Gudibande News: ಗುಲಾಬಿ ಹೂ ಕೊಟ್ಟು ಹೆಲ್ಮೆಟ್ ಜಾಗೃತಿ ಮೂಡಿಸಿದ ಪೊಲೀಸರು
ಈ ಬೈಕ್ ರ್ಯಾಲಿಯು ಪೆರೇಸಂದ್ರ ಪೊಲೀಸ್ ಠಾಣೆಯಿಂದ ಆರಂಭವಾಯಿತು. ಅಲ್ಲಿಂದ ಮಂಡಿಕಲ್ಲು ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಸಂಚರಿಸಿ ಅಂತಿಮವಾಗಿ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆ ಯಲ್ಲಿ ಮೆರವಣಿಗೆಯ ಮೂಲಕ ಅಂತ್ಯಗೊಂಡಿತು. ರಸ್ತೆಯುದ್ದಕ್ಕೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು
ಗುಡಿಬಂಡೆ ತಾಲೂಕಿನಾದ್ಯಂತ ಪೊಲೀಸ್ ಇಲಾಖೆಯ ವತಿಯಿಂದ ವಾಹನ ಸವಾರರಿಗೆ ಗುಲಾಬಿ ನೀಡಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಿದರು. -
ಗುಡಿಬಂಡೆ: ಜಿಲ್ಲೆದಾದ್ಯಂತ ಡಿ.12 ರಿಂದ ಹೆಲ್ಮೆಟ್ ಧರಿಸುವ ನಿಯಮ ಕಡ್ಡಾಯಗೊಳಿಸಿದ್ದು, ಅದರಂತೆ ಗುಡಿಬಂಡೆ ತಾಲೂಕಿನಾದ್ಯಂತ ಪೊಲೀಸ್ ಇಲಾಖೆಯ ವತಿಯಿಂದ ವಾಹನ ಸವಾರರಿಗೆ ಗುಲಾಬಿ ನೀಡಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಿದರು.
ಗುಡಿಬಂಡೆ ಪೊಲೀಸ್ ವೃತ್ತ ನಿರೀಕ್ಷಕ ಮುನಿರಾಜು ಅವರ ನೇತೃತ್ವದಲ್ಲಿ ನಡೆದ ಈ ಬೈಕ್ ರ್ಯಾಲಿ ಯು ಪೆರೇಸಂದ್ರ ಪೊಲೀಸ್ ಠಾಣೆಯಿಂದ ಆರಂಭವಾಯಿತು. ಅಲ್ಲಿಂದ ಮಂಡಿಕಲ್ಲು ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಸಂಚರಿಸಿ ಅಂತಿಮವಾಗಿ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆಯ ಮೂಲಕ ಅಂತ್ಯಗೊಂಡಿತು. ರಸ್ತೆಯುದ್ದಕ್ಕೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು.
ಇದನ್ನೂ ಓದಿ: Gudibande News: ಅಂಬೇಡ್ಕರ್ ತತ್ವ ಪಾಲನೆಯೇ ಅವರಿಗೆ ಸಲ್ಲಿಸುವ ನಿಜವಾದ ಗೌರವ: ತಹಶೀಲ್ದಾರ್ ಸಿಗ್ಬತ್ತುಲ್ಲಾ ಹೇಳಿಕೆ
ಈ ವೇಳೆ ಗುಡಿಬಂಡೆ ವೃತ್ತ ನಿರೀಕ್ಷಕ ಮುನಿರಾಜು ಅವರು ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ಹಾಗೂ ಕಿವಿಮಾತು ಹೇಳಿದರು. ನಾನು ಹೊಲಕ್ಕೆ ಹೋಗುತ್ತಿದ್ದೇನೆ, ಹಾಲು ತರಲು ಹೋಗುತ್ತಿದ್ದೇನೆ ಎಂಬ ಸಬೂಬುಗಳನ್ನು ನಾವು ಕೇಳುವುದಿಲ್ಲ. ಅಪಘಾತಗಳು ಎಲ್ಲಿ, ಯಾವಾಗ ಬೇಕಾದರೂ ಸಂಭವಿಸಬಹುದು. ನಿಮ್ಮ ಕುಟುಂಬಕ್ಕೆ ನಿಮ್ಮ ಅವಶ್ಯಕತೆ ಬಹಳಷ್ಟಿದೆ. ಇದನ್ನು ಪ್ರತಿಯೊಬ್ಬರೂ ಯೋಚನೆ ಮಾಡಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ನಿಮ್ಮ ಅಮೂಲ್ಯ ಪ್ರಾಣವನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗುಡಿಬಂಡೆ ಪಿಎಸ್ಐ ಗಣೇಶ್, ಪೆರೇಸಂದ್ರ ಠಾಣೆಯ ಪಿಎಸ್ಐ ಗುಣವತಿ, ಎಎಸ್ಐಗಳಾದ ಅಮರೇಶ್ ಬಾಬು, ಆನಂದ್, ಹನುಮಂತಪ್ಪ ಹಾಗೂ ಎರಡೂ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು. ಜೊತೆಗೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು, ಶಿಕ್ಷಕರು ಮತ್ತು ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.