ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಮಾಜ ಸುಧಾರಣೆಯೇ ಡಿ.ದೇವರಾಜ ಅರಸು : ತಹಶೀಲ್ದಾರ್ ಆರತಿ.ಬಿ

ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿ ಹಾಗೂ ಶೋಷಿತ ಸಮುದಾಯಗಳಿಗೆ ರಾಜಕೀಯ ಮತ್ತು ಸಾಮಾಜಿಕ ಶಕ್ತಿ ತುಂಬಿದ ನಾಯಕರಾದ ದೇವರಾಜ ಅರಸು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಭೂ ಸುಧಾರಣಾ ಕಾಯಿದೆ ಬಡ ರೈತರಿಗೆ ಭೂಮಿ ಸಿಕ್ಕಿ ಬದುಕು ಕಟ್ಟಿಕೊಂಡರು. ಜೀತ ಪದ್ಧತಿ ನಿರ್ಮೂಲನೆ ಕಠಿಣವಾಗಿ ಜಾರಿಗೆ ತಂದರು.

ಸಮಾಜ ಸುಧಾರಣೆಯೇ ಡಿ.ದೇವರಾಜ ಅರಸು

-

Profile
Ashok Nayak Aug 21, 2026 11:49 AM

ಗುಬ್ಬಿ: ಸಾಮಾಜಿಕ ನ್ಯಾಯ ಒದಗಿಸುವಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ತುಡಿತ ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳು ಸಮಾಜದ ಮುಖ್ಯವಾಹಿನಿ ತರುವುದಾಗಿತ್ತು. ಈ ನಿಟ್ಟಿನಲ್ಲಿ ಎಲ್ಲಾ ಮುಖ್ಯಮಂತ್ರಿಗಳ ಪೈಕಿ ವಿಶಿಷ್ಟತೆಯಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ಅವರ ಸ್ಮರಣೆ ಎಲ್ಲರ ಕರ್ತವ್ಯ ಎಂದು ತಹಶೀಲ್ದಾರ್ ಆರತಿ.ಬಿ ಅಭಿಪ್ರಾಯಪಟ್ಟರು.

ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಆಯೋಜಿ ಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111 ನೇ ಜಯಂತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ವಸತಿ ನಿಲಯಗಳು ನಿರ್ಮಾಣ ಮಾಡಿದ್ದರ ಫಲ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.

ಇದನ್ನೂ ಓದಿ; Gubbi News: ಮಾದಿಗ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಅವಶ್ಯ: ಕಡಬ ಶಂಕರ್

ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿ ಹಾಗೂ ಶೋಷಿತ ಸಮುದಾಯಗಳಿಗೆ ರಾಜಕೀಯ ಮತ್ತು ಸಾಮಾ ಜಿಕ ಶಕ್ತಿ ತುಂಬಿದ ನಾಯಕರಾದ ದೇವರಾಜ ಅರಸು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಭೂ ಸುಧಾರಣಾ ಕಾಯಿದೆ ಬಡ ರೈತರಿಗೆ ಭೂಮಿ ಸಿಕ್ಕಿ ಬದುಕು ಕಟ್ಟಿಕೊಂಡರು. ಜೀತ ಪದ್ಧತಿ ನಿರ್ಮೂಲನೆ ಕಠಿಣವಾಗಿ ಜಾರಿಗೆ ತಂದರು. ಈ ರೀತಿ ಆಡಳಿತಾತ್ಮಕವಾಗಿ ಸಾಮಾಜಿಕ ನ್ಯಾಯ ಅನುಷ್ಠಾನಕ್ಕೆ ಪಣ ತೊಟ್ಟಿದ್ದರು ಎಂದು ಶ್ಲಾಘಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಮಾತನಾಡಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ವಿಶೇಷ ಯೋಜನೆ ಗಳನ್ನು ರೂಪಿಸಿ ಕರ್ನಾಟಕದ ರಾಜಕಾರಣಕ್ಕೆ ಹೊಸ ದಿಕ್ಕು ತೋರಿಸಿದ ದೇವರಾಜ ಅರಸು ಅವರ ದೂರದೃಷ್ಟಿಯ ಫಲ ವಸತಿ ನಿಲಯಗಳು. ಅಲ್ಲಿ ಶಿಕ್ಷಣ ಪಡೆದ ಬಡ ಮಕ್ಕಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ವಿಶೇಷ ಒತ್ತು ನೀಡಿ ಮುಖ್ಯವಾಹಿನಿಗೆ ತಂದರು. ಇಂತಹ ಮಹನೀಯರ ಸ್ಮರಣೆ ಎಲ್ಲರ ಕರ್ತವ್ಯ ಎಂದರು.

ರಾಜು ಕ್ಷತ್ರಿಯ ಸಮಾಜದ ಅಧ್ಯಕ್ಷ ಲಕ್ಷ್ಮೀಕಾಂತರಾಜ ಅರಸು ಮಾತನಾಡಿ, ಎಲ್ಲಾ ಜಾತಿ ಧರ್ಮಕ್ಕೆ ನ್ಯಾಯ ಒದಗಿಸಿ ಸಂವಿಧಾನದ ಆಶಯಕ್ಕೆ ಒಂದು ಬಲ ತಂದವರು ದೇವರಾಜ ಅರಸು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿ ರಾಜ್ಯದ ಆಡಳಿತಕ್ಕೆ ಹೊಸ ಆಯಾಮ ತಂದು ಉಳುವವನೇ ಭೂಮಿಯ ಒಡೆಯ ಕಾಯಿದೆಯನ್ನು ಜಾರಿಗೆ ತಂದು ಬಡ ರೈತರಿಗೆ ಬದುಕು ಕಟ್ಟಿಕೊಟ್ಟರು. ಮುಖ್ಯಮಂತ್ರಿಯಾಗಿ ಸಮಾಜದ ಚಿಂತನೆ ಹೆಚ್ಚು ನಡೆಸಿ ಸಮಾನತೆ ಸಾರಿದ್ದರು ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪವಿತ್ರಾ ಮಾತನಾಡಿ ಸಮಾನತೆಯನ್ನು ಅನುಷ್ಠಾನಕ್ಕೆ ತಂದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ವಸತಿ ನಿಲಯಗಳ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಕ್ಕಿರುವುದು ಮತ್ತೊಂದು ಸಮಾನತೆಯ ನಿದರ್ಶನ ವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನ ಬದ್ಧವಾಗಿ ಕೆಲಸ ಮಾಡಿದ ಅರಸು ಅವರು ಅಂದಿನ ಬಡತನ ನಿರ್ಮೂಲನೆ, ಜೀತ ಪದ್ಧತಿ ನಿರ್ಮೂಲನೆ, ಎಲ್ಲರಿಗೂ ಸಮಾನ ಅವಕಾಶ, ಎಲ್ಲರಿಗೂ ಕೃಷಿ ಭೂಮಿ ಹೀಗೆ ಅನೇಕ ಕಾರ್ಯಕ್ರಮವನ್ನು ಯಥಾವತ್ತಾಗಿ ಜಾರಿಗೆ ತಂದು ಸಮಾಜ ಸುಧಾರಣೆ ಮಾಡಿದ್ದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಅಲೆಮಾರಿ ಅರೆ ಅಲೆಮಾರಿ ಸಮಿತಿಯ ಸದಸ್ಯ ಮಲ್ಲಿಕಾರ್ಜುನಸ್ವಾಮಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ ಎಇಇ ಚಂದ್ರಶೇಖರ್, ರಾಜು ಕ್ಷತ್ರಿಯ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಪುರುಷೋತ್ತಮ್, ಮಂಜುನಾಥ್, ದಲಿತ ಮುಖಂಡ ಚೇಳೂರು ಶಿವನಂಜಪ್ಪ ಇನ್ನಿತರರು ಇದ್ದರು.