನಡಪರ ಹೋರಾಟಗಳಲ್ಲೂ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಅವರ ಸಾಹಿತ್ಯ ಮತ್ತು ಕನ್ನಡಪರ ಸೇವೆಯನ್ನು ವಿವಿಧ ಸಂಸ್ಥೆಗಳು ಗುರುತಿಸಿವೆ. ಇಂತಹ ಅರ್ಹರನ್ನು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಿರುವುದರಿಂದ ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
-
ಚಿಕ್ಕಬಳ್ಳಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧಿಸುತ್ತಿದ್ದು, ಅವರ ಸಾಹಿತ್ಯ ಹಾಗೂ ಕನ್ನಡಪರ ಹೋರಾಟದ ಸೇವೆಯನ್ನು ಪರಿಗಣಿಸಿ ಬೆಂಬಲಿಸುವಂತೆ ಕಸಾಪ ಮಾಜಿ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕಸಾಪವನ್ನು ರಾಜಕೀಯದಿಂದ ಮುಕ್ತವಾಗಿಟ್ಟು, ಮಾಜಿ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ಪ್ರಭಾವದಿಂದ ದೂರವಿಟ್ಟು ಪಾರದರ್ಶಕವಾಗಿ ಮುನ್ನಡೆಸುವ ಅಗತ್ಯವಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸಂಸ್ಥೆಯ ನೇತೃತ್ವಕ್ಕೆ ಆಯ್ಕೆ ಮಾಡುವ ಕುರಿತು ಮತದಾರರು ಚಿಂತಿಸಿ ಮತ ಚಲಾಯಿಸಬೇಕು ಎಂದರು.
ಇದನ್ನೂ ಓದಿ: Chikkaballapur News: ಮೂರು ವರ್ಷಗಳ ಆಡಳಿತದಲ್ಲಿ ದಲಿತರಿಗೆ ನೆರವಾಗಿಲ್ಲ, ಇನ್ನಾದರೂ ಆ ಕೆಲಸವಾಗಲಿ : ರಾಜಾಕಾಂತ್ ಆಗ್ರಹ
ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ಜಾಣಗೆರೆ ವೆಂಕಟರಾಮಯ್ಯ ಅವರು ಸಾಹಿತಿ, ಕಥೆಗಾರ ಹಾಗೂ ಕಾದಂಬರಿಕಾರರಾಗಿ ಗುರುತಿಸಿಕೊಂಡಿದ್ದು, ಕನ್ನಡಪರ ಹೋರಾಟಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಮತ್ತು ಕನ್ನಡಪರ ಸೇವೆಯನ್ನು ವಿವಿಧ ಸಂಸ್ಥೆಗಳು ಗುರುತಿಸಿವೆ. ಇಂತಹ ಅರ್ಹರನ್ನು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಿರುವುದರಿಂದ ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪಾತಮುತ್ತುಕದಹಳ್ಳಿ ಚಲಪತಿಗೌಡ ಮಾತನಾಡಿ, ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾಗಿ ಜಾಣಗೆರೆ ವೆಂಕಟರಾಮಯ್ಯ ಅವರು ನಾಡಿಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ದಸ್ತಗಿರಿಸಾಬ್, ಬಂಡ್ಲಹಳ್ಳಿ ವಿಜಯಕುಮಾರ್, ಆರ್.ಜಿ.ಹಳ್ಳಿ ನಾಗರಾಜ್, ಜಾಣಗೆರೆ ವೆಂಕಟರಾಮಯ್ಯ, ಸಿ.ಕೆ. ರಾಮೇಗೌಡ, ಚಲಪತಿಗೌಡ ಮತ್ತಿತರರು ಇದ್ದರು.
ಕಸಾಪವನ್ನು ಸಾಹಿತಿಗಳ ನೇತೃತ್ವದಲ್ಲಿ ಮುನ್ನಡೆಸುವ ಸಂಕಲ್ಪ: ಜಾಣಗೆರೆ ವೆಂಕಟರಾಮಯ್ಯ
ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹಾಗೂ ಸ್ವಾಯತ್ತತೆಯನ್ನು ಕಾಪಾಡಿ ಕೊಂಡು, ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರ ಆಶಯಗಳಿಗೆ ಅನುಗುಣವಾಗಿ ಕಸಾಪವನ್ನು ಮುನ್ನಡೆಸುವ ಸಂಕಲ್ಪ ಹೊಂದಿದ್ದೇನೆ ಎಂದು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಜಾಣಗೆರೆ ವೆಂಕಟ ರಾಮಯ್ಯ ಹೇಳಿದರು.
ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಪರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಕಸಾಪವನ್ನು ಎಲ್ಲ ಕನ್ನಡಿಗರ ಆಶಯಗಳಿಗೆ ಸ್ಪಂದಿಸುವ ವೇದಿಕೆಯನ್ನಾಗಿ ರೂಪಿಸಲು ಶ್ರಮಿಸುವುದಾಗಿ ತಿಳಿಸಿದರು. ಕನ್ನಡ ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ನಿರಂತರವಾಗಿ ದುಡಿಯುವ ಮೂಲಕ ಪರಿಷತ್ತಿನ ಗೌರವವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಿರುವು ದಾಗಿ ಹೇಳಿದರು.