ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗಂಗಾ ಕಲ್ಯಾಣ ಯೋಜನೆಯಲ್ಲಿ ರೈತರಿಗೆ ಪಂಪ್ ಮೋಟರುಗಳ ವಿತರಣೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಸುಮಾರು ಎಂಟು ಜನ ಫಲಾನುಭವಿಗಳಿಗೆ 2021-22ನೇ ಸಾಲಿಗೆ ಕೊಳವೆ ಬಾವಿ ಕೊರೆದಿರುವವರಿಗೆ  ಪಂಪು ಮೋಟಾರ್ ಹಾಗೂ ಕೇಬಲ್ ಅನ್ನು  ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಅವರ ನಿರ್ದೇಶನದ ಮೇರೆಗೆ ವಿತರಣೆ ಮಾಡಲಾಗಿದ್ದು,ರೈತರು ಇದನ್ನು ಸದುಪಯೋಗ ಪಡೆದುಕೊಂಡು ರೈತರ ಜೀವನದಲ್ಲಿ ಬೆಳಕಾಗಲಿ

ಜನ ಫಲಾನುಭವಿ ರೈತರಿಗೆ ಪಂಪ್ ಮೋಟರುಗಳ ವಿತರಣೆ

-

Ashok Nayak
Ashok Nayak Nov 28, 2025 8:21 PM

ಚಿಂತಾಮಣಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣಿ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಪಂಪ್ ಮತ್ತು ಇತರೆ ಸಾಮಗ್ರಿಗಳನ್ನು ೮ ಜನ ರೈತ ಫಲಾನುಭವಿಗಳಿಗೆ ಚಿಂತಾಮಣಿ ನಗರದ ಪಾಲಿಟೆಕ್ನಿಕ್ ಹಿಂಭಾಗ ಇರುವ ಮೈದಾನದಲ್ಲಿ ತಾಲ್ಲೂಕ್ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಆನಂದ್ ವಿತರಣೆ ಮಾಡಿದರು.

ಇದನ್ನೂ ಓದಿ: Chikkaballapur News: ಚದುರಂಗ ಆಡುವುದರಿಂದ ಆಲೋಚನಾ ಶಕ್ತಿ, ಏಕಾಗ್ರತೆ ಹೆಚ್ಚುತ್ತದೆ : ಸಿ.ಇ.ಒ ಡಾ. ವೈ.ನವೀನ್ ಭಟ್ ಚಾಲನೆ

ಈ ವೇಳೆ ಮಾತನಾಡಿದ ಆನಂದ್ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಸುಮಾರು ಎಂಟು ಜನ ಫಲಾನುಭವಿಗಳಿಗೆ 2021-22ನೇ ಸಾಲಿಗೆ ಕೊಳವೆ ಬಾವಿ ಕೊರೆದಿರುವವರಿಗೆ  ಪಂಪು ಮೋಟಾರ್ ಹಾಗೂ ಕೇಬಲ್ ಅನ್ನು  ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಅವರ ನಿರ್ದೇಶನದ ಮೇರೆಗೆ ವಿತರಣೆ ಮಾಡಲಾಗಿದ್ದು,ರೈತರು ಇದನ್ನು ಸದುಪಯೋಗ ಪಡೆದುಕೊಂಡು ರೈತರ ಜೀವನದಲ್ಲಿ ಬೆಳಕಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಿಗಮದ ಜಿಲ್ಲಾ ಮಟ್ಟದ ಅಧಿಕಾರಿ ಪ್ರಕಾಶ್,ಫಲಾನುಭವಿಗಳಾದ ಕದಿರಪ್ಪ, ಶಿವಶಂಕರಪ್ಪ,ತಿರುಮಲಮ್ಮ, ನಾರಾಯಣಸ್ವಾಮಿ,ಆಂಜಪ್ಪ,ಮುನಿ ನರಸಿಂಹಪ್ಪ, ಪಾಪಮ್ಮ, ನಾರಾಯಣಪ್ಪ ಇದ್ದರು.