Gauribidanur News: ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ದಲಿತರ ಕುಂದುಕೊರತೆ ಸಭೆ
ತಾಲ್ಲೂಕಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಅಂಬೇಡ್ಕರ್ ಪುತ್ತಳಿ ನಿರ್ಮಿಸಬೇಕೆಂದು ದಲಿತ ಸಂಘಟನೆಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ, ಬರುವ ಏಪ್ರಿಲ್ 14 ರೊಳಗೆ ಪುತ್ತಳಿ ನಿರ್ಮಿಸದೆ ಹೋದರೆ, ಅಂದು ಕಪ್ಪುಪಟ್ಟಿ ಪ್ರದರ್ಶಿಸಲಾಗುವುದು ಹಾಗೂ ಕಾನೂನು ಚೌಕಟ್ಟಿನಲ್ಲಿ ನಾವೇ ಪುತ್ತಳಿ ನಿರ್ಮಿಸಿ, ಅನಾವರಣ ಗೊಳಿಸುತ್ತೇವೆ ಎಂದು ವಕೀಲ ಬಿ.ಕೆ.ನರಸಿಂಹ ಮೂರ್ತಿ ಎಚ್ಚರಿಕೆ ನೀಡಿದರು.
-
ಗೌರಿಬಿದನೂರು: ಪೊಲೀಸ್ ಇಲಾಖೆ ವತಿಯಿಂದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದುಕೊರತೆಗಳ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಉಪಸ್ಥಿತರಿದ್ದ ದಲಿತ ಮುಖಂಡ ಸಿ.ಜಿ.ಗಂಗಪ್ಪ ಮಾತನಾಡಿ, ತಾಲ್ಲೂಕಿನ ದಲಿತ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಇತ್ತೀಚೆಗೆ ಮದ್ಯ ಮತ್ತು ಹೆಂಡ ಎರಡನ್ನು ಕುಡಿದು ಸಾವನ್ನಪ್ಪುತ್ತಿರುವ ಘಟನೆಗಳು ಸಂಭವಿಸಿ, ಸಂಸಾರಗಳು ಬೀದಿಗೆ ಬರುತ್ತಿವೆ, ತಕ್ಷಣ ಹೆಂಡ ಉತ್ಪಾದನಾ ಘಟಕಗಳನ್ನು ಮುಚ್ಚಿಸಿ, ಮಧ್ಯ ಮಾರಾ ಟಕ್ಕೆ ಕಡಿವಾಣ ಹಾಕಬೇಕು ಹಾಗೂ ನಗರಗೆರೆ ಹೋಬಳಿಯ ಸಣ್ಣ ರಸ್ತೆಗಳಲ್ಲಿ ಟಿಪ್ಪರ್ ಗಳ ಓಡಾಟ ಹೆಚ್ಚಾಗಿದೆ, ಯಾವುದೇ ನಾಮಫಲಕಗಳಲ್ಲಿ, ರಸ್ತೆ ಉಬ್ಬುಗಳಲ್ಲಿ, ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ, ಎಲ್ಲದಕ್ಕೂ ಕಡಿವಾಣ ಹಾಕಬೇಕು ಎಂದು ದೂರಿದರು.
ಗ್ರಾಮಾಂತರ ಠಾಣೆಗೆ ಬಡ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರು ಬಂದು ದೂರು ನೀಡಿದಾಗ ಸಂಬಂಧಪಟ್ಟ ಸೆಕ್ಷನ್ ಗಳನ್ನು ಹಾಕದೆ, ಬೇರೆ ರೀತಿಯ ಸೆಕ್ಷನ್ ಗಳನ್ನು ಹಾಕಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಎಂದು ದಲಿತ ಮುಖಂಡ ಮತ್ತು ವಕೀಲ ಇಡಗೂರು ನರಸಿಂಹಮೂರ್ತಿ ಆರೋಪಿಸಿದರು.
ತಾಲ್ಲೂಕಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಅಂಬೇಡ್ಕರ್ ಪುತ್ತಳಿ ನಿರ್ಮಿಸಬೇಕೆಂದು ದಲಿತ ಸಂಘಟನೆಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ, ಬರುವ ಏಪ್ರಿಲ್ 14 ರೊಳಗೆ ಪುತ್ತಳಿ ನಿರ್ಮಿಸದೆ ಹೋದರೆ, ಅಂದು ಕಪ್ಪುಪಟ್ಟಿ ಪ್ರದರ್ಶಿಸಲಾಗುವುದು ಹಾಗೂ ಕಾನೂನು ಚೌಕಟ್ಟಿನಲ್ಲಿ ನಾವೇ ಪುತ್ತಳಿ ನಿರ್ಮಿಸಿ, ಅನಾವರಣ ಗೊಳಿಸುತ್ತೇವೆ ಎಂದು ವಕೀಲ ಬಿ.ಕೆ.ನರಸಿಂಹ ಮೂರ್ತಿ ಎಚ್ಚರಿಕೆ ನೀಡಿದರು.
ಹೊಸೂರು ನಿಂದ ಅಲ್ಲೀಪುರಕ್ಕೆ ತೆರಳುವ ರಸ್ತೆಯಲ್ಲಿ ಶಾಲೆ ಮತ್ತು ಅಂಗನವಾಡಿಗಳು ಇರುವ ಕಡೆ ಉಬ್ಬುಗಳಾಗಲಿ, ನಾಮಫಲಕಗಳನ್ನಾಗಲಿ ಅಳವಡಿಸಿಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ಬಾದಿಮರಳೂರು ಕೆರೆಯಲ್ಲಿ ಇಸ್ಪೀಟ್ ಆಡುತ್ತಾರೆ, ಪೊಲೀಸರು ಬಂದಾಗ ಮಾತ್ರ ನಿಲ್ಲಿಸುತ್ತಾರೆ, ಮತ್ತೆ ಮುಂದುವರೆಸುತ್ತಾರೆ, ಕೋಟಾಲದಿಣ್ಣೆ ಹೂವಿನ ಮಂಡಿ ಬಳಿ ವಾಹನ ದಟ್ಟಣೆ ಜಾಸ್ತಿಯಾಗಿದೆ ಎಂದು ದೂರಲಾಯಿತು.
ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ, ಮತ್ತು ಪೊಲೀಸ್ ಔಟ್ ಪೋಸ್ಟ್ ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ನಗರದ ರಿಂಗ್ ರೋಡ್ ಬಳಿ ಬೀದಿ ದೀಪಗಳಿಲ್ಲದೆ ಇರುವುದರಿಂದ ಸಂಜೆ ವೇಳೆ ರಸ್ತೆ ಬದಿ ಕುಡಿ ಯುವವರ ಹಾವಳಿ ಜಾಸ್ತಿಯಾಗಿದೆ ಹಾಗೂ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಇಂದಿಗೂ ಕ್ಷೌರಿಕರು ಕಟಿಂಗ್ ಮಾಡಲು ನಿರಾಕರಿಸುತ್ತಾರೆ, ದೇವಸ್ಥಾನಗಳಿಗೆ ಪ್ರವೇಶ ನೀಡುತ್ತಿಲ್ಲ, ಇವುಗಳನ್ನು ತಡೆಗಟ್ಟ ಬೇಕು ಎಂದು ದಲಿತ ಮುಖಂಡರು ತಮ್ಮ ಸಮಸ್ಯೆಗಳನ್ನು ಹೇಳಿದರು.
ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಗ್ರಾಮಾಂತರ ಠಾಣೆಯ ಪಿಎಸ್‌ಐ ರಮೇಶ್ ಗುಗ್ಗರಿ, ಅಪರಾಧ ವಿಭಾಗದ ಪಿಎಸ್‌ಐ ಮಮತಾ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಆರ್.ಸತ್ಯ ನಾರಾಯಣ, ಮುನಿಯಪ್ಪ, ಸನಂದ್ ಕುಮಾರ್, ಮಲ್ಲಸಂದ್ರ ಗಂಗಾಧರಪ್ಪ, ಕರೇತಿಮ್ಮಯ್ಯ, ನಾಗಾರ್ಜುನ, ಜಿ ಸೋಮಯ್ಯ, ಮಂಜುನಾಥ್, ಬಾಲಯ್ಯ, ಪ್ರಶಾಂತ್, ರಘು, ಗಂಗಾಧರ್, ನಾರಾಯಣ, ಗಂಗಾಧರಪ್ಪ, ಗೋಪಾಲ, ಕಿರಣ್, ಅಶ್ವಥ್ ನಾರಾಯಣ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.