ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಮಾದಿಗ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಅವಶ್ಯ: ಕಡಬ ಶಂಕರ್

ತಾಲೂಕಿನ ಹಲಸಿನ ನಾಗೇನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ನಾಮಫಲಕ ಅನಾವರಣಗೊಳಿಸಿ ಮಾತನಾಡಿ,  ಮೊದಲು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಉದ್ಯೋಗವಕಾಶ ಕಲ್ಪಿಸಿ ಕೊಟ್ಟಾಗ ಮಾತ್ರ ಮಾದಿಗ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.  ಮುಖಂಡ ಅದಲಗೆರೆ ಈಶ್ವರಯ್ಯ ಮಾತನಾಡಿ ಪ್ರತಿ ಗ್ರಾಮಗಳಲ್ಲಿ ಯುವ ಸಂಘಟನೆ ಸ್ಥಾಪನೆ ಯಾಗುವುದರಿಂದ ಜನಾಂಗಕ್ಕೆ ಆಗುವ ಅನ್ಯಾಯ ತಡೆದು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಹಕರಿಸಬಹುದು

ಮಾದಿಗ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಅವಶ್ಯ: ಕಡಬ ಶಂಕರ್

-

Profile
Ashok Nayak Aug 14, 2026 8:34 PM

ಗುಬ್ಬಿ: ಡಾ.ಬಿ.ಆರ್.ಅಂಬೇಡ್ಕರ್ ರವರ ಕನಸನ್ನು ನೆನಸು ಮಾಡಲು ದಲಿತ ಜನಾಂಗದವರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕಡಬ ಶಂಕರ್ ತಿಳಿಸಿದರು.   

ತಾಲೂಕಿನ ಹಲಸಿನ ನಾಗೇನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ನಾಮಫಲಕ ಅನಾವರಣಗೊಳಿಸಿ ಮಾತನಾಡಿ,  ಮೊದಲು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಉದ್ಯೋಗವಕಾಶ ಕಲ್ಪಿಸಿ ಕೊಟ್ಟಾಗ ಮಾತ್ರ ಮಾದಿಗ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು. 

ಮುಖಂಡ ಅದಲಗೆರೆ ಈಶ್ವರಯ್ಯ ಮಾತನಾಡಿ ಪ್ರತಿ ಗ್ರಾಮಗಳಲ್ಲಿ ಯುವ ಸಂಘಟನೆ ಸ್ಥಾಪನೆ ಯಾಗುವುದರಿಂದ ಜನಾಂಗಕ್ಕೆ ಆಗುವ ಅನ್ಯಾಯ ತಡೆದು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಹಕರಿಸಬಹುದು ಎಂದು ತಿಳಿಸಿದರು. 

ಇದನ್ನೂ ಓದಿ: Gubbi News: ಗುಬ್ಬಿ ಶಾಸಕರಿಗೆ ನೀರಿನ ಶಾಪ-ಮಂತ್ರಿಗಿರಿ ಕೈ ತಪ್ಪಿದೆ..! : ಎಸ್.ಡಿ.ದಿಲೀಪ್ ಕುಮಾರ್

ಕುಂದರನಹಳ್ಳಿ ನಟರಾಜ್ ಮಾತನಾಡಿ, ಸಮುದಾಯದ ಯುವಜನತೆ ಅಂಬೇಡ್ಕರ್ ಅವರ  ಶಿಕ್ಷಣ ಸಂಘಟನೆ ಹೋರಾಟ ಸಿದ್ಧಾಂತವನ್ನು ಪ್ರೇರಣೆ ಮಾಡಿಕೊಂಡು  ಧೈರ್ಯವಾಗಿ ಮುನ್ನುಗ್ಗಬೇಕು ಎಂದರು.

ಇದೇ ಸಂಧರ್ಭದಲ್ಲಿ ದಸಂಸ ಪದಾಧಿಕಾರಿಗಳಾದ  ಕಲ್ಲೂರು ರವಿಕುಮಾರ್, ಕೋಟೆ ಕಲ್ಲೇಶ್, ಡಿ ಎಂ ಲಕ್ಷ್ಮಣ್, ಗ್ಯಾರಹಳ್ಳಿ ಯೋಗೀಶ್, ಮಂಚಿಹಳ್ಳಿ ಶಿವಸ್ವಾಮಿ, ಆಟೋ ರಾಮು, ಚೇಳೂರು ಸೋಮಶೇಖರ್, ಮಾರಯ್ಯ, ಕುಮಾರಸ್ವಾಮಿ, ಶ್ರೀ ರಾಮ್, ಯೋಗೀಶ್, ಮಂಜುನಾಥ್, ಭರತ್, ಚಂದು, ನರಸಿಂಹಮೂರ್ತಿ, ಭಾಗ್ಯಮ್ಮ, ಚೈತ್ರ, ರೂಪ  ಸೇರಿದಂತೆ ಇನ್ನಿತರರು ಇದ್ದರು.