ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Guarantee Scheme: ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಶೇ 100ರಷ್ಟು ಗುರಿ ಸಾಧಿಸಲು ಎಲ್ಲ ಇಲಾಖೆಗಳ ಸಹಕಾರ ಬೇಕು: ಯಲುವಳ್ಳಿ ಎನ್.ರಮೇಶ್

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆ ಗಳು ಯಶಸ್ವಿಯಾಗಿ ಮುಂದುವರೆದಿವೆ. ಸರ್ಕಾರ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಈ ಐದೂ ಯೋಜನೆಗಳು  ಮಹಿಳೆಯರು, ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ.

ಗ್ಯಾರಂಟಿ ಯೋಜನೆಗಳು ಶೇ ೧೦೦ ರಷ್ಟು ಗುರಿ ಸಾಧಿಸಲು ಸಹಕಾರ ಬೇಕು

ರಾಜ್ಯ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ಜಾತ್ಯತೀತ ಹಾಗೂ  ಪಕ್ಷಾತೀತವಾಗಿದ್ದು, ದೇಶಕ್ಕೇ ಮಾದರಿಯಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ  ಎನ್.ರಮೇಶ್ ಹೇಳಿದರು.

Profile Ashok Nayak Jul 2, 2025 12:30 AM

ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ಜಾತ್ಯತೀತ ಹಾಗೂ  ಪಕ್ಷಾತೀತವಾಗಿದ್ದು, ದೇಶಕ್ಕೇ ಮಾದರಿಯಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ದ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿಕ್ಕಬಳ್ಳಾಪುರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ದಲ್ಲಿ  ಆಯೋಜಿದ್ದ ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Chikkaballapur News: M.Sc PHYSICSನಲ್ಲಿ ಆರು ಚಿನ್ನದ ಪದಕ ಪಡೆದು ಮೊದಲ ರ‍್ಯಾಂಕ್ ಪಡೆದ ರೂಫಿಯಾ.ಕೆ.ಎಂ

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆ ಗಳು ಯಶಸ್ವಿಯಾಗಿ ಮುಂದುವರೆದಿವೆ. ಸರ್ಕಾರ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಈ ಐದೂ ಯೋಜನೆಗಳು  ಮಹಿಳೆಯರು, ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳು ದೇಶದಲ್ಲೇ ಮಾದರಿಯಾಗಿದ್ದು, ಹಲವು ರಾಜ್ಯಗಳು ಇವುಗಳನ್ನೇ ಮಾದರಿಯಾಗಿಸಿಕೊಂಡು ಆ ರಾಜ್ಯಗಳಲ್ಲಿ ಜಾರಿ ಮಾಡಿವೆ. ಗೃಹಲಕ್ಷ್ಮಿ, ಯುವ ನಿಧಿ ಯೋಜನೆ ಗಳನ್ನು ಕುಟುಂಬ ನಿರ್ವಹಣೆಗೆ ಪೂರಕವಾಗಿ ಸಕಾರಾತ್ಮಕವಾಗಿ ಬಳಸಿಕೊಂಡ ಹಲವು ಯಶೋ ಗಾಥೆಗಳಿವೆ. ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಶೇ 100ರಷ್ಟು ಗುರಿ ಸಾಧಿಸಲು ಜಿಲ್ಲಾ ಡಳಿತದ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

gaurantee

ಯೋಜನೆಗೆ ಅರ್ಹರಿರುವವರು ಕೆಲ ತಾಂತ್ರಿಕ ಲೋಪಗಳಿಂದ ವಂಚಿತರಾಗಿದ್ದರೆ ಖಂಡಿತ ಅವರಿಗೆ ಲೋಪ ನಿವಾರಿಸಿ ಯೋಜನೆ ತಲುಪಿಸಲು ನಾನು ಬದ್ಧನಾಗಿರುವೆ. ಸರಕಾರದ ಜನಪರ ನೀತಿಗೆ ಇವು ದೊಡ್ಡ ಸಾಕ್ಷ್ಯಗಳು. ಇದು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ಈ ಎಲ್ಲ ಯೋಜನೆಗಳು ದೇಶದ ಎಲ್ಲ ರಾಜ್ಯಗಳಲ್ಲೂ ಜಾರಿಗೆ ಬರಬೇಕು ಎಂಬುದು ನನ್ನ ಅಭಿಪ್ರಾಯ ವಾಗಿದ್ದು  ಈ ಜನ ಕಲ್ಯಾಣ ಯೋಜನೆಗಳ ಪ್ರತಿಯೊಂದು ಪೈಸೆಯನ್ನೂ ಸಮಾಜದ ಕಟ್ಟ ಕಡೆಯ ಫಲಾನುಭವಿಗೂ ತಲುಪಿಸಲು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರಗಳ ಚಿಕ್ಕಬಳ್ಳಾ ಪುರ ಜಿಲ್ಲಾಧ್ಯಕ್ಷನಾದ ನಾನು ಕಂಕಣಬದ್ಧನಾಗಿದ್ದೇನೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅರ್ಹರಾದ ಯಾರೊಬ್ಬರೂ ಈ ಯೋಜನೆಗಳ ಲಾಭದಿಂದ ದೂರ ವಿರಬಾರದು ಎಂಬ ಸಂಕಲ್ಪದಿAದ ಕೆಲಸ ಮಾಡುತ್ತಿದ್ದೇವೆ. ಹಾಗೂ ಇದನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸುತ್ತೇವೆ. ಲೋಪಗಳನ್ನು ಕಂಡುಕೊAಡು ಸರಿಪಡಿಸುತ್ತೇವೆ. ಯೋಜನೆ ಆರಂಭಕ್ಕೂ ಮೊದಲಿನ ಮತ್ತು ಯೋಜನೆ ಆರಂಭದ ಬಳಿಕದ ಜನಜೀವನವನ್ನು ಅದರಲ್ಲೂ ಗ್ರಾಮೀಣ ಭಾಗದ ಜನರನ್ನು, ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸುವ ಮಹಿಳೆಯರನ್ನು ಹಾಗೂ ಯೋಜನೆಗಳಿಂದ ಗೌರವಯುತ ಬದುಕು ಕಂಡುಕೊಂಡವರನ್ನು ಕಾಣುವಾಗ ಸರ್ಕಾರದ ಉದ್ದೇಶದ ಸಾರ್ಥಕತೆಯ ಅರಿವಾಗಿ ನನಗೆ ಅತೀವ ಸಂತಸವಾಗುತ್ತದೆ.  ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಕೇವಲ ಅಧಿಕಾರಿಗಳು ಮಾತ್ರವಲ್ಲ ಜನರ ನಡುವೆ ದಿನನಿತ್ಯ ಓಡಾಡುವ ಜನರ ಸುಖ ದು:ಖಗಳಿಗೆ ಅವರ ದೂರು ದುಮ್ಮಾನಗಳಿಗೆ ಸ್ಪಂದಿಸುವ ಜನಪ್ರತಿನಿಧಿ ಗಳೂ ಜವಾಬ್ದಾರರು ಎಂಬುದನ್ನು ಅನುಷ್ಠಾನ ಸಮಿತಿ ಅಧ್ಯಕ್ಷನಾಗಿ ಕಂಡುಕೊಂಡಿದ್ದೇನೆ. ಇದೇ ಆಶಯದೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಷ್ಠಾನ ಸಮಿತಿಗಳನ್ನು ರಚಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಜುAಜಣ್ಣ, ವಾರ್ತಾ ಸಹಾಯಕರಾದ ಎಂ.ಆರ್.ಮಂಜುನಾಥ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.